STORY | ಟೀನೇಜ್ ಮಗನಿದ್ದರೂ Cheating ಮಾಡಿದ ಪತ್ನಿಯನ್ನು ಕ್ಷಮಿಸ್ತಾನಾ?

ಅವ್ರಿಬ್ರೂ ಪರ್ಫೆಕ್ಟ್ ಗಂಡ ಹೆಂಡತಿ, ಬರೀ ಸೋಶಿಯಲ್ ಮೀಡಿಯಾಗಷ್ಟೇ ಅಲ್ಲ. ನಿಜ ಜೀವನದಲ್ಲಿಯೂ ಅವರು ಪರ್ಫೆಕ್ಟ್ ಅನಿಸ್ತಿದ್ರು. ಅವರ ಕುಟುಂಬದವರು, ಸ್ನೇಹಿತರು, ಕಲೀಗ್ಸ್ ಎಲ್ಲರೂ ಇವರ ಪ್ರೀತಿ ನೋಡಿ ಮದುವೆ ಆಗಿ ಇಷ್ಟು ವರ್ಷಗಳಾಗಿದೆ, ಟೀನೇಜ್ ಮಗ ಇದ್ದಾನೆ. ಆದರೂ ಇಷ್ಟೊಂದು ಪ್ರೀತಿ ಅಂತ ಸಣ್ಣ ಜೆಲಸಿ ಇಟ್ಕೊಂಡಿದ್ರು.

ಒಂದಿನ ಕರೆನ್ಸಿ ಖಾಲಿ ಆಯ್ತು ಅಂತ ಹೆಂಡತಿ ಫೋನ್ ತಗೊಂಡು ಕರೆನ್ಸಿ ಹಾಕ್ಕೊಂಡ. ಅವಳು ಅಡುಗೆ ಮನೆಲಿ ಬ್ಯುಸಿಯಾಗಿದ್ಲು. ಫೋನ್ ಟೇಬಲ್ ಮೇಲೆ ಇಟ್ಟು ಆಕಡೆ ನೋಡುವಷ್ಟ್ರಲ್ಲಿ ಮೆಸೇಜ್ ಬಂದ ಸೌಂಡ್ ಬಂತು.

ಗಂಡ ಫೋನ್ ಕೈಗೆ ಎತ್ಕೊಂಡ. ಗುಡ್ ಮಾರ್ನಿಂಗ್ ಲವ್ ಎನ್ನುವ ಮೆಸೇಜ್ ಪಕ್ಕದಲ್ಲಿ ❤️😘😍🥰💋👩‍❤️‍💋‍👨 ಈ ಇಮೋಜಿಗಳಿತ್ತು. ಒಂದು ಕ್ಷಣ ನಿಂತಲ್ಲೇ ಕುಸಿದುಹೋದ. ನಾನ್ ತಪ್ಪಾಗಿ ನೋಡ್ತಿದಿನಿ ಅಂತ ಮೆಸೇಜ್ ಹಿಂದೆ ಮುಂದೆ ಓದ್ತಾ ಹೋದ. ಹೆಂಡತಿ ಮತ್ತೆ ಅವನ ಮೆಸೇಜ್‌ಗಳು ಮನಸ್ಸನ್ನು ಒಡೆದುಹಾಕ್ತು.

ಚೂರು ಚೂರಾದ ಮನಸ್ಸು, ಕಣ್ಣೀರು ತಡೆಯೋಕಾಗ್ತಿಲ್ಲ. ಸೀದ ಬೆಸ್ಟ್ ಫ್ರೆಂಡ್ ಮನೆಗೆ ಬಂದ. ಈತನ ಬೆಸ್ಟ್ ಫ್ರೆಂಡ್ ಡಾಕ್ಟರ್, ಇವನಿಗೂ ಪತ್ನಿಗೂ ಬೆಸ್ಟ್ ಫ್ರೆಂಡ್.

ಚೀಟಿಂಗ್ ಮಾಡ್ತಾ ಇದಾಳೆ, ನಾನೇ ಕಣ್ಣಾರೆ ಮೆಸೇಜ್ ನೋಡಿದಿನಿ ಅಂತ ಹೇಳ್ತಾ ಕಣ್ಣೀರಿಟ್ಟ. ಡಾಕ್ಟರ್‌ಗೂ ನಂಬೋಕಾಗ್ಲಿಲ್ಲ. ಮನಸ್ಸು ಹಗುರ ಮಾಡ್ಕೊಂಡು ಗಂಡ ಆಫೀಸ್ ಹೊರಟ. ತಕ್ಷಣ ಡಾಕ್ಟರ್ ಪತ್ನಿಗೆ ಫೋನ್ ಮಾಡಿ ವಿಷಯ ಹೇಳಿದ್ರು. ಎಷ್ಟು ಸಲ ಅವನನ್ನು ಮೀಟ್ ಮಾಡಿದ್ಯಾ? ಅಂತ ಕೇಳಿದ್ರು. ಆಫೀಸ್ ಬಿಟ್ಟು ಇನ್ನೆಲ್ಲೂ ಯಾವತ್ತೂ ಸಿಕ್ಕಿಲ್ಲ ಅಂದ್ಲು. ಮಗನ ಮೇಲೆ ಆಣೆ ಮಾಡಿ ಹೇಳಿದ್ಲು ಫಿಸಿಕಲಿ ಮುಂದುವರಿದಿಲ್ಲ ಅಂತ. ಏನೋ ವೀಕ್ ಮೂಮೆಂಟ್ ಅಲ್ಲಿ ಮೆಸೇಜ್ ಮಾಡಿದೆ ಅಷ್ಟೆ. ಅದು ಬಿಟ್ಟು ಬೇರೇನೂ ಇಲ್ಲ. ಅಂದ್ಲು.

