Sunday, December 3, 2023

Latest Posts

ದೀಪಾವಳಿ ಐದು ದಿನಗಳ ಹಬ್ಬ: ಪ್ರತಿಯೊಂದು ದಿನದ ಮಹತ್ವ ತಿಳಿಯಿರಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೀಪಾವಳಿ, ಬೆಳಕಿನ ಹಬ್ಬವನ್ನು ಒಂದು ಅಥವಾ ಎರಡು ದಿನವಲ್ಲ ಐದು ದಿನಗಳ ಕಾಲ ಆಚರಿಸಲಾಗುತ್ತದೆ. ಅರ್ಥಾತ್ ಕಾರ್ತಿಕ ಮಾಸವು ದೀಪಾವಳಿಯ ಮರುದಿನದಿಂದ ಪ್ರಾರಂಭವಾಗುತ್ತದೆ, ಉತ್ತರ ಭಾರತದಲ್ಲಿ ಐದು ದಿನಗಳ ಕಾಲ ಈ ಹಬ್ಬವನ್ನು ಆಚರಿಸಲಾಗುತ್ತದೆ. ಪ್ರತಿಯೊಂದು ದಿನವೂ ತನ್ನದೇ ಆದ ವಿಶೇಷತೆಯನ್ನು ಹೊಂದಿದೆ.

ಕೆಡುಕಿನ ಮೇಲೆ ಒಳಿತಿನ ವಿಜಯದ ಸಂಕೇತ..ನರಕಾಸುರನ ಸಂಹಾರದಿಂದ ಸಂಕಷ್ಟಗಳು ದೂರವಾಗಿ ಆನಂದವು ತೆರೆದುಕೊಳ್ಳುವ ಈ ದೀಪಾವಳಿ ಹಬ್ಬಕ್ಕೆ ಪ್ರತಿ ಮನೆ, ಬೀದಿ, ದೇವಸ್ಥಾನಗಳಲ್ಲಿ ದೀಪಾಲಂಕಾರ. ಆಶ್ವಿಯುಜ ಬಹು ತ್ರಯೋದಶಿಯ ದಿನವು ಕಾರ್ತಿಕ ಶುದ್ಧ ವಿದ್ಯೆಯೊಂದಿಗೆ ಪ್ರಾರಂಭವಾಗಿ ಕೊನೆಗೊಳ್ಳುತ್ತದೆ. ಮೊದಲ ದಿನ ಧನ ತ್ರಯೋದಶಿ, ಎರಡನೇ ದಿನ ನರಕ ಚತುರ್ದಶಿ, ಮೂರನೇ ದಿನ ದೀಪಾವಳಿ, ನಾಲ್ಕನೇ ದಿನ ಗೋವರ್ಧನ ಪೂಜೆ, ಐದನೇ ದಿನ ಭಗನಿ ಹಸ್ತದ ಆಚರಣೆ ನಡೆಯುತ್ತದೆ.

ಮೊದಲ ದಿನ..ಧನ ತ್ರಯೋದಶಿ
ದೀಪಾವಳಿಯ ಮೊದಲ ದಿನ ಮನೆಯನ್ನು ಸ್ವಚ್ಛಗೊಳಿಸಿ ಮಾವಿನ ತೋರಣ ರಂಗವಲ್ಲಿಯಿಂದ ಮನೆಯನ್ನು ಸಿಂಗರಿಸಲಾಗುತ್ತದೆ.  ದೇವತೆಗಳು ಮತ್ತು ರಾಕ್ಷಸರು ಅಮೃತಕ್ಕಾಗಿ ಸಮುದ್ರ ಮಂಥನ ಮಾಡುವಾಗ ಆ ಕ್ಷೀರಸಾಗರದಿಂದ ಶ್ರೀ ಮಹಾಲಕ್ಷ್ಮಿಯು ಜನಿಸಿದಳು. ಈ ದಿನವನ್ನು ಲಕ್ಷ್ಮಿ ದೇವಿಯ ಜನ್ಮದಿನವೆಂದು ಹೇಳಲಾಗುತ್ತದೆ. ಈ ದಿನ ಯಾವ ವಸ್ತುವನ್ನು ಮನೆಗೆ ತಂದರೂ ಅದು ಹುಲುಸಾಗಿ ಬೆಳೆಯುತ್ತದೆ ಮತ್ತು ಎರಡು ಮೂರು ಪಟ್ಟು ಹೆಚ್ಚಾಗುತ್ತದೆ ಎಂಬ ನಂಬಿಕೆ ಇದೆ. ಇದು ಅಭಿವೃದ್ಧಿಯ ಆರಂಭ ಎಂದು ಹೇಳಲಾಗುತ್ತದೆ.

