ಚಿತ್ರದುರ್ಗದಲ್ಲಿ ಜಿಲ್ಲಾಸ್ಪತ್ರೆ ಚಾವಣಿ ಕುಸಿತ: ರೋಗಿ ತಲೆ ಮೇಲೆ ಬಿದ್ದ ಸಿಮೆಂಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಚಿತ್ರದುರ್ಗದಲ್ಲಿ ಒಂದು ವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ  ನಗರದ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಅವಘಡವೊಂದು ಸಂಭವಿಸಿದೆ. ಹೌದು, ಆಸ್ಪತ್ರೆಯ ಛಾವಣಿಯಿಂದ ಸಿಮೆಂಟ್ ಕುಸಿದು ರೋಗಿಗಳಿದ್ದ ಬೆಡ್ ಮೇಲೆ ಬಿದ್ದಿದೆ.

ಛಾವಣಿಯಿಂದ ಸಿಮೆಂಟ್ ಕುಸಿದ ಪರಿಣಾಮ ಆಂಧ್ರಪ್ರದೇಶ ಮೂಲದ ಲಕ್ಷ್ಮಕ್ಕ ಎಂಬುವರ ತಲೆಗೆ ಪೆಟ್ಟಾಗಿದೆ. ಅದೃಷ್ಟವಶಾತ್‌ ಲಕ್ಷ್ಮಕ್ಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಛಾವಣಿ ಸಿಮೆಂಟ್ ಕುಸಿತದಿಂದ ಆಸ್ಪತ್ರೆಯಲ್ಲಿ ಕೆಲ ಹೊತ್ತು ಭೀತಿ ಸೃಷ್ಠಿಯಾಗಿತ್ತು. ಚಿತ್ರದುರ್ಗ ಜಿಲ್ಲಾಸ್ಪತ್ರೆಯ ಅಧಿಕಾರಿಗಳ ನಿರ್ಲಕ್ಷಕ್ಕೆ ರೋಗಿಗಳು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!