ಮುಖದ ಸುಕ್ಕು ನಿವಾರಿಸುವ ಈ ಕ್ರೀಮ್ ಅನ್ನು 5 ನಿಮಿಷದಲ್ಲಿ ನೀವೇ ತಯಾರಿಸಬಹುದು ನೋಡಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ವಯಸ್ಸಾಗುವುದು ಸಹ ಒಂದು ಸುಂದರವಾದ ಪ್ರಕ್ರಿಯೆ. ಆದರೆ ನೀವು ಕೆಲವು ಚರ್ಮದ ಸಮಸ್ಯೆಗಳನ್ನು ಸಹಿಸಿಕೊಳ್ಳಬೇಕಷ್ಟೆ. ವಿಶೇಷವಾಗಿ ಸುಕ್ಕುಗಳು, ಚರ್ಮ ಮೇಲಾಗುವ ಬದಲಾವಣೆಗಳನ್ನು ಒಪ್ಪಿಕೊಳ್ಳುವುದು ಅನೇಕರಿಗೆ ಕಷ್ಟಕರವಾಗಬಹುದು. ಆದಾಗ್ಯೂ, ಅದೇನು ನಿರ್ವಹಿಸಲಾಗದ ವಿಷಯವವೇನಲ್ಲ. ಮಾರುಕಟ್ಟೆಗಳಲ್ಲಿ ಲಭ್ಯವಿರುವ ಸುಕ್ಕು ನಿಯಂತ್ರಣ ಕ್ರೀಮ್‌ಗಳು ಮತ್ತು ಸೌಂದರ್ಯವರ್ಧಕಗಳಿಗೆ ಖರ್ಚು ಮಾಡುವುದಕ್ಕಿಂತ, ಭಾರತೀಯ ಆಯುರ್ವೇದದಲ್ಲಿ ಸೂಚಿಸಿದಂತೆ ನಮ್ಮ ಅಡುಗೆಮನೆಯಲ್ಲೇ ಲಭ್ಯವಾಗುವ ಈ ಪದಾರ್ಥಗಳನ್ನು ಬಳಸಿಕೊಂಡು ಕ್ರೀಮ್‌ ತಯಾರಿಸಿದರೆ ಸುಕ್ಕು ಸಮಸ್ಯೆಗೆ ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳಬಹುದು. ನೀವು ಅದನ್ನು ಹೇಗೆ ಮಾಡಬಹುದು ಎಂಬ ವಿವರಣೆ ಕೆಳಗಿದೆ ನೋಡಿ.

ಬೇಕಾಗುವ ಪದಾರ್ಥಗಳು:
2 ಚಮಚ ಬಾಳೆಹಣ್ಣಿನ ತಿರುಳು
¼ ಟೀಚಮಚ ತುಪ್ಪ
1 ಟೀಸ್ಪೂನ್ ಎಳ್ಳಿನ ಬೀಜಗಳ ಪುಡಿ
½ ಚಮಚ ಬಾದಾಮಿ ಹಾಲು
½ ಟೀ ಚಮಚ ಅಲೋವೆರಾ ಜ್ಯೂಸ್
1 ಬಾದಾಮಿ

