ಪ್ರತಿ ರಾತ್ರಿ ಹೆಡ್‌ಫೋನ್‌ ಹಾಕಿಕೊಂಡು ಹಾಡು ಕೇಳುತ್ತಾ ಮಲಗ್ತೀರಾ? ಈ ಸ್ಟೋರಿ ಓದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನೀವು ಪ್ರತಿದಿನ ರಾತ್ರಿ ಹೆಡ್ ಫೋನ್ ಹಾಕಿಕೊಂಡು ಮಲಗತ್ತೀರಾ? ಹಾಗಿದ್ರೆ ಒಮ್ಮೆ ಈ ಸ್ಟೋರಿ ಓದಿ.. ಶಾಂಡೋಂಗ್ ನಿವಾಸಿ ವಾಂಗ್ ಎಂಬ ಯುವತಿ ಶಾಶ್ವತ ಕಿವುಡುತನದಿಂದ ಬಳಲುತ್ತಿದ್ದಾಳೆ.

ಇತ್ತೀಚೆಗಷ್ಟೇ ಆಕೆಗೆ ಶ್ರವಣ ಸಮಸ್ಯೆ ಇತ್ತು ಆಕೆಯ ಕಿವಿಯನ್ನು ಪರೀಕ್ಷಿಸಲು ಆಸ್ಪತ್ರೆಗೆ ಹೋಗಿದ್ದಳು. ಶ್ರವಣ ಕಾರಣದಿಂದಾಗಿ ತನಗೆ ಕೆಲಸದಲ್ಲಿ ತೊಂದರೆಯಾಗಬಹುದೆಂಬ ಆತಂಕ ಅವಳಲ್ಲಿತ್ತು. ವೈದ್ಯರು ಆಕೆಯ ಕಿವಿಗಳನ್ನು ಪರೀಕ್ಷಿಸಿ ಅಚ್ಚರಿಯ ಹೇಳಿಕೆ ನೀಡಿದರು. ಅದು ಏನಪ್ಪಾ ಅಂದ್ರೆ ಆಕೆಯ ಎಡ ಕಿವಿಯ ನರಗಳು ಶಾಶ್ವತವಾಗಿ ಹಾನಿಗೊಳಗಾಗಿರುವುದನ್ನು ವೈದ್ಯರು ಆಕೆಗೆ ತಿಳಿಸಿದರು. ಮೂಲಗಳ ಪ್ರಕಾರ ಆಕೆ ಶಾಶ್ವತವಾಗಿ ಕಿವುಡಿಯಾಗಿದ್ದಾಳೆ ಎಂದು ವೈದ್ಯರು ಹೇಳಿದ್ದಾರೆ.

ವಾಂಗ್ ಶಾಂಡಾಂಗ್ನಲ್ಲಿ ಸ್ಥಳೀಯ ಸಂಸ್ಥೆಗೆ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದರು. ಪ್ರತಿ ರಾತ್ರಿ ಹೆಡ್‌ಫೋನ್‌ ಹಾಕಿಕೊಂಡು ಹಾಡು ಕೇಳುವ ಅಭ್ಯಾಸವಿತ್ತು. ಕಾಲೇಜಿನಲ್ಲಿ ಇದ್ದಾಗಿನಿಂದ ಅಂದರೆ ಎರಡು ವರ್ಷಗಳಿಂದ ಹೆಡ್ ಫೋನ್ ಹಾಕಿಕೊಂಡು ಹಾಡು ಕೇಳುವ ಅಭ್ಯಾಸ ಆಕೆಗೆ ಇತ್ತು.

ಎಂದಿನಂತೆ ಹೆಡ್ ಫೋನ್ ಹಾಕಿಕೊಂಡು ಹಾಡುಗಳನ್ನು ಕೇಳುತ್ತಾ ನಿದ್ದೆಗೆ ಜಾರಿದ್ದಾಳೆ. ಬೆಳಗ್ಗೆ ಎದ್ದಾಗ ಕಿವಿ ನೋಯುತ್ತಿದ್ದು, ಯಾರು ಮಾತನಾಡಿಸಿದರೂ ಸರಿಯಾಗಿ ಕೇಳಿಸುತ್ತಿಲ್ಲ ಎಂದು ಆಕೆಗೆ ಅನಿಸುತ್ತದೆ. ತಕ್ಷಣ ಆಕೆ ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷಿಸಿದಾಗ ಆಕೆಯ ಕಿವಿಗಳು ಶಾಶ್ವತವಾಗಿ ಹಾನಿಗೊಳಗಾಗಿರುವುದು ಕಂಡುಬಂದಿದೆ.

ನಮ್ಮಲ್ಲಿ ಸಾಕಷ್ಟು ಜನರಿಗೆ ಇಂತಹ ಅಭ್ಯಾಸ ಇದೆ. ರಾತ್ರಿ ಮಲಗುವಾಗ ಕಿವಿಗೆ ಹೆಡ್ ಫೋನ್ ಹಾಕಿಕೊಂಡು ಹಾಡುಗಳನ್ನ ಕೇಳಿಕೊಂಡು ಮಲಗುವವರು ಸಾಕಷ್ಟು ಜನ ಇದ್ದಾರೆ. ಕೆಲವೊಂದು ಅಭ್ಯಾಸ ಒಳ್ಳೆಯದೇ ಆದರೆ ಅದು ಮಿತಿಮೀರಿದರೆ ನಮ್ಮ ಜೀವಕ್ಕೆ ಆಪತ್ತು. ಎಲ್ಲಾ ಅಭ್ಯಾಸಗಳು ಒಂದು ಇತಿಮಿತಿಯಲ್ಲಿ ಇದ್ದರೆ ಬಹಳ ಉತ್ತಮ. ಹಾಗಾದರೆ ನಿಮಗೆ ಈ ಅಭ್ಯಾಸವಿದ್ದರೆ ಇಂದೇ ಬಿಟ್ಟುಬಿಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!