MUST READ | ಅವರಿವರ ಜೀವನದ ಜೊತೆ ಕಂಪೇರ್ ಮಾಡ್ತಾ, ಮಾಡ್ತಾ ನಿಮ್ಮ ಲೈಫ್ ಬಗ್ಗೆ ಮರೆತೇಹೋದ್ರಾ?

ಮೇಘನಾ ಶೆಟ್ಟಿ, ಶಿವಮೊಗ್ಗ

ಎಲ್ಲಾ ಒಕೆ, ಆದ್ರೆ ನಾನು ಸ್ವಲ್ಪ ದಪ್ಪ ಆಗಬೇಕು, ಸೀರೆ ಉಟ್ರೆ ಚೆನ್ನಾಗಿ ಕಾಣೋ ಥರ, ನನ್ನ ಕ್ಲಾಸ್‌ಮೇಟ್ ಇದಾಳಲ ಆ ಸೈಝ್!

ಮುಖ ತೊಳೆದ್ರೂ, ತೊಳಿದೇ ಇದ್ರೂ ಬೆಳ್ಳಗೆ ಕಾಣ್ಬೇಕಪ, ನನ್ನ ಅಣ್ಣನ ಥರ, ಆ ಥರದ ಕ್ರೀಂ ಇದ್ರೆ ಹೇಳ್ತೀರಾ?

ಸದ್ಯಕ್ಕೆ ಅರವತ್ ಸಾವಿರ ಸಂಬಳ ಬರ‍್ತಾ ಇದೆ, ಆದ್ರೆ ನನ್ ಜ್ಯೂನಿಯರ್‌ಗೆ ತೊಂಬತ್ ಸಾವಿರ ಸಂಬಳ ಅವನಷ್ಟ್ ಬಂದ್ರೆ ಸಾಕು ಸೆಟಲ್ ಆಗ್ಬಿಡ್ತೀನಿ…

5 Reasons You Should Stop Comparing Yourself to Others - Goalcastಉಫ್! ಇದೆಲ್ಲಾ ನಮ್ಮ ಮಾತಲ್ಲ, ನಿಮ್ಮದೇ ಮಾತುಗಳು, ಯಾವುದೇ ಸಂದರ್ಭದಲ್ಲಿ, ಯಾವುದೋ ಪರಿಸ್ಥಿತಿಯಲ್ಲಿ ನಿಮ್ಮ ಸಮಾನ ಮನಸ್ಕರನ್ನು ಕಂಡು ನನ್ನ ಜೀವನ ಕೂಡ ಹೀಗೆ ಇರಬೇಕಿತ್ತು. ಹಾಗಿದ್ದಾಗ ಮಾತ್ರ ನಾನು ಖುಷಿಯಾಗಿರೋಕೆ ಸಾಧ್ಯ ಅಂತೆಲ್ಲಾ ಅಂದುಕೊಂಡಿಲ್ವಾ? ಸತ್ಯ ಹೇಳಿ, ಬಾಯ್ಬಿಟ್ಟು ಹೇಳದಿದ್ರು ಮನಸಲ್ಲಿ ಪ್ರತಿ ದಿನ ಒಬ್ಬರ ಜೀವನಕ್ಕೆ ನಿಮ್ಮ ಜೀವನವನ್ನು ಕಂಪೇರ್ ಮಾಡಿಯೇ ಇರ‍್ತೀರಿ. ಹಾಗಂತ ನಿಮ್ಮ ಜೀವನ ಚೆನ್ನಾಗಿಲ್ಲ ಅಂಥಲ್ಲ, ಅವರ ಥರ ಇದ್ದಿದ್ರೆ ಇನ್ನೂ ಚೆನ್ನಾಗಿ ಇರ‍್ತಿತ್ತು ಅಲ್ವಾ?

