ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೊರಗೆ ಹೋಗುವಾಗ ಕಾರ್ ಅಥವಾ ಬಸ್ನ ಕಿಟಕಿಯಲ್ಲಿ ಕೈ ಹಾಕದಂತೆ ಮಕ್ಕಳಿಗೆ ಹೇಳಲಾಗುತ್ತದೆ. ಅದೇ ರೀತಿ ತಲೆಯನ್ನು ಯಾವ ಕಾರಣಕ್ಕೂ ಕಿಟಕಿಯಿಂದ ಹೊರಹಾಕಲು ಬಿಡುವುದಿಲ್ಲ ಆದರೆ ಇಲ್ಲೊಂದು ದುರಾದೃಷ್ಟಕರ ಘಟನೆ ನಡೆದಿದ್ದು, ಮಕ್ಕಳಿರುವವರು ಈ ಸುದ್ದಿಯನ್ನು ಓದಲೇಬೇಕಿದೆ.
ತೆಲಂಗಾಣದ ಸೂರ್ಯಪೇಟ್ನಲ್ಲಿ ಮದುವೆ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಒಂಬತ್ತು ವರ್ಷದ ಇಂದ್ರಜಾ ಕಾರ್ನ ಕಿಟಕಿಯಿಂದ ತಲೆ ಹೊರಗೆ ಹಾಕಿ ಮದುವೆಯನ್ನು ನೋಡುತ್ತಿದ್ದಳು.
ಕಾರ್ನ ಹಿಂಬದಿಯಲ್ಲಿ ಒಬ್ಬಳೇ ಇದ್ದ ಇಂದ್ರಜಾ ತಲೆ ಹೊರಗೆ ಹಾಕಿ ಡ್ಯಾನ್ಸ್ ವೀಕ್ಷಿಸುತ್ತಿದ್ದಳು. ಚಾಲಕ ತಿಳಿಯದೇ ಕೀಯಿಂದ ಬಟನ್ ಒತ್ತಿದ್ದು, ಕಿಟಕಿಗಳು ಏಕಾಏಕಿ ಹಾಕಿಕೊಂಡಿವೆ. ಕಿಟಕಿಯಲ್ಲಿ ಸಿಲುಕಿಹಾಕಿಕೊಂಡ ಇಂದ್ರಜಾ ಉಸಿರುಗಟ್ಟಿ ಮೃತಪಟ್ಟಿದ್ದಾರೆ.