ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ಕೆಲವು ದಿನಗಳಿಂದ ರಾಜ್ಯದ ಹವಾಮಾನದಲ್ಲಿ ಹಠಾತ್ ವ್ಯತ್ಯಯಗಳು ಕಾಣಿಸಿಕೊಂಡಿದ್ದು, ಕೆಲವೆಡೆ ಭರ್ಜರಿ ಮಳೆ, ಕೆಲವೆಡೆ ನೆತ್ತಿ ಸುಡುವ ಬಿಸಿಲು ಜನತೆಯನ್ನು ಕಂಗಾಲಾಗಿಸುತ್ತಿದೆ.
ಬದಲಾಗಿರುವ ಹವಾಮಾನ ಹಲವು ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತಿದ್ದು, ಜ್ವರ, ನೆಗಡಿ, ಕೆಮ್ಮು, ಉಸಿರಾಟ ಸಮಸ್ಯೆ ಮೊದಲಾದ ಸಾಂಕ್ರಾಮಿಕ ರೋಗಗಳ ಅಟ್ಟಹಾಸ ನಿಧಾನವಾಗಿ ಹೆಚ್ಚುತ್ತಿದೆ. ಗ್ರಾಮೀಣ ಭಾಗಗಳಲ್ಲಿ ಈ ಕಾಯಿಲೆಗಳು ಎಲ್ಲರನ್ನು ಹೈರಾಣಾಗಿಸುತ್ತಿದ್ದು, ಕ್ಲಿನಿಕ್‌ಗಳು, ಆರೋಗ್ಯ ಕೇಂದ್ರಗಳ ಮುಂದೆ ರೋಗಿಗಳ ಸಾಲು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ.
ಹವಾಮಾನ ಬದಲಾಗುವ ಸಂದರ್ಭ ಕಾಡುವ ಈ ಎಲ್ಲಾ ಕಾಯಿಲೆಗಳು ಸಾಮಾನ್ಯವಾಗಿದ್ದರೂ, ಒಂದಷ್ಟು ದಿನ ಹೈರಾಣಾಗಿಸುವುದು ಸುಳ್ಳಲ್ಲ. ಈ ನಡುವೆ ಇದು ಒಬ್ಬರಿಂದ ಒನ್ನರಿಗೆ ಹರಡುವ ಹಿನ್ನೆಲೆಯಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಸಿಸಬೇಕು ಎಮದು ಆರೋಗ್ಯ ಇಲಾಖೆಯೂ ಜನತೆಗೆ ಕಿಮಾತು ಹೇಳಿದೆ.