ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಕ್ಕಳಿಗೆ ಚೂಯಿಂಗ್ ಗಮ್ ಕೊಡಿಸ್ತೀರಾ? ಮಕ್ಕಳು ಚೂಯಿಂಗ್ ಗಮ್ ನುಂಗಿದ್ರೆ ಏನಾಗುತ್ತದೆ ಗೊತ್ತಾ? ಅಮೆರಿಕದಲ್ಲಿ ಐದು ವರ್ಷದ ಬಾಲಕನೊಬ್ಬ ಚೂಯಿಂಗ್ ಗಮ್ ನುಂಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಈತ ನುಂಗಿದ್ದು ಬರೋಬ್ಬರಿ 40 ಚೂಯಿಂಗ್ ಗಮ್. ಜಠರದಲ್ಲಿ ಸಮಸ್ಯೆಯಾಗಿ ಗಂಭೀರ ಸ್ಥಿತಿಗೆ ತಲುಪಿದ್ದು, ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೊಟ್ಟೆ ನೋವು ಎಂದು ಬಾಲಕ ಒದ್ದಾಡಿದ್ದು ಸ್ಕಾನಿಂಗ್ ಮಾಡಿಸಲಾಗಿದೆ. ಆಗ ಹೊಟ್ಟೆಯಲ್ಲಿ ಚೂಯಿಂಗ್ ಗಮ್ ಇರುವುದು ಗೊತ್ತಾಗಿದೆ. ಹೊಟ್ಟೆಯಲ್ಲಿದ್ದ ಎಲ್ಲ ಚೂಯಿಂಗ್ಗಮ್ನ್ನು ವೈದ್ಯರು ತೆಗೆದು ಹಾಕಿದ್ದಾರೆ. ಮಕ್ಕಳಿಗೆ ಯಾವ ಆಹಾರ ನೀಡುತ್ತೀರಿ ಎನ್ನುವ ಬಗ್ಗೆ ಗಮನ ಇಡಿ.