ವಿದೇಶಿ ಸರ್ಕಾರೇತರ ಸಂಸ್ಥೆಗಳಿಗೆ ಮಹಿಳಾ ಉದ್ಯೋಗಿಗಳನ್ನು ಕೆಲಸಕ್ಕೆ ನೇಮಿಸಬೇಡಿ: ತಾಲಿಬಾನ್‌ ಆದೇಶ

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಅಫ್ಘಾನಿಸ್ತಾನದ ಸ್ಥಳೀಯ ಹಾಗೂ ವಿದೇಶಿ ಸರ್ಕಾರೇತರ ಸಂಸ್ಥೆಗಳಿಗೆ (NGO) ಮಹಿಳಾ ಉದ್ಯೋಗಿಗಳನ್ನು ಕೆಲಸಕ್ಕೆ ನೇಮಿಸಿಕೊಳ್ಳದಂತೆ ತಾಲಿಬಾನ್ ಸರಕಾರ ಆದೇಶಿಸಿದೆ.

ಈಗಾಗಲೇ ಮಹಿಳೆಯರಿಗೆ ಇಸ್ಲಾಮಿಕ್‌ ವಸ್ತ್ರ ಸಂಹಿತೆ ಪಾಲಿಸುವಂತೆ ಸೂಚನೆ ನೀಡಲಾಗಿತ್ತು. ಆದರೆ ಈ ನಿಯಮವನ್ನು ಕೆಲವರು ಪಾಲಿಸದ ಕಾರಣ, ಮಹಿಳಾ ಉದ್ಯೋಗಿಗಳಿಗೆ ಕಚೇರಿಗಳಲ್ಲಿ ಕೆಲಸ ಮಾಡಲು ಅವಕಾಶ ನೀಡಬಾರದು ಎಂದು ತಾಲಿಬಾನ್‌ ಸೂಚಿಸಿದೆ.

ಈಗಾಗಲೇ ವಿಶ್ವವಿದ್ಯಾನಿಲಯಗಳಲ್ಲಿ ಮಹಿಳೆಯರಿಗೆ ಅವಕಾಶ ನೀಡಬಾರದು ಎಂದ ಬೆನ್ನಲ್ಲೇ ತಾಲಿಬಾನ್‌ ಮತ್ತೊಂದು ಆದೇಶ ಹೊರಡಿಸಿದೆ . ಅಫ್ಘಾನಿಸ್ತಾನದ ಮಹಿಳೆಯರು ನಿಷೇಧದ ವಿರುದ್ಧ ಪ್ರಮುಖ ನಗರಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!