ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ಮೋದಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸುದೀರ್ಘ ಪತ್ರವೊಂದನ್ನು ಬರೆದಿದ್ದಾರೆ. ಪಶ್ಚಿಮ ಬಂಗಾಳದ ಮಹಾತ್ಮಾ ಗಾಂಧಿ ನರೇಗಾದ ಕಾರ್ಮಿಕರಿಗೆ ಹಣ ಬಿಡುಗಡೆ ಮಾಡಿ ಎಂದು ಪತ್ರದಲ್ಲಿ ಬರೆದಿದ್ದಾರೆ.
ನಾನು ಭಾರತ್ ನ್ಯಾಯ್ ಯಾತ್ರೆ ವೇಳೆ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ್ದೆ. ಪಶ್ಚಿಮ ಬಂಗಾ ಖೇತ್ ಮಜ್ದೂರ್ ಸಮಿತಿಯ ಮಹಾತ್ಮಾ ಗಾಂಧಿ ನರೇಗಾದ ಕಾರ್ಮಿಕರ ನಿಯೋಗ ತಮ್ಮ ಸಮಸ್ಯೆಗಳ ಬಗ್ಗೆ ಹೇಳಿಕೊಂಡಿದೆ.
ಲಕ್ಷಾಂತರ ಜನರಿಗೆ ವೇತನ ಈವರೆಗೂ ದೊರೆತಿಲ್ಲ. ಕೆಲಸ ಮುಗಿದು ಮೂರು ವರ್ಷಗಳಾದರೂ ವೇತನ ದೊರೆಯದೆ ಜನ ಹೈರಾಣಾಗಿದ್ದಾರೆ. ಬಾಕಿ ಇರುವ ವೇತನ ಬಿಡುಗಡೆ ಮಾಡಿ ಎಂದು ಮನವಿ ಪತ್ರ ಬರೆದಿದ್ದಾರೆ.