ಏರಿಕೆಯತ್ತ ಸಾಗಿದ ಧಾರಣೆ: ಕಂಗಾಲಾಗಿದ್ದ ಕರಾವಳಿಯ ಅಡಿಕೆಗೆ ಸಿಕ್ಕಿದೆ ಬೂಸ್ಟರ್ ಡೋಸ್!

ಹೊಸದಿಗಂತ, ಮಂಗಳೂರು:

ಬಿಳಿ ಚಾಲಿ ಅಡಿಕೆ ಧಾರಣೆ ಮಾರುಕಟ್ಟೆಯಲ್ಲಿ ದಿಢೀರ್ ಏರಿಕೆ ಕಂಡಿದ್ದು, ಆತಂಕದಲ್ಲಿದ್ದ ಕರಾವಳಿಯ ಅಡಿಕೆ ಬೆಳೆಗಾರರಲ್ಲಿ ಹೊಸ ಭರವಸೆ ಮೂಡಿಸಿದೆ.

ಸತತವಾಗಿ ಕುಸಿತ ಕಾಣುತ್ತಿದ್ದ ಧಾರಣೆ ಈಗ ಹೊಸ ಅಡಿಕೆ ಕೆ.ಜಿಗೆ 10 ರೂ. ಸಿಂಗಲ್ ಚೋಲ್ 15ರೂ. ಡಬ್ಬಲ್ ಚೋಲ್ 20ರೂ. ನಷ್ಟು ಹೆಚ್ಚಳ ಕಂಡಿದೆ ಎಂದು ಅಡಿಕೆ ಮಾರುಕಟ್ಟೆ ಮೂಲಗಳು ತಿಳಿಸಿವೆ.

ಕಳೆದ ಎರಡು ಮೂರು ತಿಂಗಳಿನಿಂದ ಹೊಸ ಅಡಿಕೆ ಧಾರಣೆ 320ರಿಂದ 340ರ ಆಸುಪಾಸಿನಲ್ಲೇ ಸುತ್ತುತ್ತಿತ್ತು. ಮಂಗಳವಾರ ದಕ್ಷಿಣ ಕನ್ನಡ ಜಿಲ್ಲೆಯ ಮಾರುಕಟ್ಟೆಯಲ್ಲಿ ರೂ.347ರ ಧಾರಣೆಯಲ್ಲಿ, ಪುತ್ತೂರು ಹಾಗೂ ಬೆಳ್ತಂಗಡಿಯ ಖಾಸಗಿ ಮಾರುಕಟ್ಟೆಯಲ್ಲಿ 350ಕ್ಕೆ ಖರೀದಿಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!