MUST READ | ಹುಟ್ಟುಹಬ್ಬ ಆಚರಿಸಿಕೊಳ್ಳೋಕೆ ಅನಾಥಾಶ್ರಮಕ್ಕೆ ಹೋಗ್ತೀರಾ? ಇದನ್ನೊಮ್ಮೆ ಓದಿಬಿಡಿ..

ಮೇಘನಾ ದೀಪಕ್ ಶೆಟ್ಟಿ, ಶಿವಮೊಗ್ಗ

ಸರ್ಪೈಸ್ ಬರ್ಥ್‌ಡೇ ಪಾರ್ಟಿ, ಟ್ರಿಪ್ ಹೋಗೋದು, ಮನೆಯಲ್ಲಿಯೇ ಕೇಕ್ ಕಟ್ ಮಾಡೋದು ಎಲ್ಲಾ ರೀತಿ ಬರ್ಥ್‌ಡೇ ಮಾಡಿಕೊಳ್ಳೋರು ಇದ್ದಾರೆ. ಆದರೆ ಹೆಚ್ಚಿನ ಜನ ತಮ್ಮ ಜನ್ಮದಿನದಂದು ಏನಾದ್ರೂ ಒಳ್ಳೆ ಕೆಲಸ ಮಾಡಬೇಕು ಎಂದು ಅನಾಥಾಶ್ರಮಗಳಿಗೆ ತೆರಳಿ ಮಕ್ಕಳೆದುರು ಕೇಕ್ ಕತ್ತರಿಸಿ, ಒಂದೆರಡು ಮಕ್ಕಳನ್ನು ಕರೆದು ಕೇಕ್ ತಿನ್ನಿಸಿ, ಫೋಟೊ, ವಿಡಿಯೋ ಮಾಡಿಕೊಂಡು ಮನೆಗೆ ಬರ‍್ತಾರೆ.

New Year Celebrations at Jeevodaya Orphanage | Aster Prime Hospital Ameerpet, Hyderabadಇದರಿಂದ ಮಕ್ಕಳಿಗೆ ಖುಷಿಯಾಗುತ್ತದೆ ಎಂದು ಯಾಕೆ ಅನ್ಕೋತೀರಾ?
ಮಕ್ಕಳಿಗೆ ನೀವು ಕೊಡೋ ಕೇಕ್ ಸದಾ ರುಚಿಸೋದಿಲ್ಲ. ನೀವು ಇಬ್ಬರು ಮಕ್ಕಳನ್ನು ಮಾತ್ರ ಕರೆದು ಕೇಕ್ ಕೊಟ್ಟು ಹೋಗಿಬಿಡ್ತೀರಿ. ಆದರೆ ಮೂಲೆಯಲ್ಲೊಬ್ಬ ತನಗೆ ಸಣ್ಣ ಪೀಸ್ ಕೇಕ್ ಸಿಕ್ಕಿದೆ ಅಂತ ಬೇಜಾರಾಗಿರ‍್ತಾನೆ. ಮತ್ತೊಬ್ಬಳಿಗೆ ಕೇಕ್ ಬದಲು ಪುಸ್ತಕ ಕೊಡಬಾರದಿತ್ತಾ ಅನಿಸಿರುತ್ತದೆ. ಇನ್ಯಾರೋ ಸ್ವಾಭಿಮಾನಿಗೆ ತಮ್ಮನ್ನು ಕೀಳಾಗಿ ಕಾಣ್ತಾರೇನೋ ಅನ್ನೋ ಸಣ್ಣ ಅನುಮಾನ ಶುರುವಾಗಿರುತ್ತದೆ. ಮಕ್ಕಳ ಮನಸ್ಸು ತುಂಬಾನೇ ಮೃದು. ಅರ್ಥಮಾಡಿಕೊಳ್ಳುವ ಶಕ್ತಿ ಇರೋದಿಲ್ಲ. ಅರ್ಥಮಾಡಿಸೋದಕ್ಕೆ ಪೋಷಕರು ಇರೋದಿಲ್ಲ ಮರೆಯಬೇಡಿ.

