Monday, October 2, 2023

Latest Posts

ಜನವರಿಯಲ್ಲಿ ಹುಟ್ಟಿದವರಿಗೆ ಈ ಸ್ಪೆಷಲ್ ಗುಣವಿದೆಯಂತೆ, ಯಾವ ಗುಣ ಗೊತ್ತಾ?

ಪ್ರತಿ ತಿಂಗಳಲ್ಲಿ ಹುಟ್ಟಿದವರಿಗೂ ಅವರದ್ದೇ ಆದ ವಿಶೇಷ ಗುಣಗಳು ಇರುತ್ತವೆ. ಹುಟ್ಟಿದ ತಿಂಗಳ ಆಧಾರದ ಮೇಲೆ ಅವರ ಗುಣಗಳ ಬಗ್ಗೆ ಹೇಳಬಹುದು. ಕೆಲವೊಮ್ಮೆ ಇದು ತುಂಬಾನೇ ನಿಜ ಎನಿಸಬಹುದು, ಕೆಲವೊಮ್ಮೆ ಅರ್ಧಂಬರ್ಧ ಸತ್ಯ ಎನಿಸಬಹುದು. ಜನವರಿಯಲ್ಲಿ ಹುಟ್ಟಿದವರಿಗೆ ಯಾವ ಗುಣಗಳಿವೆ ನೋಡಿ..

  1. ಎಷ್ಟೇ ವಯಸ್ಸಾದರೂ ಇವರು ವಯಸ್ಸಾದವರಂತೆ ಕಾಣೋದೆ ಇಲ್ಲ, ಸದಾ ಯಂಗ್ ಆಗಿಯೇ ಕಾಣುತ್ತಾರೆ.
  2. ಇವರಿಗೆ ಪ್ರೀತಿ ಹೇಳಿಕೊಳ್ಳೋದು ತುಂಬಾ ಕಷ್ಟ. ಪ್ರೀತಿಸುತ್ತಾರೆ ಆದರೆ ಬಾಯಿ ಬಿಟ್ಟು ಹೇಳೋದಿಲ್ಲ.
  3. ಇವರಿಗೆ ಜೋಕ್ಸ್ ಮಾಡೋದು ಅಂದ್ರೆ ತುಂಬಾ ಇಷ್ಟ, ಸಿಲ್ಲಿಯಾದ ಜೋಕ್ ಮಾಡಿದ್ರೂ ಸುತ್ತ ಮುತ್ತ ಇರುವವರನ್ನು ಸದಾ ನಗಿಸ್ತಾರೆ.
  4. ಇವರನ್ನು ಇಷ್ಟಪಡದೆ ಇರೋಕೆ ಸಾಧ್ಯವಿಲ್ಲ. ಎಲ್ಲರಿಗೂ ಇವರು ಇಷ್ಟ. ಇವರನ್ನು ಯಾರೂ ಹೇಟ್ ಮಾಡೋದಿಲ್ಲ.
  5. ತಮಗೆ ಬಂದ ಸಮಸ್ಯೆಗಳನ್ನು ಬೇರೆಯವರಿಗೆ ಇವರು ಹೇಳೋದಿಲ್ಲ. ನೋವು ತನಗೆ, ಖುಷಿ ಮಾತ್ರ ಹಂಚೋಕೆ ಅನ್ನೋ ಭಾವನೆ ಇವರದ್ದು.
  6. ಕೂಲ್ ಹಾಗೂ ಕಂಪೋಸ್ ಆಗಿ ಇರುತ್ತಾರೆ. ಯಾವುದಕ್ಕೂ ಭಯ ಬೀಳೋದಿಲ್ಲ.
  7. ತಮ್ಮ ಸಂಗಾತಿ ತಮ್ಮನ್ನ ಅರ್ಥಮಾಡಿಕೊಳ್ಳಬೇಕು ಎಂದು ಇವರು ಬಯಸುತ್ತಾರೆ. ಆದರೆ ಏನನ್ನೂ ಬಾಯಿಬಿಟ್ಟು ಹೇಳೋದಿಲ್ಲ.
  8. ಲೀಡರ್ ಆಗುವ ಗುಣ ಇವರಲ್ಲಿದೆ. ಜೀವನವನ್ನ ವಿಭಿನ್ನವಾಗಿ ನೋಡ್ತಾರೆ.
  9. ಇವರಿಗೆ ಬೇಗ ಕೋಪ ಬರುತ್ತದೆ. ಹಾಗೆ ಬೇಗ ಇಳಿದು ಹೋಗುತ್ತದೆ. ಸಿಟ್ಟಿನಲ್ಲಿ ಸಿಕ್ಕದ್ದು ಮಾತನಾಡಿ ಆಮೇಲೆ ಕ್ಷಮೆ ಕೇಳ್ತಾರೆ.
  10. ಇವರು ಒಂಥರಾ ನಿಗೂಢ ವ್ಯಕ್ತಿಗಳು. ಇವರನ್ನು ಅರ್ಥ ಮಾಡಿಕೊಳ್ಳೋಕೆ ಮತ್ತೊಂದು ಜನ್ಮ ಬೇಕು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!