Tuesday, May 30, 2023

Latest Posts

ಸಿಎಂ ಸ್ಥಾನಕ್ಕೆ ಡಿ.ಕೆ ಶಿವಕುಮಾರ್ ಬಿಗಿ ಪಟ್ಟು: ಯಾವುದೇ ಷರತ್ತಿಗೂ ಮಣಿಯದ ಕನಕಪುರಬಂಡೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ದೆಹಲಿಯಲ್ಲಿ ರಾಜ್ಯ ಸಿಎಂ ಆಯ್ಕೆ ಕಸರತ್ತು ಜೋರಾಗಿ ನಡೆಯುತ್ತಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರೇಸ್ ನಲ್ಲಿರುವ ಡಿ.ಕೆ ಶಿವಕುಮಾರ್ ಅವರನ್ನು ಮನವೊಲಿಕೆಯಲ್ಲೂ ತೊಡಗಿದ್ದಾರೆ.

ಆದ್ರೇ ಮುಖ್ಯಮಂತ್ರಿ ಸ್ಥಾನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಿಗಿ ಪಟ್ಟು ಹಿಡಿದಿದ್ದು, ಯಾವುದೇ ಷರತ್ತಿಗೂ ಮಣಿದಿಲ್ಲ ಎಂಬುದಾಗಿ ಹೇಳಲಾಗುತ್ತಿದೆ.
ಯಾವುದೇ ಕಾರಣಕ್ಕೂ ಬೇರೆ ಹುದ್ದೆ ನನಗೆ ಬೇಡವೇ ಬೇಡ. ಸಿಎಂ ಸ್ಥಾನ ಕೊಡಿ ಇಲ್ಲವೇ ಬೇರೆ ಸ್ಥಾನ ಬೇಡವೇ ಬೇಡ. ಸರ್ಕಾರದಿಂದ ಹೊರಗಿರುವುದಾಗಿ ಡಿಕೆಶಿ ಬಿಗಿ ಪಟ್ಟು ಹಿಡಿದಿದ್ದಾರೆ ಎನ್ನಲಾಗುತ್ತಿದೆ.

ಈ ಹಿನ್ನೆಲೆ ಕಾಂಗ್ರೆಸ್ ಹೈಕಮಾಂಡ್ ಅವರನ್ನು ಮನವೊಲಿಸುವಂತ ಕಸರತ್ತಿನಲ್ಲಿ ತೊಡಗಿದ್ದಾರೆ. ಇದೇ ವೇಳೆ ಹೈಕಮಾಂಡ್ ಮುಂದಿಟ್ಟಂತ ಯಾವುದೇ ಷರತ್ತುಗಳಿಗು ಡಿಕೆಶಿ ಮಣಿದಿಲ್ಲ ಎಂದು ಹೇಳಲಾಗುತ್ತಿದೆ.

ಇದೇ ಸಂದರ್ಭದಲ್ಲಿ ಸಿದ್ಧರಾಮಯ್ಯ ಸಿಎಂ ಆಯ್ಕೆಯಾಗಿದ್ದಾರೆ. ಪ್ರಮಾಣವಚನ ಮಾತ್ರವೇ ಬಾಕಿ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.

ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಅವರು, ಮುಖ್ಯಮಂತ್ರಿ ಆಯ್ಕೆ ಫೈನಲ್ ಆಗಿಲ್ಲ. ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವಂತ ಸುದ್ದಿಗಳು ಸತ್ಯಕ್ಕೆ ದೂರವಾದವುಗಳು ಆಗಿದ್ದಾವೆ. ಮುಂದಿನ 48 ರಿಂದ 72 ಗಂಟೆಯಲ್ಲಿ ನೂತನ ಸಚಿವ ಸಂಪುಟ ರಚನೆಯಾಗಲಿದೆ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!