Support the residential care of a destitute child - GiveIndiaಬೇಗ ಬೇಗ ಬರ್ಥಡೇ ಬರಲಿ
ಕೇಕ್ ಕೊಟ್ಟು ಬರೋದು, ಸಿಹಿತಿಂಡಿ ನೀಡೋದು, ಹೆಚ್ಚಂದ್ರೆ ಊಟ ಹಾಕಿಸೋದು. ನೀವು ಒಮ್ಮೆ ಹೋಗಿ ಈ ಕೆಲಸ ಮಾಡಿಬರ‍್ತೀರಿ. ರುಚಿರುಚಿಯಾದ ಊಟ ಕೊಡ್ತೀರಿ, ಇದನ್ನು ತಿಂದ ಮಕ್ಕಳಿಗೆ ಮತ್ತೆ ಅನಾಥಾಶ್ರಮದ ಊಟ ಸಪ್ಪೆ ಎನಿಸುತ್ತದೆ. ಮತ್ತೆ ಯಾರ‍್ದಾದ್ರೂ ಬರ್ಥಡೇ ಬರಲಿ, ಯಾರಾದ್ರೂ ಕೇಕ್ ತರ್ಲಿ ಎಂದು ಮಕ್ಕಳು ಹಪಹಪಿಸುತ್ತಾರೆ.

Best Birthday Cake Recipe - How to Make a Birthday Cakeಝೂನಲ್ಲಿರೋ ಪ್ರಾಣಿಗಳಲ್ಲ
ಝೂನಲ್ಲಿರುವ ಪ್ರಾಣಿಗಳನ್ನು ನೋಡೋಕೆ ದುಡ್ಡು ಕೊಟ್ಟು ಕ್ಯೂನಲ್ಲಿ ನಿಲ್ತೀವಿ. ಅವುಗಳ ಜೀವನಕ್ಕೆ ನಮ್ಮ ಎಂಟ್ರಿ ಅವುಗಳಿಗೆ ಇಷ್ಟವಾಗಿದ್ಯಾ? ಇಲ್ವಾ ಅಂತ ತಿಳಿದುಕೊಳ್ಳೋಕೆ ಅವುಗಳ ಮಾತು ನಮಗೆ ಅರ್ಥ ಆಗೋದಿಲ್ಲ. ಆದರೆ ಮಕ್ಕಳಿಗೆ ಮಾತನಾಡೋದಕ್ಕೆ ಬರೋದಿಲ್ವಾ? ವರ್ಷಕ್ಕೊಮ್ಮೆ ನೀವು ಬಂದು ಹೋಗಿ ನಿಮಗಿಷ್ಟದ ತಿಂಡಿ ಕೊಟ್ಟು ಫೋಟೊ, ವಿಡಿಯೋ ಮಾಡಿಕೊಂಡು ಬರೋದು ಎಷ್ಟು ಸರಿ? ಮಕ್ಕಳಿಗೆ ಕೀಳಿರಮೆ ಕಾಡೋದಿಲ್ವಾ? ನಮ್ಮ ಪಾಡಿಗೆ ನಮ್ಮನ್ನು ಬಿಡಿ ಅಂತ ಹೇಳೋದಿಲ್ವಾ? ಯಾರದ್ದೂ ಹುಟ್ಟು ಹಬ್ಬಕ್ಕೆ ಜೀವ ಇಲ್ಲದ ರೀತಿ ಹ್ಯಾಪಿ ಬರ್ಥ್ ಡೇ ಟು ಯು ಅಂತ ಹಾಡೋದಕ್ಕೆ ಮನಸ್ಸು ಬರುತ್ತದೆಯಾ? ಹೇಗೋ ಅವರ ಜೀವನ ಅವರು ಮಾಡುತ್ತಿರುತ್ತಾರೆ ನಾವ್ಯಾಕೆ ಅವರನ್ನು ಅಯ್ಯೋ ಪಾಪ ಅನ್ನೋ ದೃಷ್ಟಿಯಿಂದ ನೋಡ್ಬೇಕು?

Child Vikas Foundationನಿಮ್ಮ ಸ್ವಾರ್ಥ ಇದ್ಯಾ?
ಮಕ್ಕಳಿಗೆ ತಿನ್ನಲು ವಸ್ತುಗಳನ್ನು ನೀಡಿ ಅವರೊಂದಿಗೆ ಫೋಟೊ, ವಿಡಿಯೋ ಮಾಡಿಕೊಂಡು ಬಂದು, ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದಾಗ ಎಲ್ಲರೂ” ಒಳ್ಳೆ ಕೆಲಸ. ಎಲ್ಲರೂ ಈ ರೀತಿ ಅರ್ಥಪೂರ್ಣವಾದ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕು” ಅನ್ನೋ ಕಮೆಂಟ್ ನೋಡಿದಾಗ ನಿಮಗೆ ಖುಷಿ ಆಗ್ತಿದ್ಯಾ? ಮಕ್ಕಳ ಫೀಲಿಂಗ್ಸ್ ಬಗ್ಗೆ ಗಮನ ಕೊಡದೇ ನಿಮ್ಮಿಷ್ಟಕ್ಕೆ ಏನೇ ಮಾಡಿದರೂ ಅದು ಸ್ವಾರ್ಥವೇ ಅಲ್ವಾ?

