ಶಿವರಾಜ್ ಕುಮಾರ್ ಗೆ ಟಿಕೆಟ್ ಆಫರ್ ಕೊಟ್ಟ ಡಿಕೆ ಶಿವಕುಮಾರ್: ಇದಕ್ಕೆ ಸಖತ್ ರಿಯಾಕ್ಷನ್ ಕೊಟ್ರು ಹ್ಯಾಟ್ರಿಕ್ ಹೀರೋ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಸ್ಯಾಂಡಲ್‍ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗೆ (Shivaraj Kumar) ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಲೋಕಸಭೆ ಚುನಾವಣೆಗೆ ನಿಲ್ಲಲು ಆಫರ್ ಕೊಟ್ಟಿದ್ದಾರೆ.

ಇಂದು ಅರಮನೆ ಮೈದಾನದಲ್ಲಿ ಈಡಿಗರ (Ediga) ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಡಿಕೆಶಿಯವರು ನಟ ಶಿವಣ್ಣಗೆ ಈ ಆಫರ್ ನೀಡಿದ್ದಾರೆ. ಪಾರ್ಲಿಮೆಂಟಿಗೆ ರೆಡಿ ಆಗಿ ಅಂತ ನಾನು ಈಗಾಗಲೇ ಶಿವಣ್ಣಗೆ ಹೇಳಿದ್ದೇನೆ. ಆಗ ಅವರು, ಇಲ್ಲ ಒಂದು 5 ಚಿತ್ರ ಒಪ್ಪಿಕೊಂಡಿದ್ದೇನೆ ಅಂದ್ರು. ಚಿತ್ರ ಯಾವಾಗಾದ್ರೂ ಮಾಡಬಹುದು. ಆದರೆ ಪಾರ್ಲಿಮೆಂಟ್‍ಗೆ ಹೋಗುವ ಅವಕಾಶ ಎಲ್ಲರಿಗೂ ಸಿಗಲ್ಲ ಅಂತಾ ಹೇಳಿದ್ದೇನೆ ಎಂದು ಡಿಕೆಶಿ (DK Shivakumar) ತಿಳಿಸಿದರು.

ಲೋಕಸಭೆಯಲ್ಲಿ (Loksabha) ನಮಗೆ ಆಶೀರ್ವಾದ ಮಾಡುವ ಕೆಲಸ ನೀವು ಮಾಡಬೇಕು. ಮಂಗಳೂರು, ಉಡುಪಿ, ಉತ್ತರ ಕರ್ನಾಟಕ ಎಲ್ಲೆ ಇರ್ಲಿ ನಮ್ಮ ಅಭ್ಯರ್ಥಿ ಗೆಲ್ಲಿಸುವ ಕೆಲಸ ಮಾಡಿ ಎಂದರು.

ಮಂಗಳೂರು ಹೊರತುಪಡಿಸಿ ಇಡೀ ರಾಜ್ಯದ ಈಡಿಗ ಸಮುದಾಯ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದಿರಾ. ನಿಮಗೆ ಕೊಟ್ಟ ಮಾತನ್ನು ಪೂರೈಸುತ್ತೇವೆ. ಇಂದಿನ ಸಮಾವೇಶದಿಂದ ಕಾಂಗ್ರೆಸ್ ಸರ್ಕಾರ ನಿಮ್ಮ ಜೊತೆ ಇದ್ದೇವೆ ಅಂತಾ ತೋರಿಸಿದ್ದೀರಾ. ಯಾರು ನಮಗೆ ಸಹಾಯ ಮಾಡ್ತಾರೆ ಅವರಿಗೆ ಸಹಾಯ ಮಾಡೋದು ನಮ್ಮ ಸಿದ್ದಾಂತ. ನಿಮ್ಮ ಜೊತೆ ನಮ್ಮ ಸರ್ಕಾರ ಇದೆ ಎಂದರು.

ಆಫರ್ ಗೆ ನೋ ಎಂದ ಶಿವರಾಜ್ ಕುಮಾರ್
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಫರ್ ಗೆ ರಿಯಾಕ್ಷನ್ ಕೊಟ್ಟ ಶಿವರಾಜ್ ಕುಮಾರ್ , ನಾನು ಎಂದಿಗೂ ರಾಜಕಾರಣಕ್ಕೆ ಬರುವುದಿಲ್ಲ. ನಮ್ಮಪ್ಪ ನಮಗೆ ಬಣ್ಣ ಹಚ್ಚಿ ನಟನೆ ಮಾಡುವುದನ್ನು ಕಲಿಸಿದ್ದು, ಅದನ್ನೇ ನಾನು ಮುಂದುವರೆಸುತ್ತೇನೆ ಎಂದು ಹೇಳಿದ್ದಾರೆ.

ಈ ಪಾಲಿಟಿಕ್ಸ್ ನಮಗೆ ಬೇಡ. ಆದರೆ ರಾಜ್ಯ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಮಗಳು ನಮ್ಮನೆ ಸೊಸೆಯಾಗಿದ್ದಾರೆ. ಅವರು ಅಥವಾ ಅವರ ಮನೆಯವರು ಎಂದಿಗೂ ನಮ್ಮನ್ನು ರಾಜಕಾರಣಕ್ಕೆ ಬರುವಂತೆ ಕೇಳಿಲ್ಲ. ಗೀತಾ ಬೇಕಾದ್ರೆ ಪಾಲಿಟಿಕ್ಸ್ ಹೋಗ್ಲಿ. ಗೀತಾ ಅವರು ಚುನಾವಣೆಗೆ ನಿಲ್ಲುತ್ತಾರೆಂದರೆ ಅವರ ಹಿಂದೆ ನಾನು ನಿಂತು ಬೆಂಬಲ ಕೊಡುತ್ತೇನೆ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!