Jitsi vs Zoom: Video Conferencing Tools Comparisonಸೆಲೆಬ್ರಿಟಿ ರೀತಿ ಬಾಡಿ ಬೇಕು – ಅವರ ಥರ ತಿನ್ನೋಕೆ, ವರ್ಕೌಟ್ ಮಾಡೋಕೆ ರೆಡಿ ಇದ್ದೀರಾ?, ಲಕ್ಷ ಲಕ್ಷ ಸಂಬಳ ಬೇಕು – ಅವರ ಥರ ನಾನಾ ಕೋರ್ಸ್ ಮಾಡುತ್ತಾ, ನಿದ್ದೆಗೆಟ್ಟು ಓದುತ್ತಾ, ನಿಷ್ಠಯಿಂದ ಕೆಲಸವನ್ನೂ ಮಾಡೋಕೆ ರೆಡಿ ಇದ್ದೀರಾ? ಗ್ಲೋಯಿಂಗ್ ಸ್ಕಿನ್ ಬೇಕು – ಅವರ ರೀತಿ ಸ್ಕಿನ್ ಕೇರ್‌ಗೆ ಉತ್ತಮ ಆಹಾರಕ್ಕೆ ಟೈಮ್ ಕೊಡೋದಕ್ಕೆ ರೆಡಿ ಇದ್ದೀರಾ? ನೆನಪಿರಲಿ ನಾವು ಮಾವಿನ ಗಿಡ ನೆಟ್ಟರೆ ಸಿಗೋದು ಮಾವಿನ ಹಣ್ಣು ಮಾತ್ರ!

How To Stop Comparing Yourself To Othersಬೇರೆಯವರ ಜೀವನದ ಜೊತೆ ನಮ್ಮ ಜೀವನವನ್ನು ತಕ್ಕಡಿಗೆ ಹಾಕಿ ತೂಗೋರು ಇದನ್ನೊಮ್ಮೆ ಓದಲೇಬೇಕು..

ನೀವು ಅವರಂಥೆ ಒಬ್ಬ ವ್ಯಕ್ತಿ, ನೀವೇ ಅವರಲ್ಲ. ನಿಮ್ಮ ಜೀವನ ನಿಮ್ಮದು, ಅವರ ಜೀವನ ಅವರದ್ದು.

Insight: What is life? - Newspaper - DAWN.COMದೂರದ ಬೆಟ್ಟ ನುಣ್ಣಗೆ ಅನ್ನೋದು ಮರೀಬೇಡಿ. ಕೈಯಲ್ಲಿ ಲಕ್ಷ ಲಕ್ಷ ಎಣಿಸಬಹುದು, ಆದರೆ ನೆಮ್ಮದಿ ಇದೆಯೋ ಇಲ್ಲವೋ ಯಾರಿಗೆ ಗೊತ್ತು?

3,937 Unhappy Rich Illustrations & Clip Art - iStockನಿಮ್ಮ ಈಗಿನ ಜೀವನದ ಬಗ್ಗೆ ತಾತ್ಸಾರ ಬೇಡ, ನೀವು ಜೀವಿಸುತ್ತಿರುವ ಜೀವನ ಮತ್ತೊಬ್ಬರ ಕನಸಾಗಿರಬಹುದು.

Rich And Poor Stock Photo - Download Image Now - Poverty, Wealth, Shoe -  iStockಸಾಮಾಜಿಕ ಜಾಲತಾಣಗಳ ಬಳಕೆ ಕಡಿಮೆ ಮಾಡಿ, ಅಲ್ಲಿ ನಿಮ್ಮ ಸಮಯ ವ್ಯರ್ಥ, ಮಾನಸಿಕ ಆರೋಗ್ಯ ಹಾಳು. ಇರುವುದರಲ್ಲಿ ಖುಷಿಯಾಗಿರೋದು ಕಷ್ಟದ ಕೆಲಸ ಅಲ್ಲ.