16 Reasons Why Social Media Is Important to Your Companyಹೀಗೆ ಸಹಾಯ ಮಾಡಿ
ಹಿಂದಿನ ಕಾಲದಲ್ಲಿ ಬಲಗೈಯಲ್ಲಿ ಮಾಡಿದ ಸಹಾಯ ಎಡಗೈಗೂ ಗೊತ್ತಾಗಬಾರದು ಎಂದು ಹೇಳುತ್ತಾರೆ. ಆ ರೀತಿಯೇ ಇರಿ, ಇಂತಿಷ್ಟು ಬುಕ್ಸ್, ಪೆನ್,ಪೆನ್ಸಿಲ್ ಅಥವಾ ಹಣ ಸಹಾಯ ಮಾಡಿ ಅದು ನೇರವಾಗಿ ಮಕ್ಕಳಿಗೆ ತಲುಪುತ್ತಿದೆಯಾ ಗಮನವಹಿಸಿ, ಫೋಟೊ ವಿಡಿಯೋ ಮಾಡದೇ ಎಷ್ಟೋ ರೀತಿಯಲ್ಲಿ ಸಹಾಯ ಮಾಡುವ ಜನರಿದ್ದಾರೆ.

Help a Friend | Columbia University | Child Psychiatryಕೇಕ್ ಒಳ್ಳೆದಾ?
ಕೇಕ್‌ನಲ್ಲಿ ಆರ್ಟಿಫಿಶಿಯಲ್ ಕಲರ್, ಜಿಡ್ಡು, ಎಣ್ಣೆ, ಮೈದಾಹಿಟ್ಟು, ರಾಶಿ ರಾಶಿ ಸಕ್ಕರೆ ಇರುತ್ತದೆ. ಇದನ್ನು ಮಕ್ಕಳಿಗೆ ಕೊಟ್ಟು ಸಾಧಿಸೋದೇನಿದೆ? ನಿಮ್ಮ ಮಕ್ಕಳು ವರ್ಷಕ್ಕೊಮ್ಮೆ ಹುಟ್ಟು ಹಬ್ಬಕ್ಕೆ ಕೇಕ್ ತಿನ್ನಬಹುದು. ಆದರೆ ಅನಾಥಾಶ್ರಮದಲ್ಲಿ ತಿಂಗಳಿಗೆ ಮೂರ್ನಾಲ್ಕು ಹುಟ್ಟುಹಬ್ಬ, ಮೂರ‍್ನಾಲ್ಕು ಕೇಕ್!

Rainbow cake recipe - BBC Foodಅನಾಥಾಶ್ರಮಗಳಿಗೆ ತೆರಳಿ ಊಟ ಹಾಕೋದು ತಪ್ಪು ಎಂದು ಹೇಳುತ್ತಿಲ್ಲ. ಮಕ್ಕಳ ಭಾವನೆಗಳನ್ನೂ ಗಮನದಲ್ಲಿಟ್ಟುಕೊಳ್ಳಿ. ನಿಮಗಿಂತ ಹೆಚ್ಚು ದುಡ್ಡಿದ್ದವರು ನಿಮಗೆ ಏನಾದ್ರೂ ದಾನದ ರೂಪದಲ್ಲಿ ಕೊಟ್ರೆ ಅಕ್ಸೆಪ್ಟ್ ಮಾಡ್ತೀರಾ? ದುಡ್ಡಿನ ಧಿಮಾಕು ಅನ್ನೋರೂ ಇದ್ದಾರೆ, ಉದಾರ ಮನಸ್ಸು ಅನ್ನೋರೂ ಇದ್ದಾರೆ. ನಿಮಗೆ ಏನೂ ಬೇಕು ಅನ್ನೋಕ್ಕಿಂತ ಮಕ್ಕಳ ಅಗತ್ಯ ಏನು ಎಂದು ಕೇಳಿ ಮುಂದುವರಿಯಿರಿ.ಅವರಿಗೂ ಕುಟುಂಬ ಇಲ್ಲ, ಪೋಷಕರಿಲ್ಲ ಅನ್ನೋ ನೋವು ಕಾಡದಂತೆ ನೋಡಿಕೊಳ್ಳಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

1 COMMENT

  1. ನೀವು ಹೇಳುತ್ತಿರುವ ಮಾತು ನಿಜವಾಗಿದೆ ಮೇಡಂ.💐👍🙏

LEAVE A REPLY

Please enter your comment!
Please enter your name here

error: Content is protected !!