ಎರಡನೇ ದಿನ: ನರಕ ಚತುರ್ದಶಿ
ಅಶ್ವಯುಜ ಬಾಲ ಚತುರ್ದಶಿಯನ್ನು ನರಕ ಚತುರ್ದಶಿ ಎಂದು ಆಚರಿಸಲಾಗುತ್ತದೆ. ಕೃತಯುಗದಲ್ಲಿ ಹಿರಣ್ಯಾಕ್ಷನನ್ನು ಸಂಹರಿಸಿದ ವರಾಹಸ್ವಾಮಿಯ ಬೆವರ ಹನಿಯು ಭೂಮಿಯ ಮೇಲೆ ಬಿದ್ದು, ನರಕಾಸುರನ ಜನನವಾಗುತ್ತದೆ. ಈ ವೇಲೆ ನರಕಾಸುರನಿಗೆ ತನ್ನ ತಾಯಿ ಬೂದೇವಿ ಹೊರತಾಗಿ ಯಾರ ಕೈಯಿಂದಲೂ ಸಾವು ಸಂಭವಿಸದಂತೆ ವರ ಪಡೆಯುತ್ತಾನೆ. ಇದರೊಂದಿಗೆ ನರಕಾಸುರನ ಅರಾಜಕತೆಗೆ ಕೊನೆಯಿಲ್ಲದಂತಾಗಿ ಎಲ್ಲರನ್ನೂ ಹಿಂಸಿಸಲು ಶುರು ಮಾಡುತ್ತಾನೆ.

ದ್ವಾಪರಯುಗದಲ್ಲಿ ಭೂದೇವಿ ಸತ್ಯಭಾಮೆಯಾಗಿ, ಶ್ರೀಮಹಾವಿಷ್ಣು ಶ್ರೀಕೃಷ್ಣ ಅವತಾರದಲ್ಲಿ ಜನ್ಮ ತಾಳಿ, ನರಕಾಸುರನ ವಿರುದ್ಧ ಯುದ್ಧಕ್ಕೆ ಹೋಗುತ್ತಾರೆ. ನರಕನನ್ನು ಕೊಲ್ಲಲು ಸಾಧ್ಯವಿಲ್ಲ ಎಂದು ಕೃಷ್ಣನಿಗೆ ತಿಳಿದಿತ್ತು. ರಥದಲ್ಲೇ ಮೂರ್ಛೆ ಹೋದ ಕೃಷ್ಣನನ್ನು ಕಂಡು ಕೋಪಗೊಂಡ ಭೂಮಾತೆಯ ಅಂಶವಾದ ಸತ್ಯಭಾಮೆಯು, ನರಕಾಸುರನನ್ನು ಶಸ್ತ್ರಾಸ್ತ್ರಗಳಿಂದ ಹೋರಾಡಿ ಕೊಂದಳು. ಸತ್ಯ ತಿಳಿದ ಬಳಿಕ ಕುಪಿತಳಾದ ಸತ್ಯಭಾಮೆಯನ್ನು ಸಮಾಧಾನಪಡಿಸಲು ಕೃಷ್ನ ಪರಮಾತ್ಮ ಆಕೆಯ ಕೋರಿಕೆಯಂತೆ ಹೆಸರು ಶಾಶ್ವತವಾಗಿ ಉಳಿಯಲೆಂದು ನರಕ ಚತುರ್ಥಶಿ ವರವನ್ನು ನೀಡುತ್ತಾನೆ.

ಮೂರನೇ ದಿನ..ದೀಪಾವಳಿ ಆಚರಣೆ 
ಆಶ್ವಯುಜ ಮಾಸದ ಅಮವಾಸ್ಯೆಯ ದಿನದಂದು ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ. ಅಮಾವಾಸ್ಯೆಯಂದು ಸತ್ತ ಪಿತೃದೇವತೆಗಳಿಗೆ ತರ್ಪಣವನ್ನು ಅರ್ಪಿಸುವ ಪದ್ಧತಿ ಇದೆ. ಮಹಾಲಯ ಅಮಾವಾಸ್ಯೆಯಂದು ಸ್ವರ್ಗದಿಂದ ಭೂಮಿಗೆ ಬಂದ ಪಿತೃದೇವತೆಗಳು ದೀಪಾವಳಿಯ ದಿನದಂದು ದೀಪಾವಳಿಯ ಬೆಳಕಿನಲ್ಲಿ ಹಿಂತಿರುಗುತ್ತಾರೆ ಎಂದು ಹೇಳಲಾಗುತ್ತದೆ. ಆದುದರಿಂದಲೇ ಪಿತೃದೇವತೆಗಳಿಗೆ ಬೆಳಕು ತೋರಿಸಲು ಮನೆಯ ಹೊರಗೆ ದೀಪಗಳನ್ನು ಬೆಳಗಿಸಲಾಗುತ್ತದೆ. ನರಕಾಸುರನನ್ನು ಕೊಂದ ಮರುದಿನ ಅಮವಾಸ್ಯೆಯನ್ನು ದೀಪಾವಳಿ ಎಂದು ಆಚರಿಸಲಾಗುತ್ತದೆ. ಆ ದಿನ ಮನೆಯನ್ನು ದೀಪಗಳಿಂದ ಅಲಂಕರಿಸಲಾಗುತ್ತದೆ.

