ಹೊಸದಿಗಂತ ಡಿಜಿಟಲ್ ಡೆಸ್ಕ್:
ಅನೇಕ ಮಂದಿ ತೂಕ ಕಡಿಮೆ ಮಾಡಲು ಬೇರೆ ಬೇರೆ ಕ್ರಮಗಳಿಗೆ ಮೊರೆ ಹೋಗುತ್ತಾರೆ. ನಿಂಬೆ ಹಣ್ಣಿನೊಂದಿಗೆ ಜೇನು ತುಪ್ಪ ಬೆರೆಸಿ ಸೇವಿಸಿದರೆ ಬೊಜ್ಜು ಕಡಿಮೆಯಾಗಿ ತೂಕ ಇಳಿಕೆಯಾಗುತ್ತದೆ ಎಂಬ ಒಂದು ಬಲವಾದ ನಂಬಿಕೆಯಿದೆ.
ಬೆಳಗ್ಗೆ ನಿಂಬೆ ರಸ ಮತ್ತು ಜೇನುತುಪ್ಪವನ್ನು ಬೆಚ್ಚಗಿನ ನೀರಿನಲ್ಲಿ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು ಮತ್ತು ತೂಕ ಇಳಿಸಿಕೊಳ್ಳಬಹುದು ಎಂಬ ಭಾವನೆಯಿದೆ. ಆದರೆ ಖಾಲಿ ಹೊಟ್ಟೆಯಲ್ಲಿ ಜೇನುತುಪ್ಪವನ್ನು ಸೇವಿಸುವುದು ಖಂಡಿತಾ ಒಳ್ಳೆಯ ಕ್ರಮವಲ್ಲ.
ಜೇನುತುಪ್ಪವು ಹೆಚ್ಚಿನ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದ್ದು, ಸಕ್ಕರೆಗಿಂತ ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿದೆ. ಖಾಲಿ ಹೊಟ್ಟೆಯಲ್ಲಿ ಈ ಪಾನೀಯವನ್ನು ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣವು ವೇಗವಾಗಿ ಏರುತ್ತದೆ. ಹಾಗಾಗಿ ಖಾಲಿ ಹೊಟ್ಟೆಗೆ ಜೇನುತುಪ್ಪ ಅಷ್ಟೊಂದು ಉತ್ತಮವಲ್ಲ.