VIRAL VIDEO| ವೃತ್ತಿಜೀವನದ ಕೊನೆಯ ಗ್ರ್ಯಾಂಡ್ ಸ್ಲಾಮ್‌ ಫೈನಲ್‌ನಲ್ಲಿ ಸೋಲು: ಕಣ್ಣೀರಿಟ್ಟ ಸಾನಿಯಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರು ತಮ್ಮ ವೃತ್ತಿಜೀವನದ ಕೊನೆಯ ಗ್ರ್ಯಾಂಡ್ ಸ್ಲಾಮ್ ಟೂರ್ನಿಯಲ್ಲಿ ನಿರಾಸೆಯನ್ನನುಭವಿಸಿದರು. ಆಸ್ಟ್ರೇಲಿಯನ್ ಓಪನ್ ಗ್ರ್ಯಾಂಡ್ ಸ್ಲಾಮ್ ಮಿಶ್ರ ಡಬಲ್ಸ್‌ನಲ್ಲಿ, ಅವರು ಮತ್ತು ಅವರ ಜೊತೆಗಾರ ರೋಹನ್ ಬೋಪಣ್ಣ ಬ್ರೆಜಿಲಿಯನ್ ಜೋಡಿ ಲೂಯಿಸಾ ಸ್ಟೆಫಾನಿ ಮತ್ತು ರಾಫೆಲ್ ಮ್ಯಾಟೊವೊಸ್ ಅವರನ್ನು ಫೈನಲ್‌ನಲ್ಲಿ ಎದುರಿಸಿದರು. ಈ ಪಂದ್ಯದಲ್ಲಿ ಸೋನಿಯಾ-ಬೋಪಣ್ಣ ಜೋಡಿ ಮೊದಲ ಹಂತದಲ್ಲಿ ಪ್ರಾಬಲ್ಯ ಮುಂದುವರಿಸಿದರೂ ನಂತರ ಎಡವಿದ್ದರಿಂದ ಸೋಲುಂಡರು.  ಇದರಿಂದ ಸಾನಿಯಾ ತೀವ್ರ ನಿರಾಸೆಗೊಂಡ ಸಾನಿಯಾ ವೃತ್ತಿಜೀವನದ ಕೊನೆಯ ಪಂದ್ಯ ಗೆಲ್ಲಲಾಗದೆ ಭಾವೋದ್ವೇಗಕ್ಕೊಳಗಾದರು.

ಫೆಬ್ರವರಿಯಲ್ಲಿ ತನ್ನ ಸುದೀರ್ಘ ಟೆನಿಸ್ ವೃತ್ತಿಜೀವನವನ್ನು ಕೊನೆಗೊಳಿಸುವುದಾಗಿ ಸಾನಿಯಾ ಈಗಾಗಲೇ ಘೋಷಿಸಿದ್ದಾರೆ. ಆದರೆ, ಇದು ಸಾನಿಯಾ ಅವರ ಕೊನೆಯ ಗ್ರ್ಯಾನ್ ಸ್ಲಾಮ್ ಟೂರ್ನಿಯಾಗಿದೆ. ಸಾನಿಯಾ ಮಿರ್ಜಾ ತಮ್ಮ ಆಟದ ಶೈಲಿಯಿಂದ ದೇಶದ ಅನೇಕ ಯುವಕರು ಟೆನಿಸ್ ಕ್ರೀಡೆಯತ್ತ ಗಮನ ಹರಿಸುವಂತೆ ಮಾಡಿದ್ದಾರೆ. ಸೋಲಿನ ನಂತರ ಸಾನಿಯಾ ಅವರು ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ.

ನನ್ನ ವೃತ್ತಿಜೀವನವು 2005 ರಲ್ಲಿ ಮೆಲ್ಬೋರ್ನ್‌ನಲ್ಲಿ ಪ್ರಾರಂಭವಾಯಿತು.ಗ್ರ್ಯಾಂಡ್ ಸ್ಲಾಮ್‌ನೊಂದಿಗೆ ತಮ್ಮ ವೃತ್ತಿಜೀವನಕ್ಕೆ ವಿದಾಯ ಹೇಳಲು ಇದಕ್ಕಿಂತ ಉತ್ತಮವಾದ ಸ್ಥಳವಿಲ್ಲ ಎಂದು ಸಾನಿಯಾ ಹೇಳಿದ್ದಾರೆ. ನನ್ನ ಮಗನ ಎದುರಲ್ಲಿ ಗ್ರ್ಯಾಂಡ್ ಸ್ಲಾಮ್ ಫೈನಲ್ ಪಂದ್ಯ ಆಡುತ್ತೇನೆ ಎಂದು ಊಹಿಸಿರಲಿಲ್ಲ ಎಂದು ಸಾನಿಯಾ ಮತ್ತೊಮ್ಮೆ ಕಣ್ಣೀರು ಹಾಕಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!