ಮಾಡುವ ವಿಧಾನ:
ಬಾಳೆಹಣ್ಣಿನ ತಿರುಳು, ತುಪ್ಪ, ಎಳ್ಳಿನ ಪುಡಿ, ಬಾದಾಮಿ ಹಾಲು ಮತ್ತು ಅಲೋವೆರಾ ರಸವನ್ನು ತೆಗೆದುಕೊಳ್ಳಿ. ಒಂದು ಬಾದಾಮಿಯನ್ನು ನೀರಿನಲ್ಲಿ ಎರಡು ಗಂಟೆಗಳ ಕಾಲ ನೆನೆಸಿಡಿ. ಒಂದು ಟೇಬಲ್‌ ಸ್ಫೂನ್‌ ನಷ್ಟು ನೀರನ್ನು ಸೇರಿಸಿ, ಮತ್ತು ಅದು ಉತ್ತಮವಾಗಿ ಮಿಶ್ರಣ ಆಗುವಂತೆ  ಮಿಕ್ಸಿಯಲ್ಲಿ ಗ್ರೈಂಡ್‌ ಮಾಡಿ. ಅದನ್ನು ಫಿಲ್ಟರ್ ಮಾಡಿ ಮತ್ತು ಸಾಕಷ್ಟು ಕೆನೆಯಿರುವ  ಹಾಲು ಸೇರಿಸಿ ಅದನ್ನು ಮೃದುವಾದ ಪೇಸ್ಟ್ ಮಾಡಿಟ್ಟುಕೊಂಡು ವಾರಕ್ಕೊಮ್ಮೆ ಮಸಾಜ್ ಮಾಡಿ ಸುಕ್ಕು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ!.

ಸುಂದರ ಚರ್ಮವನ್ನು ಹೊಂದಲು ಜೀವನಶೈಲಿಯಲ್ಲಿ ಕೆಲ ಬದಲಾವನೆ ಮಾಡಿಕೊಳ್ಳಿ:
ಹಸಿರು ತರಕಾರಿಗಳನ್ನು ಸೇವಿಸಿ ಏಕೆಂದರೆ ಅವುಗಳು ಹೊಳೆಯುವ ಚರ್ಮ ಕಾಂತಿಯನ್ನು ನೀಡುತ್ತವೆ. ಕ್ಯಾರೆಟ್, ಮೂಲಂಗಿ ಮತ್ತು ಸೌತೆಕಾಯಿಗಳಂತಹ ತರಕಾರಿಗಳು ಚರ್ಮದ ಆರೋಗ್ಯ ಕಾಪಾಡಿಕೊಳ್ಳಲು ಪ್ರಯೋಜನಕಾರಿ. ವ್ಯಾಯಾಮವು ನಿಮ್ಮ ದೇಹವನ್ನು ಸಕ್ರಿಯವಾಗಿ ಇರಿಸುವ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ ಮತ್ತು ಚರ್ಮ ಆರೋಗ್ಯಕರ ಮತ್ತು ಹೊಳೆಯುವಂತೆ ಮಾಡಲು ನಿಮ್ಮ ಚಯಾಪಚಯವನ್ನು ಹೆಚ್ಚಿಸುತ್ತದೆ. ದೈನಂದಿನ ವ್ಯಾಯಾಮವು ನಿಮ್ಮ ಹೃದಯ ಮತ್ತು ಶ್ವಾಸಕೋಶಗಳಿಗೆ ಒಳ್ಳೆಯದು ಮಾತ್ರವಲ್ಲ, ಇದು ಸುಂದರವಾದ ಮತ್ತು ಹೊಳೆಯುವ ಚರ್ಮಕ್ಕೆ ಪ್ರಮುಖವಾಗಿದೆ.
ನಿಮ್ಮ ಚರ್ಮವನ್ನು ರಕ್ಷಿಸಇಕೊಳ್ಳಲು ಸಾಕಷ್ಟು ನೀರು ಕುಡಿಯಿರಿ. ಆಗಾಗ ಎಣ್ಣೆ ಮಸಾಜ್ ಮಾಡಿಕೊಳ್ಳಿ. ಏಕೆಂದರೆ ಇದು ನಿಮ್ಮ ಸ್ನಾಯುಗಳನ್ನು ವಿಶ್ರಾಂತಿ ಮಾಡಲು ಇದು ಸಹಾಯ ಮಾಡುತ್ತದೆ ಮತ್ತು ಅಂಗಾಂಶಗಳು ರಕ್ತದ ಹರಿವನ್ನು ಹೆಚ್ಚಿಸುತ್ತದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!