ಮತ್ತೆ ಡಾಕ್ಟರ್ ಗಂಡನನ್ನು ಕರೆದು, ಇರುವ ವಿಷಯ ಹೇಳಿದ್ರು. ಅವಳಿಗೆ ಇನ್ನೊಂದು ಚಾನ್ಸ್ ಕೊಡ್ತೀಯಾ? ಕೇಳಿದ್ರು. ಗೊತ್ತಿಲ್ಲ. ಅವಳನ್ನು ನಂಬೋಕಾಗ್ತಿಲ್ಲ ಅಂದ. ಆಗ ಡಾಕ್ಟರ್ ಮತ್ತೆ ಕೇಳಿದ್ರು, ಅವಳನ್ನು ಪ್ರೀತಿ ಮಾಡ್ತ್ಯಾ? ಹೌದು ಎಂದ. ಅವಳು ತಪ್ಪು ಮಾಡಿದಾಳೆ ಅಷ್ಟೆ. ಮತ್ತೆ ಮತ್ತೆ ಆಗೋ ತಪ್ಪಲ್ಲ. ಪ್ರತೀ ಮನುಷ್ಯನಿಗೂ ವೀಕ್ ಮೂಮೆಂಟ್ ಇರುತ್ತದೆ ಯೋಚ್ನೆ ಮಾಡು ಅಂದ್ರು.

ಅವನಿಗೆ ಈಗ್ಲೂ ಏನು ಮಾಡಬೇಕು ಅರ್ಥ ಆಗಲಿಲ್ಲ. ಇಷ್ಟ ಇಲ್ಲ ಡಿವೋರ್ಸ್ ಮಾಡ್ತಿನಿ ಅಂದ್ರು ಕ್ಷಮಿಸಿ ಹೊಂದ್ಕೊಂಡ್ ಹೋಗ್ತಿನಿ ಅಂದ್ರು ಕತ್ತಲಲ್ಲಿ ನಿಂತು ನಿರ್ಧಾರ ಮಾಡ್ಬೇಡ ಎಂದು ವೈದ್ಯರು ಸಜೆಸ್ಟ್ ಮಾಡಿದ್ರು. ಅವಳ ಮನಸ್ಸು ಪ್ಯೂರ್, ಆದರೆ ಬುದ್ದಿ ಕೆಲವೊಮ್ಮೆ ಮಂಕಾಗುತ್ತದೆ. ಅದೇ ಆಗಿದೆ ಎಂದು ಹೇಳಿದ್ರು. ಆತ ಇನ್ನೊಂದು ಚಾನ್ಸ್ ಕೊಡೋಕೆ ರೆಡಿಯಾದ. ಇದೆಲ್ಲ ಕಳೆದು ಏಳು ವರ್ಷಗಳಾಗಿದೆ. ಈಗಲೂ ಜನ ಅವ್ರನ್ನ ನೋಡಿ ಜೋಡಿ ಅಂದ್ರೆ ಹೀಗಿರ್ಬೇಕು ಅಂತಾರೆ.

ಸಂಬಂಧಗಳು ಹಾಳೆಯಷ್ಟೇ ಸೂಕ್ಷ್ಮ, ನಿರ್ಧಾರ ನಿಮ್ಮದೇ ಆಗಿರಲಿ. ಆದರೆ ತುಂಬಾ ಯೋಚನೆ ಮಾಡಿ ನಿರ್ಧಾರ ಮಾಡಿ. ಈ ಒಂದು ನಿರ್ಧಾರದ ಮೇಲೆ ನಿಮ್ಮ ಇಡೀ ಜೀವನ ನಿಂತಿರುತ್ತದೆ. ಚೀಟಿಂಗ್ ಮಾಡೋದು ಸರಿಯಲ್ಲ, ಆದರೆ ಸುತ್ತಮುತ್ತಲಿನ ವಿಷಯದ ಬಗ್ಗೆಯೂ ಅರಿವಿರಲಿ. ಒಂದು ವೀಕ್ ಮೂಮೆಂಟ್ ಒಬ್ಬ ಮನುಷ್ಯನನ್ನು ಕೆಟ್ಟವನನ್ನಾಗಿ ಮಾಡೋದಿಲ್ಲ ಅಲ್ವಾ?

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!