ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಆಫ್ರಿಕಾ ಹಾಗೂ ಭಾರತ ನಡುವಿನ ಮೂರನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟ ಆರಂಭವಾಗಿದೆ.
ಕೋಹ್ಲಿ ಪಡೆ ಎರಡನೇ ಇನ್ನಿಂಗ್ಸ್‌ನಲ್ಲಿ 189 ರನ್ ಗಳಿಸಿದ್ದು, ದಕ್ಷಿಣ ಆಫ್ರಿಕಾಗೆ ಗೆಲ್ಲಲು 212 ರನ್‌ಗಳ ಗುರಿ ನೀಡಿದೆ.
ಮೂರನೇ ದಿನದಾಟದ ಅಂತ್ಯಕ್ಕೆ ದ.ಆಫ್ರಿಕಾ ಎರಡು ವಿಕೆಟ್ ನಷ್ಟಕ್ಕೆ 101 ರನ್ ಗಳಿಸಿದೆ. ಭಾರತಕ್ಕೆ ಇಂದು ಗೆಲುವು ಸಾಧಿಸಲು 8 ವಿಕೆಟ್‌ಗಳ ಅವಶ್ಯ ಇದೆ. ದ.ಆಫ್ರಿಕಾಗೆ ಗೆಲುವು ಸಾಧಿಸಲು 111 ರನ್‌ಗಳು ಬೇಕಿದೆ. ಇಂದು ಭಾರತದ ಗೆಲುವು ಬೌಲರ್‌ಗಳ ಮೇಲೆ ನಿರ್ಧರಿತವಾಗಿದೆ. ಅವರಿಂದ ಉತ್ತಮ ಪ್ರದರ್ಶನ ಬಂದರೆ ಗೆಲುವು ಖಚಿತ.