ನಾಲ್ಕನೇ ದಿನ..ಗೋವರ್ಧನ ಪೂಜೆ
ಗೋವರ್ಧನ ಗಿರಿ ಎಂದಾಕ್ಷಣ ನೆನಪಿಗೆ ಬರುವುದು ಶ್ರೀಕೃಷ್ಣ. ಕೃಷ್ಣ ಎಂದರೆ ದ್ವಾಪರ ಯುಗ. ಧಾರಾಕಾರವಾಗಿ ಮಳೆ ಸುರಿದು ಗೋಕುಲ ಮುಳುಗಡೆಯಾದಾಗ ಕೃಷ್ಣ ಗೋವರ್ಧನ ಗಿರಿಯನ್ನು ಎತ್ತಿ ಗೋಕುಲವನ್ನು ಉಳಿಸಿದ. ಆವತ್ತಿನಿಂದ ಗೂಪೂಜೆ ಹಾಗೂ ಗೋವರ್ಧನ ಪೂಜೆಯನ್ನು ಮಾಡಲಾಗುತ್ತದೆ. ಹಲವೆಡೆ ರೈತರು ಹಟ್ಟಿಹಬ್ಬವೆಂದೂ ಆಚರಿಸುತ್ತಾರೆ.

ಐದನೇ ದಿನ: ಭಗಿನಿ ಹಸ್ತ
ಕಾರ್ತಿಕ ಮಾಸದಲ್ಲಿ ಭಗಿನಿ ಹಸ್ತ ಭೋಜನ ಬಹಳ ವಿಶೇಷ. ಭಗಿನಿ ಎಂದರೆ ಸಹೋದರಿ. ಆಕೆ ನೀಡುವ ಆಹಾರವನ್ನು ಭಗಿನಿ ಹಸ್ತ ಆಹಾರ ಎಂದು ಕರೆಯಲಾಗುತ್ತದೆ. ಅಣ್ಣ ಅಥವಾ ಕಿರಿಯ ಸಹೋದರ ಸಹೋದರಿಯ ಕೈಯಿಂದ ಆಹಾರವನ್ನು ಸೇವಿಸಿದರೆ, ಮೃತ್ಯು ಭಯವು ದೂರವಾಗುತ್ತದೆ ಎಂದು ನಂಬಲಾಗಿದೆ.

ಈ ಚರಣೆಯ ಹಿಂದೆಯೂ ಒಂದು ಕತೆಯಿದೆ. ಸೂರ್ಯ ಭಗವಂತನ ಮಗ ಯಮ ಮತ್ತು ಅವನ ಸಹೋದರಿ ಯಮುನಾ. ಕಾರ್ತಿಕ ಶುಕ್ಲ ಪಕ್ಷ ದಿನದಂದು ತನ್ನ ಮನೆಗೆ ಬರುವಂತೆ ಯಮುನಾ ತನ್ನ ಸಹೋದರನನ್ನು ಆಹ್ವಾನಿಸುತ್ತಾಳೆ. ನನ್ನನ್ನು ಇದುವರೆಗೂ ಯಾರೂ ಮನೆಗೆ ಕರೆದಿಲ್ಲ. ನನ್ನ ತಂಗಿ ಕರೆದಿದ್ದಾಳೆ ಎಂದು ಬಹಳ ಸಂತೋಷದಿಂದ ಊಟಕ್ಕೆ ಹೋದನು. ಬಂದಿದ್ದ ಅಣ್ಣನನ್ನು ನೋಡಿ ಖುಷಿಯಿಂದ ಅಣ್ಣನ ತಲೆಗೆ ಸ್ನಾನ ಮಾಡಿಸಿ ಹೊಸ ಬಟ್ಟೆ ತೊಡಿಸಿ ಹಣೆಗೆ ತಿಲಕವಿಟ್ಟು ಪ್ರೀತಿಯಿಂದ ಅನ್ನವನ್ನು ಬಡಿಸುತ್ತಾಳೆ. ಊಟವಾದ ಬಳಿಕ ಸಂತೋಷಗೊಂಡ ಯಮ ವರ ಬೇಡೆಂದು ಹೇಳಿದಾಗ, ಯಮುನಾ ಪ್ರತಿ ವರ್ಷವೂ ತನ್ನ ಮನೆಗೆ ಬಂದು ಊಟವನ್ನು ಸ್ವೀಕರಿಸುವಂತೆ ಬೇಡಿಕೊಂಡಳು. ಅಂದಿನಿಂದ ಸಹೋದರಿ ಮತ್ತು ಸಹೋದರನ ಮಮತೆಗೆ ಸಂಬಂಧಿಸಿದಂತೆ ಈ ದಿನವನ್ನು ಆಚರಿಸಲಾಗುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!