ಒಳ್ಳೆ ಊಟದ ನಂತರ ಸಿಹಿ, ತಿಂಡಿ ನಂತರ ಸಿಹಿ, ಮತ್ತೆ ರಾತ್ರಿ ಊಟ ಆದಮೇಲೂ ಸಿಹಿ. ಮಧ್ಯೆ ಮಧ್ಯೆ ಕೂಡ ಸಿಹಿತಿಂಡಿಗಳನ್ನು ತಿನ್ನೋಣ ಎನಿಸುತ್ತದೆ. ಒಂದು ಟೀ ಕುಡಿದರೆ ಅಥವಾ, ಪುಟ್ಟ ಕಡ್ಲೆಮಿಠಾಯಿ ತಿಂದರೂ ಈ ಸ್ವೀಟ್ ಕ್ರೇವಿಂಗ್ಸ್ ಹೋಗುತ್ತದೆ. ಈ ರೀತಿ ಸಿಹಿ ತಿನ್ನೋಕೆ ಆಸೆ ಆಗೋದಕ್ಕೂ ನಿಮ್ಮ ಆರೋಗ್ಯಕ್ಕೂ ಸಂಬಂಧ ಖಂಡಿತಾ ಇದೆ.
ಬ್ಲಡ್ ಗ್ಲೂಕೋಸ್ ಲೆವೆಲ್‌ನಲ್ಲಿ ಹೆಚ್ಚು ಕಡಿಮೆಯಾದಾಗ ಹೆಚ್ಚು ಸಿಹಿ ತಿನ್ನುವ ಆಸೆ ಆಗುತ್ತದೆ. ಸಿಹಿ ತಿಂದ ತಕ್ಷಣ ನಿಮ್ಮ ಎನರ್ಜಿ ಲೆವೆಲ್ ಹೆಚ್ಚಾಗುತ್ತದೆ. ಹಾಗಾಗಿ ಸಿಹಿ ಬೇಕು ಎಂದು ನಿಮ್ಮ ಮೆದುಳು ಹೇಳುತ್ತದೆ. ಇದಿಷ್ಟೇ ಅಲ್ಲ, ಇನ್ನೂ ಹೆಚ್ಚು ಕಾರಣಗಳಿವೆ.
- ಮಾನಸಿಕ ಒತ್ತಡ ಅಥವಾ ಎಮೋಷನಲ್ ಸ್ಟ್ರೆಸ್
- ಕೆಲವು ಮೆಡಿಸಿನ್ ತೆಗೆದುಕೊಳ್ಳುವವರಿಗೆ ಸಿಹಿ ತಿನ್ನಬೇಕು ಎನಿಸುತ್ತದೆ.
- ಹಾರ್ಮೋನ್ ಇಂಬ್ಯಾಲೆನ್ಸ್
- ಪಿರಿಯಡ್ಸ್ ಸರಿಯಾಗಿ ಆಗದೇ ಇರುವುದು, ಪ್ರೆಗ್ನೆನ್ಸಿ ಸಮಯದಲ್ಲಿ ಕ್ರೇವಿಂಗ್ಸ್ ಹೆಚ್ಚು
- ಆಹಾರಕ್ಕೆ ಸಂಬಂಧಿಸಿದ ಸಮಸ್ಯೆಗಳಿದ್ದರೆ, ಖಿನ್ನತೆಯಿಂದ ಬಳಲುತ್ತಿದ್ದರೆ ಸಿಹಿ ತಿನ್ನುವ ಆಸೆ ಆಗುತ್ತದೆ.