ನಿಮ್ಮ ಚಿಕ್ಕಮಗಳೂರಿನ ಆಟ ಇಲ್ಲಿ ಆಡಲು ಬಂದ್ರೆ ಬಿಡಲ್ಲ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿರುದ್ಧ ಎಚ್.ಡಿ. ಕುಮಾರಸ್ವಾಮಿ ಗರಂ

ಹೊಸದಿಗಂತ ವರದಿ, ರಾಮನಗರ :

ನಿಮ್ಮ ಚಿಕ್ಕಮಗಳೂರಿನ ಆಟ ಇಲ್ಲಿ ಆಡಲು ಬಂದ್ರೆ ಬಿಡಲ್ಲ. ನಾನು ಕಲ್ಲಂಪಡಿಬಾಗ್ ಆತ್ಮಹತ್ಯೆ ಮಾಡಿಕೊಂಡಿದ್ದು ನಿಮ್ಮಂತಹವರಿಂದ ಎಂದು ಮಾಜಿಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಸಂತೋ‍ಷ್ ಬಾಬು ವಿರುದ್ಧ ಹರಿಹಾಯ್ದರು.
ಭಾನುವಾರ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಪಕ್ಷದ ಕಾರ್ಯಕರ್ತರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಸಂತೋ‍ಷ್ ಬಾಬು ಅವರ ವಿರುದ್ಧ ದೂರು ನೀಡಿದ ಸಂದರ್ಭದಲ್ಲಿ, ಕುಮಾರಸ್ವಾಮಿ ಅವರು ಪೋನಿನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಬಾಬು ಅವರಿಗೆ ತರಾಟೆಗೆ ತೆಗೆದುಕೊಂಡರು.
ಆ ಕುಟುಂಬವನ್ನ ಉಳಿಸಿದ್ದು ನಾನು ಅವತ್ತು. ಇಲ್ಲಿ ನನ್ನ ಕ್ಷೇತ್ರದಲ್ಲಿ ಬಂದು ನೀವೇನು ಸೆಕ್ಯೂರಿಟಿ ಕೊಡಬೇಕಿಲ್ಲ. ನೀವು ಪಕ್ಷಾತೀತವಾಗಿ ಕೆಲಸ ಮಾಡಿ ಎಂದು ತಿಳಿಸಿದರು.
ಕಾಂಗ್ರೆಸ್‌ ಪರವಾಗಿ ಕೆಲಸ ಮಾಡಬೇಡಿ. ನಾನು ವಿಧಾನಸಭೆಯಲ್ಲಿ ಪ್ರಶ್ನೆ ಮಾಡ್ತೇನೆ ಎಂದರು.
ಅಂಗಡಿಯಲ್ಲಿ ಡ್ರಿಂಕ್ಸ್ ಬಾಟೆಲ್ ಮಾರಾಟ ಮಾಡುತ್ತಿದ್ದ ಜೆಡಿಎಸ್ ಕಾರ್ಯಕರ್ತ ಲಕ್ಕೋಜನಹಳ್ಳಿ ಗ್ರಾಮದ ಪ್ರಸನ್ನ ಎಂಬುವರಿಂದ ಮಾರಾಟ. ಈ ಹಿನ್ನೆಲೆ ಕಳೆದ ದಿನ ಆತನನ್ನ ಅರೆಸ್ಟ್ ಮಾಡಿದ್ದ ರಾಮನಗರ ಗ್ರಾಮಾಂತರ ಪೊಲೀಸರು, ಆದರೆ ಕಾಂಗ್ರೆಸ್ ಕಾರ್ಯಕರ್ತರಿಗೆ ಸ್ಟೇಷನ್ ಬೇಲ್ ನೀಡಿರುವ ಬಗ್ಗೆ ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದರು.
ಬಿಡದಿಯ ಗಾಣಕಲ್ ನಲ್ಲಿ ಆಫ್ ಮರ್ಡರ್ ಆಗಿದೆ. ನಿಮ್ಮ ಇನ್ಸ್ಪೆಕ್ಟರ್ ಗೆ ಯೋಗ್ಯತೆ ಇಲ್ಲ, ಒಬ್ಬರನ್ನು ಬಂಧನ ಮಾಡಿಲ್ಲ. ಈ ಜಿಲ್ಲೆಯಲ್ಲಿ ಎಚ್ಚರಿಕೆಯಿಂದ ಕೆಲಸ ಮಾಡಿ. ನಾನು ಅಧಿಕಾರಿಗಳಿಗೆ ಗೌರವ ಕೊಡ್ತೇನೆ, ನೀವು ಹೀಗೆ ನಡೆದರೆ ಕನಕಪುರದವರ ತರಹ ಡೈಲಾಗ್ ಹೇಳ್ತೇನೆ ಎಂದರು.
ನೀವು ಎಲ್ಲಾ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡೋದನ್ನ ನಿಲ್ಲಿಸಿ. ಆಗ ನಿಮ್ಮನ್ನ ನಾನು ಮೆಚ್ಚುತ್ತೇನೆ. ಇಲ್ಲಿ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಪ್ರಶ್ನೆ ಇಲ್ಲ. ಜನರಿಗೆ ಒಳ್ಳೆಯದಾಗಬೇಕು ಅಷ್ಟೇ ಎಂದರು.
ಇವತ್ತು ಮದ್ಯದ ಬಾಟೆಲ್ ಮಾರಾಟ ಮಾಡ್ತಿರುವ ಎಲ್ಲಾ ಅಂಗಡಿಗಳನ್ನ ರೇಡ್ ಮಾಡ್ತೀರಾ, ನಿಮ್ಮ ಇಲಾಖೆಯ ಗೋವಿಂದರಾಜು 500 ಬಾಟೆಲ್ ಸಿಕ್ಕಿದವರನ್ನ ಸ್ಟೇಷನ್ ಬೇಲ್ ಕೊಟ್ಟು ಕಳುಹಿಸುತ್ತಾನೆ. 20 ಬಾಟೆಲ್ ಇಟ್ಟಿದ್ದ ರೈತರು ಹೊಲಗಳಲ್ಲಿ ಕೆಲಸ ಮಾಡಿ ಕುಡಿಯಲು ಇಟ್ಟುಕೊಂಡಿದ್ದ ಜೈಲಿಗೆ ಕಳುಹಿಸುತ್ತೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!