ಹೊಸದಿಗಂತ ಡಿಜಿಟಲ್ ಡೆಸ್ಕ್:
ಇದೀಗ ಮಾವಿನ ಹಣ್ಣಿನ ಸೀಸನ್. ರುಚಿಕರವಾದ ಮಾವು ಅಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ವಿಟಮಿನ್ ಎ, ವಿಟಮಿನ್ ಡಿ, ವಿಟಮಿನ್ ಸಿ, ತಾಮ್ರ, ಫೋಲೇಟ್ ಮತ್ತು ಖನಿಜಗಳಿಂದ ಮಾವು ಸಮೃದ್ಧವಾಗಿರುತ್ತದೆ.
ಇದರಲ್ಲಿ ಹೆಚ್ಚಿನ ಪ್ರೊಟೀನ್ ಇದ್ದು ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಮಾವಿನ ಹಣ್ಣಿನಲ್ಲಿರುವ ನಾರಿನಂಶವು ಹೃದಯ ಸಂಬಂಧಿ ಸಮಸ್ಯೆಗಳನ್ನು ತಡೆಯುತ್ತದೆ.
ಮಾವು ಸೇವಿಸಿದ ಬಳಿಕ ಕೆಲ ಆಹಾರ ಸೇವನೆ ನಿಷಿದ್ದ ಯಾಕಂದರೆ, ಅದು ಆರೋಗ್ಯಕ್ಕೆ ಒಳ್ಳೆಯದಲ್ಲ. ಮಾವು ಸೇವನೆ ಬಳಿಕ ನೀರು ಕುಡಿಯಬಾರದು. ಕನಿಷ್ಠ ಅರ್ಧ ಗಂಟೆಯಾದರೂ ಕಾಯಬೇಕು. ಇಲ್ಲದಿದ್ದರೆ ಹೊಟ್ಟೆ ನೋವು ಬರುವ ಅಪಾಯವಿದೆ. ಜೊತೆಗೆ ಅಸಿಡೋಸಿಸ್ ಬೆಳವಣಿಗೆಯ ಅಪಾಯ ಹೆಚ್ಚು.
ಹಾಗೆ ಮಾವು ಮತ್ತು ಮೊಸರು ಒಟ್ಟಿಗೆ ಸೇವನೆ ಮಾಡಿದರೆ, ದೇಹದಲ್ಲಿ ಟಾಕ್ಸಿನ್ಗಳು ಉತ್ಪತ್ತಿಯಾಗುತ್ತವೆ. ಅನ್ನ ಹಾಗೂ ಹಾಗಲಕಾಯಿ ಕಾಂಬಿನೇಷನ್ ಆಹಾರ ಕೂಡ ಒಳ್ಳೆಯದಲ್ಲ ಒಂದು ವೇಳೆ ತಿಂದರೆ, ವಾಂತಿ ಉಂಟಾಗುತ್ತದೆ.