July 26, 2026
Sunday, July 26, 2026
spot_img

ನಿದ್ರೆಗೆ ಜಾರುವ ಮುನ್ನ ಕೆಟ್ಟ ಆಲೋಚನೆಗಳು ಕಾಡುತ್ತಿವೆಯೇ? ಈ ರಹಸ್ಯ ತಿಳಿಯಿರಿ

ಹಗಲಿಡೀ ನಾನಾ ಕೆಲಸಗಳಲ್ಲಿ ಬ್ಯುಸಿಯಾಗಿರುವ ನಮ್ಮ ಮನಸ್ಸು, ರಾತ್ರಿ ಬೆಡ್‌ಗೆ ವಾಲುತಿದ್ದಂತೆಯೇ ಶಾಂತವಾಗುತ್ತದೆ. ಆದರೆ, ಇದೇ ವೇಳೆ ನಕಾರಾತ್ಮಕ ಅಥವಾ ಕೆಟ್ಟ ಆಲೋಚನೆಗಳು ಮೆದುಳನ್ನು ಆವರಿಸಿಕೊಳ್ಳಲು ಪ್ರಾರಂಭಿಸುತ್ತವೆ. ಇದಕ್ಕೆ ಹಲವು ಜೈವಿಕ ಮತ್ತು ಮಾನಸಿಕ ಕಾರಣಗಳಿವೆ.

ಮೆದುಳಿನ ನೈಸರ್ಗಿಕ ಪ್ರಕ್ರಿಯೆ ರಾತ್ರಿ ಸಮಯದಲ್ಲಿ ನಮ್ಮ ಮೆದುಳಿನಲ್ಲಿ ‘ಸೆರೊಟೋನಿನ್’ ಎಂಬ ಹ್ಯಾಪಿ ಹಾರ್ಮೋನ್ ಮಟ್ಟ ಕಡಿಮೆಯಾಗುತ್ತದೆ. ಇದರಿಂದ ಭಾವನೆಗಳನ್ನು ನಿಯಂತ್ರಿಸುವ ಮೆದುಳಿನ ಭಾಗದ ಕಾರ್ಯಕ್ಷಮತೆ ಕುಗ್ಗಿ, ಅತಿಯಾದ ಚಿಂತೆ ಹಾಗೂ ಆತಂಕ ಹೆಚ್ಚಾಗುತ್ತದೆ.

ಶಬ್ದವಿಲ್ಲದ ವಾತಾವರಣ ಮತ್ತು ಏಕಾಂತ ಹಗಲಿನಲ್ಲಿ ಗಮನ ಬೇರೆಡೆ ಸೆಳೆಯುವ ಅನೇಕ ವಿಷಯಗಳಿರುತ್ತವೆ. ಆದರೆ ರಾತ್ರಿಯ ನಿಶ್ಯಬ್ದತೆಯಲ್ಲಿ ಯಾವುದೇ ಗೊಂದಲಗಳಿಲ್ಲದಿರುವುದರಿಂದ, ಹಳೆಯ ಕಹಿ ನೆನಪುಗಳು, ಭವಿಷ್ಯದ ಭಯ ಹಾಗೂ ವಿಫಲತೆಗಳ ಯೋಚನೆ ಸುಲಭವಾಗಿ ದಾಳಿ ಮಾಡುತ್ತವೆ.

ಸುಸ್ತು ಮತ್ತು ಒತ್ತಡದ ಪ್ರಭಾವ ದಿನಪೂರ್ತಿ ದುಡಿದು ದೇಹ ಹಾಗೂ ಮನಸ್ಸು ಸುಸ್ತಾದಾಗ, ಮೆದುಳಿಗೆ ಸಕಾರಾತ್ಮಕವಾಗಿ ಯೋಚಿಸುವ ಶಕ್ತಿ ಕಡಿಮೆಯಾಗುತ್ತದೆ. ಪರಿಣಾಮವಾಗಿ, ಸಣ್ಣ ಸಣ್ಣ ವಿಚಾರಗಳೂ ದೊಡ್ಡ ಸಮಸ್ಯೆಯಾಗಿ ಕಾಣಿಸಲು ಶುರು ಮಾಡುತ್ತವೆ.

ಪರಿಹಾರವೇನು? ಮಲಗುವ ಒಂದು ಗಂಟೆ ಮುಂಚಿತವಾಗಿ ಮೊಬೈಲ್ ಮತ್ತು ಟಿವಿ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಿ. ಪುಸ್ತಕ ಓದುವುದು, ಪ್ರಾಣಾಯಾಮ ಮಾಡುವುದು ಅಥವಾ ಮೆದುಳಿಗೆ ಹಿತ ನೀಡುವ ಸಂಗೀತ ಆಲಿಸುವುದು ನಕಾರಾತ್ಮಕ ಆಲೋಚನೆಗಳನ್ನು ತಡೆದು ಸುಖ ನಿದ್ರೆಗೆ ಜಾರಲು ನೆರವಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !