ಏರ್ ಆಂಬ್ಯುಲೆನ್ಸ್ ಒಪ್ಪಂದಕ್ಕೆ ಭಾರತೀಯ ಸ್ಟಾರ್ಟ್ಅಪ್ ‘ಇಪ್ಲೇನ್’ ಸಹಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದಲ್ಲಿ ಏರ್ ಆಂಬುಲೆನ್ಸ್​ಗಳು ಬರುತ್ತಿವೆ. ಭಾರತದ ಎಲೆಕ್ಟ್ರಿಕ್ ವಿಮಾನ ತಯಾರಿಸುವ ಇಪ್ಲೇನ್ ಕಂಪನಿ ಏರ್ ಆಂಬುಲೆನ್ಸ್ ತಯಾರಿಸಲು ಒಂದು ಬಿಲಿಯನ್ ಡಾಲರ್ ಮೊತ್ತದ ಗುತ್ತಿಗೆ ಪಡೆದಿದೆ.

ಏರ್ ಆಂಬುಲೆನ್ಸ್ ಸರ್ವಿಸ್ ನೀಡುವ ಐಸಿಎಟಿಟಿ ಸಂಸ್ಥೆ ಈ ಗುತ್ತಿಗೆ ನೀಡಿದೆ. ದೇಶದ ಎಲ್ಲಾ ಜಿಲ್ಲೆಗಳಿಗೂ ಈ ಬ್ಯಾಟರಿ ಚಾಲಿತ ಪುಟ್ಟ ವೈಮಾನಿಕ ವಾಹನಗಳನ್ನು ನಿಯೋಜಿಸಬಹುದು.

ಇಪ್ಲೇನ್ ಕಂಪನಿಯ ಏರ್ ಆಂಬುಲೆನ್ಸ್ ವಾಹನವು ಒಂದು eVTOL (ಎಲೆಕ್ಟ್ರಿಕ್ ವರ್ಟಿಕಲ್ ಟೇಕಾಫ್ ಅಂಡ್ ಲ್ಯಾಂಡಿಂಗ್) ವಿಮಾನ. ಕಾಪ್ಟರ್ ಮತ್ತು ಡ್ರೋನ್ ಮಾದರಿಯಲ್ಲಿ ಇದು ಲಂಬವಾಗ ಮೇಲೇರಿ, ಲಂಬವಾಗಿಯೇ ಇಳಿಯಬಲ್ಲಂತಹ ವಾಹನ. ಈ ರೀತಿಯ ವಾಹನಗಳು ವಿಶ್ವದಲ್ಲಿ ಬೇರೆಲ್ಲೂ ನಿಯೋಜನೆಯಾಗಿಲ್ಲ. ಒಂದು ವೇಳೆ ಇಪ್ಲೇನ್ ಈ ವಾಹನಗಳನ್ನು ತಯಾರಿಸಿ ಕೊಟ್ಟಿದ್ದೆ ಆದಲ್ಲಿ ಹೊಸ ಇತಿಹಾಸ ಸೃಷ್ಟಿಸಿದಂತಾಗುತ್ತದೆ. ಭಾರತದಲ್ಲಿ ಮಾತ್ರವಲ್ಲ, ವಿಶ್ವದಲ್ಲೇ ಮೊದಲ ಏರ್ ಆಂಬುಲೆನ್ಸ್ ಇದಾಗಲಿದೆ.

ಈ ಪ್ರಯೋಗ ಯಶಸ್ವಿಯಾದಲ್ಲಿ ಮುಂದಿನ ದಿನಗಳಲ್ಲಿ ಭಾರತದಲ್ಲಿ ಏರ್ ಟ್ಯಾಕ್ಸಿ ಹಾರಾಡುವ ಪರ್ವ ಶುರುವಾಗಲಿದೆ. ವಿಶ್ವದಲ್ಲಿ ಹಲವು ಕಂಪನಿಗಳು ಇವಿಟಾಲ್ ಅಥವಾ ಎಲೆಕ್ಟ್ರಿಕ್ ವೈಮಾನಿಕ ವಾಹನಗಳನ್ನು ತಯಾರಿಸುತ್ತವೆ. ಆದರೆ, ಅವಿನ್ನೂ ಕೂಡ ಪ್ರಯೋಗ ಹಂತದಲ್ಲಿ ಇವೆ. ಭಾರತದಲ್ಲೂ ಇಪ್ಲೇನ್ ಕಂಪನಿ ಮಾತ್ರವಲ್ಲ, ಆರ್ಚರ್ ಏವಿಯೇಶನ್, ಸರಳಾ ಏವಿಯೇಶನ್ ಇತ್ಯಾದಿ ಕಂಪನಿಗಳೂ ಏರ್ ಟ್ಯಾಕ್ಸಿಗಳನ್ನು ತಯಾರಿಸಬಲ್ಲುವು.

ಇಪ್ಲೇನ್ ನೀಡಿರುವ ಮಾಹಿತಿ ಪ್ರಕಾರ 2026ರಲ್ಲಿ ಈ ಎಲೆಕ್ಟ್ರಿಕ್ ವೈಮಾನಿಕ ವಾಹನಗಳ ಕಮರ್ಷಿಯಲ್ ಬಳಕೆ ಶುರುವಾಗಬಹುದು. ವರ್ಷಕ್ಕೆ ನೂರು ವಾಹನಗಳನ್ನು ತಯಾರಿಸುವ ಸಾಮರ್ಥ್ಯ ಈ ಕಂಪನಿಗೆ ಇದೆ. ಏರ್ ಟ್ಯಾಕ್ಸಿಗಳಿಗೆ ಬೇಡಿಕೆ ಇದೆಯಾದರೂ ಮೊದಲಿಗೆ ಏರ್ ಆ್ಯಂಬುಲೆನ್ಸ್ ಪ್ರಯೋಗ ಉತ್ತಮ. ಅಗತ್ಯ ಬಿದ್ದರೆ ವರ್ಷಕ್ಕೆ ಹೆಚ್ಚೆಚ್ಚು ವಾಹನಗಳನ್ನು ತಯಾರಿಸುವ ಸಾಮರ್ಥ್ಯ ಹೆಚ್ಚಿಸಿಕೊಳ್ಳಬಹುದು ಎನ್ನುವುದು ಕಂಪನಿಯ ಅನಿಸಿಕೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!