ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೆಗಾಸ್ಟಾರ್ ಚಿರಂಜೀವಿ ಈ ಹಿಂದೆ ಕ್ಯಾನ್ಸರ್ ಪೀಡಿತರಾಗಿದ್ದರು ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ನಡೆಯುತ್ತಿದ್ದು, ಈ ಬಗ್ಗೆ ಚಿರಂಜೀವಿ ಸ್ಪಷ್ಟನೆ ನೀಡಿದ್ದಾರೆ. ನಾನು ಎಂದಿಗೂ ಕ್ಯಾನ್ಸರ್ ಬಾಧಿತವಾಗಿಲ್ಲ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸುವ ಅಗತ್ಯದ ಬಗ್ಗೆ ಮಾತ್ರ ಮಾತನಾಡಿದ್ದಾರೆ ಎಂದರು. ಈ ಹಿಂದೆ ಪರೀಕ್ಷೆಗೆ ಒಳಪಡಿಸಿದಾಗ ನೆಗೆಟಿವ್ ಬಂದಿತ್ತು ಎಂದರು.
ನಾನು ಕ್ಯಾನ್ಸರ್ ಕೇಂದ್ರವನ್ನು ಉದ್ಘಾಟಿಸುವಾಗ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯತೆಯ ಬಗ್ಗೆ ಮಾತನಾಡಿದ್ದೆ. ನಿಯಮಿತವಾಗಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರೆ ಕ್ಯಾನ್ಸರ್ ಬರದಂತೆ ತಡೆಯಬಹುದು ಎಂದು ಹೇಳಿದ್ದೆ. ನಾನು ಅಲರ್ಟ್ ಆಗಿದ್ದೆ ಮತ್ತು ಕೊಲೊನ್ ಸ್ಕೋಪ್ ಪರೀಕ್ಷೆಯನ್ನು ತೆಗೆದುಕೊಂಡೆ. ಅದರಲ್ಲಿ ಕ್ಯಾನ್ಸರ್ ರಹಿತ ಪೊಲಿಪ್ಸ್ ಪತ್ತೆ ಮಾಡಿ ತೆಗೆದುಹಾಕಲಾಗಿತ್ತು. ಮೊದಲೇ ಪರೀಕ್ಷೆ ಮಾಡದಿದ್ದರೆ ಅದು ಕ್ಯಾನ್ಸರ್‌ಗೆ ಕಾರಣವಾಗುತ್ತುತ್ತು ಎಂದು ಮಾತ್ರ ಹೇಳಿದ್ದೆ. ಅದಕ್ಕೇ ಎಲ್ಲರೂ ಮುಂಜಾಗ್ರತೆ ವಹಿಸಿ ವೈದ್ಯಕೀಯ ಪರೀಕ್ಷೆ/ಸ್ಕ್ರೀನಿಂಗ್ ಮಾಡಿಸಿಕೊಳ್ಳಬೇಕು ಎಂಬ ಸಂದೇಶ ಕೊಟ್ಟಿದ್ದೆ ಅಷ್ಟೆ.
ಆದರೆ ಕೆಲವು ಮಾಧ್ಯಮ ಸಂಸ್ಥೆಗಳು ಇದನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ‘ನನಗೆ ಕ್ಯಾನ್ಸರ್ ಬಂದಿದೆ’ ಮತ್ತು ‘ಚಿಕಿತ್ಸೆಯಿಂದ ನಾನು ಬದುಕುಳಿದೆ’ ಎಂದು ಸ್ಕ್ರೋಲಿಂಗ್ ಮತ್ತು ವೆಬ್ ಲೇಖನಗಳನ್ನು ಪ್ರಾರಂಭಿಸಿದವು. ಇದರಿಂದ ಅನಗತ್ಯ ಗೊಂದಲ ಉಂಟಾಗಿ ಹಿತೈಷಿಗಳು ನನ್ನ ಆರೋಗ್ಯದ ಬಗ್ಗೆ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ಇದು ಅವರೆಲ್ಲರಿಗೂ ಸ್ಪಷ್ಟೀಕರಣ ಜೊತೆಗೆ ಪತ್ರಕರ್ತರಿಗೂ ಒಂದು ಮನವಿ. ವಿಷಯ ಅರ್ಥವಾಗದೆ ಅಸಂಬದ್ಧವಾಗಿ ಬರೆಯಬೇಡಿ. ಇದರಿಂದಾಗಿ ಅನೇಕರು ಭಯಭೀತರಾಗಿದ್ದಾರೆ ಮತ್ತು ಗಾಯಗೊಂಡಿದ್ದಾರೆ ಎಂದು ಚಿರಂಜೀವಿ ಟ್ವೀಟ್ ಮಾಡಿದ್ದಾರೆ.