HEALTH| ಪ್ರತಿದಿನ ಪರೋಟ ತಿನ್ನುತ್ತೀರಾ? ಅಪಾಯ ಕಟ್ಟಿಟ್ಟ ಬುತ್ತಿ

 ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಆಹಾರ ಸೇವನೆ ವಿಚಾರದಲ್ಲಿ ತಿಳಿದೋ ತಿಳಿಯದೆಯೋ ಕೆಲವು ತಪ್ಪುಗಳನ್ನು ಮಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಚಪಾತಿ ಬದಲು ಪರೋಟವನ್ನೇ ತಿನ್ನುವವರು ಹೆಚ್ಚು. ಅದು ಮೈದಾದಿಂದ ತಯಾರು ಮಾಡುತ್ತಾರೆ ಬೇಗ ಜೀರ್ಣವಾಗುವುದಿಲ್ಲ ಎಂದು ತಿಳಿದರೂ ಹಲವರು ಅದನ್ನೇ ಹೆಚ್ಚು ತಿನ್ನುತ್ತಾರೆ.

ಉತ್ತರ ಭಾರತಕ್ಕಿಂತ ದಕ್ಷಿಣ ಭಾರತದ ಅನೇಕ ಹೋಟೆಲ್‌ಗಳಲ್ಲಿ ಪರೋಟಾ ಇದ್ದೇ ಇರುತ್ತದೆ. ಮನುಷ್ಯರಿಗೆ ಮಧುಮೇಹ ಉಂಟಾಗುವ ಶೇ.70 ರಷ್ಟು ಪೋಷಕಾಂಶಗಳು ಪರೋಟಾದಲ್ಲಿದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ. ಅದರ ಹೊರತಾಗಿ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಹೆಚ್ಚಿಸಿ ಕಿಡ್ನಿಯನ್ನು ಹಾಳು ಮಾಡುವ ಪರೋಟಾಗಳನ್ನು ಸೇವಿಸದಿರುವುದು ಉತ್ತಮ. ಇದು ಕ್ಯಾನ್ಸರ್‌ಗೂ ಕಾರಣವಾಗುತ್ತದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.

ಮೈದಾ ಹಿಟ್ಟಿನ ತಯಾರಿಕೆಯಲ್ಲಿ ಬಳಸುವ ಬ್ರೋಮೈಟ್ ದೇಹಕ್ಕೆ ತುಂಬಾ ಹಾನಿಕಾರಕವಾಗಿದೆ. ಗೋಡೆಗಳ ಮೇಲೆ ಪೋಸ್ಟರ್ ಅಂಟಿಸಲು ಬಳಸುವ ಹಿಟ್ಟು ಒಂದು ರೀತಿಯ ನಿಧಾನ ವಿಷ ಎಂದು ಹೇಳಬಹುದು. ಕೆಲವು ಕ್ರಿಮಿಗಳು ಮೈದಾ ತಿಂದರೆ ಪ್ರಾಣ ಕಳೆದುಕೊಳ್ಳುತ್ತವೆ ಅಂದರೆ ಮೈದಾ ತಿಂದರೆ ಅದರಿಂದಾಗುವ ಹಾನಿಯ ಮಟ್ಟವನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಆದಷ್ಟು ಮೈದಾದಿಂದ ತಯಾಋು ಮಾಡುವ ಆಹಾರಗಳಿಂದ ದೂರವಿರಿವುದು ಉತ್ತಮ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!