ನಿರ್ಮಲಾನಂದ ಶ್ರೀಗಳನ್ನು ಭೇಟಿಯಾಗಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಡಿಕೆಶಿ: ಮೈತ್ರಿ ನಾಯಕರು ಗರಂ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಆದಿಚುಂಚನಗಿರಿ ಮಠದ ನಿರ್ಮಲಾನಂದ ಶ್ರೀಗಳನ್ನು (Nirmalananda Swamiji) ಭೇಟಿಯಾಗಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ವಿರುದ್ಧ ಮೈತ್ರಿ ನಾಯಕರು ಕಿಡಿಕಾರಿದ್ದಾರೆ.

ಈ ವಿಚಾರವಾಗಿ ಸುದ್ದಿಗಾರರಿಗೆ ಉತ್ತರಿಸಿದ ಆರ್. ಅಶೋಕ್, ಡಿಕೆಶಿಗೆ ಸೋಲಿನ ಭಯವಿದೆ. ನಾವು ಇಲ್ಲಿಗೆ ಬಂದಿದ್ದನ್ನು ನೋಡಿದಾಗ ಅವರಿಗೆ ತಳಮಳ ಶುರುವಾಗಿದೆ. ಶ್ರೀಗಳ ಬಗ್ಗೆ ಮಾತನಾಡಲು ಡಿಕೆಶಿಗೆ ಯಾವುದೇ ನೈತಿಕತೆ ಇಲ್ಲ. ಸ್ವಾಮೀಜಿ ಬಗ್ಗೆ ಡಿಕೆಶಿ ಅಗೌರವವಾಗಿ ಮಾತಾಡಿದ್ದಾರೆ. ಸ್ವಾಮೀಜಿ ಬಗ್ಗೆ ಎಚ್ಚರಿಕೆಯಿಂದ ಮಾತನಾಡಬೇಕು ಎಂದರು.

ಡಿಕೆಶಿಗೆ ಕಷ್ಟ ಬಂದಾಗ, ಜೈಲಿಗೆ ಹೋಗಿ ಬಂದಾಗ ಸ್ವಾಮೀಜಿ ಸಂತೈಸಿದ್ರು. ಇದನ್ನ ಡಿಕೆಶಿ ಮರೆತಿದ್ದಾರಾ?. ಮಠವನ್ನ ರಾಜಕೀಯಕ್ಕೆ ಎಳೆದು ತಂದಿದ್ದು ಸರಿಯಲ್ಲ ಎಂದು ಅಶೋಕ್ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!