Monday, October 2, 2023

Latest Posts

ನಾಂಪಲ್ಲಿ ವಸ್ತುಪ್ರದರ್ಶನ ಮೈದಾನದಲ್ಲಿ ಮೀನು ಪ್ರಸಾದ ವಿತರಣೆ, ಕ್ಯೂ ಕಟ್ಟಿದ ಜನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹೈದರಾಬಾದ್‌ನ ನಾಂಪಲ್ಲಿ ವಸ್ತುಪ್ರದರ್ಶನ ಮೈದಾನದಲ್ಲಿ ಮೀನು ಪ್ರಸಾದ ವಿತರಣೆ ಆರಂಭವಾಗಿದೆ. ಸಚಿವ ತಲಸಾನಿ ಶ್ರೀನಿವಾಸ್ ಯಾದವ್ ಮೀನು ಔಷಧ ವಿತರಣೆಗೆ ಚಾಲನೆ ನೀಡಿದರು. ಶುಕ್ರವಾರ ಮತ್ತು ಶನಿವಾರವೂ ಮೀನು ಪ್ರಸಾದ ವಿತರಣೆ ಮುಂದುವರಿಯಲಿದೆ. ವಿವಿಧ ರಾಜ್ಯಗಳಿಂದ ಅಸ್ತಮಾ ರೋಗಿಗಳು ಮೀನಿನ ಔಷಧಿಗಾಗಿ ಹೈದರಾಬಾದ್‌ಗೆ ಬರುತ್ತಾರೆ.

178 ವರ್ಷಗಳಿಂದ ಮೃಗಶಿರ ಕರ್ತೆ ದಿನದಂದು ಬತ್ತಿನ ಕುಟುಂಬಸ್ಥರು ಮೀನು ಪ್ರಸಾದ ವಿತರಿಸುತ್ತಿದ್ದಾರೆ. ತೆಲಂಗಾಣ ರಾಜ್ಯ ಸರ್ಕಾರ ಮೀನು ಪ್ರಸಾದ ವಿತರಣೆಗೆ ವಿಶೇಷ ವ್ಯವಸ್ಥೆ ಮಾಡಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮೀನಿನ ಔಷಧಿಗೆ ಹೆಚ್ಚು ಜನ ಬರುವ ಸಾಧ್ಯತೆ ಇದೆಯಂತೆ. ಅಸ್ತಮಾ ಪೀಡಿತರು ನಗರದ ನಾಂಪಲ್ಲಿ ವಸ್ತುಪ್ರದರ್ಶನ ಮೈದಾನಲ್ಲಿ ಕ್ಯೂ ಕಟ್ಟಿ ನಿಂತಿದ್ದಾರೆ. ನಾಂಪಲ್ಲಿ ವಸ್ತುಪ್ರದರ್ಶನ ಮೈದಾನದಲ್ಲಿ 18 ಸರತಿ ಸಾಲುಗಳು ಮತ್ತು 32 ಮೀನು ಔಷಧ ಕೌಂಟರ್‌ಗಳನ್ನು ಸ್ಥಾಪಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!