ವಿದ್ಯುತ್ ಕಡಿತದಿಂದ ಬಳ್ಳಾರಿಯ ವಿಮ್ಸ್ ನಲ್ಲಿ ಸಾವು ಸಂಭವಿಸಿಲ್ಲ: ಆರೋಗ್ಯ ಸಚಿವ ಡಾ.ಸುಧಾಕರ್

ಹೊಸದಿಗಂತ ವರದಿ, ಬಳ್ಳಾರಿ:
ವಿದ್ಯುತ್ ಕಡಿತದಿಂದ ಬಳ್ಳಾರಿಯ ವಿಮ್ಸ್ ನಲ್ಲಿ ಸಾವು ಸಂಭವಿಸಿಲ್ಲ, ಮೃತಪಟ್ಟವರು ನಾನಾ ಖಾಯಿಲೆಯಿಂದ ಬಳಲುತ್ತಿದ್ದರು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರು ಹೇಳಿದರು.
ನಗರದ ವಿಮ್ಸ್ ಸಭಾಂಗಣದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಢಿಯಲ್ಲಿ ಮಾತನಾಡಿದ ಅವರು, ವಿಮ್ಸ್ ಆಸ್ಪತ್ರೆಗೆ ಭೇಟಿ‌ ನೀಡಿ, ಪರಿಶೀಲಿಸಿರುವೆ, ಆಸ್ಪತ್ರೆಯ ನಾನಾ ವಾರ್ಡ್ ಗಳಿಗೂ ಭೇಟಿ‌ ನೀಡಿ ಪರಿಶೀಲಿಸಿರುವೆ, ಅಧಿಕಾರಿಗಳೊಂದಿಗೆ ಇತ್ತೀಚೆಗೆ ನಡೆದ ಘಟನೆ ಕುರಿತು ಪೂರಕ ಮಾಹಿತಿ ಪಡೆದಿರುವೆ. ಆದರೇ,ವಿದ್ಯುತ್ ಕಡಿತಗೊಂಡು ಐಸಿಯು ವಾರ್ಡ್ ನಲ್ಲಿ ಸಾವು ಸಂಭವಿಸಿಲ್ಲ, ಮಹೊಳೆಯೋಬ್ಬರು ವಿಷಪೂರಿತ ಹಾವು ಕಚ್ಚಿ ಚಿಕಿತ್ಸೆ ಪಡೆಯುತ್ತಿದ್ದರು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ, ಇನ್ನೋಬ್ಬರು ಮೃತಪಟ್ಟಿದ್ದಾರೆ. ಇದನ್ನೇ ವಿದ್ಯುತ್ ಕಡಿತ, ವಿಮ್ಸ್ ನಿರ್ದೇಶಕರ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಬ್ಬರಲ್ಲ, ಐವರು ಮೃತಪಟ್ಟಿದ್ದಾರೆ ಎಂದು ಇಲ್ಲಿನ ಕಾಂಗ್ರೆಸ್ ನಾಯಕರು ಸುಳ್ಳು ಆರೋಪ ಮಾಡುತ್ತಿದ್ದಾರೆ. ಆದರೂ, ಕರ್ತವ್ಯ ನಿರತ ವೈದ್ಯರು ಹಾಗೂ ಸಿಬ್ಬಂದಿಗಳು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು, ನಿರ್ಲಜ್ಷ ವಹಿಸಿದರೇ ಸುಮ್ಮನಿರೋಲ್ಲ ಎಂದು ಖಡಕ್ ಸೂಚನೆ ನೀಡಿರುವೆ ಎಂದರು.
ವಿಮ್ಸ್ ನಿರ್ದೇಶಕ ಡಾ.ಗಂಗಾದರ್ ಗೌಡ ಅವರನ್ನು ನೇಕ ಮಾಡಿದ್ದು, ನಾನಲ್ಲ, ಅದಕ್ಕೇ ಆದ ಸಮೀತಿಯೊಂದಿದೆ, ಸಮೀತಿ ಸದಸ್ಯರು ಆಯ್ಕೆ ಮಾಡಿ, ನೇಮಕ ಮಾಡಿದ್ದಾರೆ, ಇದರಲ್ಲಿ ಅನುಮಾನವಿದೆ, ನಿರ್ದೇಶಕರು ಈ ಸ್ಥಾನಕ್ಕೆ ಅನಫಿಟ್ ಅನ್ನೋದು ತಪ್ಪು ಎಂದು ಆಕ್ರೋಶ ವ್ಯಕ್ತಪಡಿಸಿದರು. ರೋಗಿಗಳ ಸಾವಿನ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ, ಸಾವಿನ ಹಿಂದೆ ಷಡ್ಯಂತ್ರ ನಡೆದಿದೆ ಎನ್ನುವುದು ತಪ್ಪು, ವಿದ್ಯುತ್ ಕಡಿತದಿಂದಲೇ ಐಸಿಯು ನಲ್ಲಿ ರೋಗಿಗಳು ಮೃತಪಟ್ಟಿದ್ದಾರೆ ಎನ್ನುವುದು ಸರಿಯಲ್ಲ, ಹಾಗಿದ್ದರೇ ಅದೇ ವೇಳೆಯಲ್ಲಿ ಸುಮಾರು ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದರು, ಅವರಿಗೂ ತೊಂದರೆಯಾಗಬೇಕಿತ್ತು, ವಿದ್ಯುತ್ ಕಡಿತಗೊಂಡಾಗ ಜನರೇಟರ್ ವ್ಯವಸ್ಥೆ ಇದ್ದೇ ಇರಲಿದೆ, ಘಟನೆ ಕುರಿತು ನೇಮಿಸಿದ ತನಿಖಾ ತಂಡದವರು ಜೆಸ್ಕಾಂ ಅಧಿಕಾರಿಗಳ ನೆರವು ಕೋರಿದ್ದಾರೆ, ಈ ಹಿನ್ನೆಲೆಯಲ್ಲಿ ಜೆಸ್ಕಾಂ ಇಲಾಖೆಯ ಅಧಿಕಾರಿಯನ್ನು ನೇಮಕ ಮಾಡಲಾಗಿದೆ, ಶೀಘ್ರದಲ್ಲೇ ವರದಿ ಕೈ ಸೇರಲಿದೆ. ತಪ್ಪು ಮಾಡಿರುವುದು ಕಂಡು ಬಂದಲ್ಲಿ ಯಾರನ್ನು ರಕ್ಷಣೆ ಮಾಡುವ ಪ್ರಮೆಯವೇ ಇಲ್ಲ, ಮುಲಾಜಿಲ್ಲದೇ ಕ್ರಮಕೈಗೊಳ್ಳಲಾಗುವುವುದು ಎಂದರು. ಈ ಸಂದರ್ಭದಲ್ಲಿ ಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರಿರಾಮುಲು ಇತರರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!