48 ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ನೀಚ ವೈದ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಚಿಕಿತ್ಸೆಗೆ ಬಂದ ಮಹಿಳೆಯರೊಂದಿಗೆ ವೈದ್ಯನೊಬ್ಬ ಅಶ್ಲೀಲವಾಗಿ ನಡೆದುಕೊಂಡಿದ್ದಾನೆ. ಮಹಿಳೆಯರು, ಮಕ್ಕಳು, ಗರ್ಭಿಣಿಯರು ಎನ್ನದೆ ಎಲ್ಲರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಇದೀಗ ಶಿಕ್ಷೆಗೆ ಗುರಿಯಾಗಿದ್ದಾನೆ. ಇದೀಗ ವೈದ್ಯನ ವಿರುದ್ಧ ಲಂಡನ್‌ನ ಗ್ಲಾಸ್ಗೋದ ಹೈಕೋರ್ಟ್ ಮುಂದಿನ ತಿಂಗಳು ಶಿಕ್ಷೆಯನ್ನು ಜಾರಿಮಾಡಲಿದೆ.

ಈ ನೀಚ ಕೃತ್ಯಕ್ಕೆ ಕೈ ಹಾಕಿದವ ಭಾರತೀಯ ಮೂಲದ ಡಾ.ಕೃಷ್ಣ ಸಿಂಗ್. ಹಲವು ವರ್ಷಗಳಿಂದ ಬ್ರಿಟನ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. 2018 ರಲ್ಲಿ ಮಹಿಳೆಯೊಬ್ಬರಿಗೆ ವೈದ್ಯಕೀಯ ಚಿಕಿತ್ಸೆ ನೀಡುವ ಸಲುವಾಗಿ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ಶುರುವಾಗುತ್ತಿದ್ದಂತೆ ವೈದ್ಯ ಮಾಡಿದ ಅಕ್ರಮಗಳು ಒಂದೊಂದಾಗಿ ಬೆಳಕಿಗೆ ಬಂದವು.

ವೈದ್ಯ ಕೃಷ್ಣ ಸಿಂಗ್ ಫೆಬ್ರವರಿ 1983 ರಿಂದ ಮೇ 2018 ರವರೆಗೆ 48 ಜನರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಕೃಷ್ಣ ಸಿಂಗ್ ಅವರಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದ ಐವತ್ತೊಂಬತ್ತು ಮಹಿಳೆಯರು ದೂರು ನೀಡಿದ್ದಾರೆ. ಪ್ರಕರಣದ ವಿಚಾರಣೆ ನಡೆಸಿದ ಗ್ಲಾಸ್ಗೋ ಹೈಕೋರ್ಟ್ 48 ಮಂದಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವುದಾಗಿ ಪರಿಗಣಿಸಿ ಶಿಕ್ಷೆ ವಿಧಿಸಲು ತೀರ್ಪು ಕಾಯ್ದಿರಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!