Sunday, October 1, 2023

Latest Posts

ಗಣೇಶ ಚತುರ್ಥಿಯಂದು ಜಿಯೋ ಏರ್‌ಫೈಬರ್ ಸೇವೆ ಅರಂಭ: ಮುಕೇಶ್‌ ಅಂಬಾನಿ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಗಣೇಶ ಚತುರ್ಥಿ‌ ಹಬ್ಬದಂದು ಜಿಯೋ ಏರ್‌ಫೈಬರ್ ಸೇವೆಯನ್ನು ಆರಂಭಿಸಲಾಗುವುದು ಎಂದು ರಿಲಯನ್ಸ್ ಸಂಸ್ಥೆಯ ಮುಖ್ಯಸ್ಥ ಮುಕೇಶ್ ಅಂಬಾನಿ ಘೋಷಿಸಿದ್ದಾರೆ.

ರಿಲಯನ್ಸ್ ಇಂಡಸ್ಟ್ರೀಸ್‌ನ 4ನೇ ವಾರ್ಷಿಕ ಸಾಮಾನ್ಯ ಸಭೆಯು ಇಂದು ನಡೆಯಿತು. ಈ ಸಭೆಯಲ್ಲಿ ಮುಕೇಶ್ ಅಂಬಾನಿ ಮಾತನಾಡಿ,
ಸೆಪ್ಟೆಂಬರ್ 19ರಂದು ಗಣೇಶ ಚತುರ್ಥಿಯ ಸಂದರ್ಭದಲ್ಲಿ ರಿಲಯನ್ಸ್ ಜಿಯೋ ದಿಂದ ಜಿಯೋ ಏರ್‌ಫೈಬರ್ ಸೇವೆಯನ್ನು ಆರಂಭಿಸಲಾಗುವುದು ಎಂದು ಹೇಳಿದರು.

ಜಿಯೋ ಏರ್‌ಫೈಬರ್ ಸೇವೆ ಮೂಲಕ ಕಂಪನಿಯು ದಿನಕ್ಕೆ 1,50,000 ಸಂಪರ್ಕಗಳನ್ನು ಒದಗಿಸಲು ಯೋಜಿಸಿದೆ. ಜಿಯೋ ನೆಟ್‌ವರ್ಕ್ ಅನ್ನು 200 ಮಿಲಿಯನ್ ಬಳಕೆದಾರರಿಗೆ ವಿಸ್ತರಿಸುವುದಾಗಿ ಕಂಪನಿ ಹೇಳಿದೆ.

ಕಂಪನಿಯು ಸುಮಾರು 10 ಮಿಲಿಯನ್ ಜಿಯೋಫೈಬರ್ ಗ್ರಾಹಕರನ್ನು ಹೊಂದಿದೆ. ನೆಟ್‌ವರ್ಕ್ 1.5 ಮಿಲಿಯನ್ ಕಿಮೀಗಳಲ್ಲಿ ಹರಡಿದೆ ಎಂದು ತಿಳಿಸಿದೆ.

ಜಿಯೋ ಏರ್‌ಫೈಬರ್ ಎಂದರೇನು?

ಯಾವುದೇ ತಂತಿಗಳನ್ನು ಬಳಸದೆಯೇ ಹೆಚ್ಚಿನ ವೇಗದ ಇಂಟರ್ನೆಟ್ ಸೇವೆ ಒದಗಿಸುವ ವ್ಯವಸ್ಥೆಯೇ ಜಿಯೋ ಏರ್‌ಫೈಬರ್.

ಜಿಯೋ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಡೇಟಾದ ಪ್ರಕಾರ, ಜಿಯೋ ಏರ್‌ಫೈಬರ್ ಅನ್ನು ಆಯ್ಕೆ ಮಾಡಬಹುದು ಮತ್ತು ಅದನ್ನು ಬಳಕೆ ಮಾಡಬಹುದು. ಈ ಮೂಲಕ ಬಳಕೆದಾರರು ತಮ್ಮ ಮನೆಯಲ್ಲಿ ತಮ್ಮದೇ ಆದ ವೈ-ಫೈ ಹಾಟ್‌ಸ್ಪಾಟ್ ಅನ್ನು ಹೊಂದಬಹುದು.

ಅಲ್ಲದೆ ಟ್ರೂ 5ಜಿ ಬಳಸಿಕೊಂಡು ಅಲ್ಟ್ರಾ-ಹೈ-ಸ್ಪೀಡ್ ಇಂಟರ್ನೆಟ್‌ ಗೆ ಕೂಡ ಸಂಪರ್ಕ ಪಡೆಯಬಹುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!