ಕೋಮಲವಾದ ಪಾದಗಳಿಗಾಗಿ ಹೀಗೆ ಮಾಡಿ ಬೆಸ್ಟ್‌ ರಿಸಲ್ಟ್‌ ಪಡೆಯಿರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಳೆಗಾಲ ಮತ್ತು ಚಳಿಗಾಲದಲ್ಲಿ ಪಾದಗಳ ಆರೈಕೆಯತ್ತ ಗಮನಹರಿಸುವ ಅಗತ್ಯ ಹೆಚ್ಚಾಗಿದೆ. ಮಹಿಳೆಯರು ಮನೆಕೆಲಸ ಮತ್ತು ನೀರಿನಲ್ಲಿ ಅಲೆದಾಡುವುದರಿಂದ ಪಾದದಲ್ಲಿ ಹೆಚ್ಚು ಬಿರುಕು ಉಂಟಾಗುತ್ತವೆ. ಇದು ಅಸಮರ್ಪಕ ರಕ್ತ ಪರಿಚಲನೆಗೆ ಕೂಡ ಕಾರಣವಾಗಬಹುದು. ಕೊಳಕು ಹಾಗೂ ಸತ್ತ ಜೀವಕೋಶಗಳು ಪಾದಗಳ ಹಿಂಭಾಗದಲ್ಲಿ ಸ್ಥಾನ ಪಡೆಯುತ್ತವೆ.

ಹಾಗಾಗಿ ರಾತ್ರಿ ಮಲಗುವ ಮುನ್ನ, ನಿಮ್ಮ ಪಾದಗಳನ್ನು ಸ್ವಚ್ಛವಾಗಿಡಲು ಮಾಯಿಶ್ಚರೈಸರ್ ಕ್ರೀಮ್‌ಗಳನ್ನು ಹಚ್ಚಿ. ವ್ಯಾಸಲಿನ್‌ ಅಲ್ಲಿ ನಿಂಬೆ ರಸವನ್ನು ಸೇರಿಸಿ ಪಾದಗಳಿಗೆ ಹಚ್ಚಿದರೆ ಉತ್ತಮ ಫಲಿತಾಂಶ ಸಿಗುತ್ತದೆ. ಪ್ರತಿದಿನ ನಿಮ್ಮ ಪಾದಗಳನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಎತ್ತರದ ಹಿಮ್ಮಡಿಯ ಪಾದರಕ್ಷೆಗಳನ್ನು ಬಳಸುವ ಅಭ್ಯಾಸವಿರುವವರು ಅವುಗಳನ್ನು ಹೆಚ್ಚಾಗಿ ಬಳಸಬೇಡಿ.  ಮಳೆಗಾಲದಲ್ಲಿ ಪಾದ ನೆನೆಯುವುದರಿಂದ ಇನ್ಪೆಕ್ಷನ್‌ನಿಂದಾಗಿ ತುರಿಕೆ ಉಂಟಾಗಬಹುದು. ಆಗ ಈರುಳ್ಳಿ ತಿರುಳನ್ನು ಹಚ್ಚುವುದರಿಂದ ತ್ವರಿತ ಪರಿಹಾರ ಸಿಗುತ್ತದೆ.

ಒಂದು ಬಟ್ಟಲಿನಲ್ಲಿ ಅರ್ಧ ಚಮಚ ಅರಿಶಿನ, ಅರ್ಧ ಕಪ್ ಹಸಿ ತೆಂಗಿನ ತುರಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಪಾದಗಳಿಗೆ ಮಸಾಜ್ ಮಾಡಿ. ಅರ್ಧ ಗಂಟೆಯ ನಂತರ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ ಪಾದಗಳು ಮೃದುವಾಗುತ್ತದೆ. ತೆಂಗಿನೆಣ್ಣೆಯಿಂದ ಪಾದಗಳನ್ನು ಆಗಾಗ್ಗೆ ಮಸಾಜ್ ಮಾಡುವುದರಿಂದ ಪಾದದ ಅಡಿಭಾಗವು ಮೃದುವಾಗುತ್ತದೆ.  ಕಡಲೆಹಿಟ್ಟು, ಹುಳಿಯಾಗಿರುವ ಮೊಸರು ಮತ್ತು ಅರಿಶಿನವನ್ನು ಬೆರೆಸಿ ಪಾದಗಳಿಗೆ ಹಚ್ಚಿ. ಆರಿದ ನಂತರ ಗಟ್ಟಿಯಾಗಿ ಉಜ್ಜಿದರೆ ಸತ್ತ ಜೀವಕೋಶಗಳು ನಿವಾರಣೆಯಾಗುತ್ತವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!