Social Media - Small Business Trendsದುಡ್ಡಿನಿಂದ ಖುಷಿಯನ್ನು ಕೊಂಡುಕೊಳ್ಳೋಕೆ ಆಗೋದಿಲ್ಲ ಅನ್ನೋದು ಸತ್ಯ. ವಸ್ತುಗಳನ್ನು ಕೊಳ್ಳಬಹುದು ಅಷ್ಟೆ. ಬಂಗಲೆಯಲ್ಲಿ ಇರುವವರು ಕೂಡ ಮಾನಸಿಕ ಖಿನ್ನತೆಗೆ ಒಳಗಾಗಿಲ್ವಾ?

5,152 Sad Rich Man Stock Photos, Pictures & Royalty-Free Images - iStockನಿಮ್ಮ ಬಳಿ ಏನು ಆಸ್ತಿ ಇದೆ? ಮೂರು ಹೊತ್ತು ಊಟ, ಕಬೋರ್ಡ್ ತುಂಬಾ ಬಟ್ಟೆ, ಪ್ರತಿ ತಿಂಗಳು ಬಾಡಿಗೆ ಕಟ್ಟಿ ಉಳಿಯುವಷ್ಟು ಸಂಬಳ, ತಂದೆ-ತಾಯಿ, ನೆಂಟರು, ಸಂಬಂಧಗಳು, ಸ್ನೇಹಿತರು, ಆರೋಗ್ಯ! ಇದೇ ನಿಮ್ಮ ಆಸ್ತಿ.

Счастливая Семья Мать Отец Дети Сына И Дочь На Закате — стоковые фотографии  и другие картинки Семья - iStockಕಂಪೇರ್ ಮಾಡಿ, ಆದರೆ ದುಃಖಿಸಬೇಡಿ. ಈ ವರ್ಷ ನಾನು ಚೆನ್ನಾಗಿ ದುಡೀತಿನಿ, ಹೆಸರು ಮಾಡ್ತೇನೆ, ಉತ್ತಮ ಕೆಲಸ ಗಿಟ್ಟಿಸ್ತೇನೆ. ಕಾಂಪಿಟೇಷನ್ ಈ ರೀತಿ ಇರಲಿ.

GD Topics: How to Self-Motivate & Be Successful in Lifeಬೇರೆಯವರ ಯಶಸ್ಸಿಗೆ ಹೊಟ್ಟೆ ಉರಿ ಪಡದೇ ಖುಷಿ ಪಡಿ, ನಿಮ್ಮ ಸ್ನೇಹಿತ ಫಾರೀನ್‌ಗೆ ಹೋಗ್ತಿದ್ದಾನಾ? ಅವರ ಖುಷಿಯನ್ನು ಸೆಲೆಬ್ರೇಟ್ ಮಾಡಿ.

Happy Friendship Day 2022: Do You Have These 6 Qualities That Make A Good  Friend?ಇಷ್ಟೆಲ್ಲಾ ಓದಿದ ಮೇಲೆ ಏನಾದ್ರೂ ಬದಲಾವಣೆ ಕಾಣಬೇಕು ಅನಿಸಿದ್ಯಾ? ಜೀವನ ಸಿಗೋದು ಒಂದೇ ಬಾರಿ, ನಿಮ್ಮ ಖುಷಿ ನಿಮ್ಮನ್ನು ಡಿಫೈನ್ ಮಾಡುತ್ತದೆ.

happy life Archives -ನಿಮ್ಮ ಬಾಸ್ ಕೂಡ ನಿಮ್ಮ ಹೆಲ್ತಿ, ಖುಷಿಯಾದ ಲೈಫ್‌ಸ್ಟೈಲ್‌ನಿಂದ ಇನ್ಸ್‌ಪೈರ್ ಆಗಬಹುದು.. ಸದಾ ಖುಷಿಯಾಗಿರಿ, ಬೇರೆಯವರ ಜೀವನವನ್ನು ಬೇರೆಯವರ ಜೀವನದಂತೆ ಮಾತ್ರ ನೋಡಿ..

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!