ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಸ್ಟ್ರೇಲಿಯಾದಲ್ಲಿ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ನ್ಯೂ ಇಯರ್ ಸೆಲೆಬ್ರೇಷನ್ ಮಾಡಿದ್ದಾರೆ. ಇಬ್ಬರೂ ಪರಸ್ಪರ ಜೊತೆಗಿರುವ ಫೋಟೋ ಹಾಗೂ ಅವರು ಪಟಾಕಿಗಳನ್ನು ಒಳಗೊಂಡಿರುವ ಸುಂದರವಾದ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ವಿದೇಶದಲ್ಲಿಯೇ ಹೊಸ ವರ್ಷವನ್ನೂ ಸಕತ್ ಎಂಜಾಯ್ ಮಾಡಿರುವ ನಟಿ, ಹೊಸ ವರ್ಷಕ್ಕೆ ಶುಭಾಶಯವನ್ನು ಕೋರಿದ್ದು, ಅದರ ವಿಡಿಯೋ ಶೇರ್ ಮಾಡಿಕೊಂಡಿದ್ದು, ಇದರಲ್ಲಿ ಪಟಾಕಿಯ ಸದ್ದು ಮೊಳಗಿದೆ. ಆ ಪಟಾಕಿಯನ್ನು ನೋಡಿ ಸಂಭ್ರಮಿಸಿರುವ ನಟಿ, ಪತಿಯ ಜೊತೆಯಲ್ಲಿ ಹೊಸ ವರ್ಷಕ್ಕೆ ಶುಭಾಶಯ ಕೋರಿದ್ದಾರೆ.
ಇತ್ತ ನಟಿಯೇನೋ ಶುಭಾಶಯಕ್ಕೆ ನೆಟ್ಟಿಗರು ಮಾತ್ರ ಸಖತ್ ಆಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಅದಕ್ಕೆ ಕಾರಣ ದೀಪಾವಳಿ ಸಮಯಲ್ಲಿ ಸೋನಾಕ್ಷಿ ಮಾಡಿದ ಪೋಸ್ಟ್.
ಹೌದು ದೀಪಾವಳಿ ಸಮಯದಲ್ಲಿ ಸೋನಾಕ್ಷಿ ಅವರು ಪಟಾಕಿ ಬಗ್ಗೆ ಒಂದು ಪೋಸ್ಟ್ ಶೇರ್ ಮಾಡಿದ್ದರು. ಪಟಾಕಿಯಿಂದಾಗಿ ವಾತಾವರಣ ಹೀಗೆ ಆಗಿದೆ. ನಾನು ಇದೀಗ ಪಟಾಕಿ ಸಿಡಿಸಿದ ಜನರಲ್ಲಿ ಈ ಪ್ರಶ್ನೆ ಇಟುತ್ತಿದ್ದೇನೆ. ನೀವೇನು ಸ್ಟುಪಿಡ್ಸಾ? ಎಂದು ಪ್ರಶ್ನೆ ಇಟ್ಟಿದ್ದಾರೆ ಸೋನಾಕ್ಷಿ. ಅದೇ ಈಗ ಪೋಸ್ಟ್ ಇಟ್ಟುಕೊಂಡು ಸಖತ್ ಟ್ರೋಲ್ ಮಾಡುತ್ತಿದ್ದಾರೆ.
ಹೊಸ ವರ್ಷದಂದು ಪಟಾಕಿ ಸಿಡಿಸುವುದರಿಂದ ಮಾಲಿನ್ಯ ಹರಡುವುದಿಲ್ವಾ? ಎಂದು ನೆಟ್ಟಿಗರು ನಟಿಗೆ ಪ್ರಶ್ನೆ ಇಟ್ಟಿದ್ದಾರೆ. ದೀಪಾವಳಿ ಪಟಾಕಿ ಸ್ಟುಪಿಡ್ ಅಂತೆ!ಹಾಗಾದ್ರೆ ನ್ಯೂ ಇಯರ್ ಪಟಾಕಿ ಸೂಪರಾ? ಎಂದು ಕಮೆಂಟ್ ಮಾಡುತ್ತಿದ್ದಾರೆ ನೆಟ್ಟಿಗರು. ಈ ಬಗ್ಗೆ ನಟಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.