September 27, 2026
Sunday, September 27, 2026
spot_img

ಮಾಡಿರೋ ಮುದ್ದೆಯಲ್ಲಿ ಅರ್ಧದಷ್ಟು ಪಾತ್ರೆಯಲ್ಲಿಯೇ ಉಳಿದುಬಿಡತ್ತಾ? ಸಿಂಪಲ್‌ ಟ್ರಿಕ್‌ ಟ್ರೈ ಮಾಡಿ

ಸಾಮಾಗ್ರಿಗಳು
ರವೆ
ರಾಗಿಹಿಟ್ಟು
ಉಪ್ಪು
ತುಪ್ಪ
ನೀರು

ಮಾಡುವ ವಿಧಾನ
ಮೊದಲು ಒಂದು ನಾನ್‌ಸ್ಟಿಕ್‌ ಪಾತ್ರೆ ತೆಗೆದುಕೊಳ್ಳಿ, ಈ ಪಾತ್ರೆಯಲ್ಲಿ ಮಾಡೋದ್ರಿಂದ ಒಂದು ಸ್ವಲ್ಪವೂ ತಳ ಅಂಟೋದಿಲ್ಲ. ಮುದ್ದೆ ವೇಸ್ಟ್‌ ಆಗೋದಿಲ್ಲ.
ಈ ಪಾತ್ರೆಗೆ ಒಂದೂವರೆ ಲೋಟದಷ್ಟು ನೀರನ್ನು ಹಾಕಿ, ಜೊತೆಗೆ ಎರಡು ಸ್ಪೂನ್‌ ರವೆ ಅಥವಾ ಅನ್ನ, ತುಪ್ಪ ಹಾಗೂ ಉಪ್ಪನ್ನು ಹಾಕಿ
ಜೊತೆಗೆ ಒಂದು ಸ್ಪೂನ್‌ ರಾಗಿಹಿಟ್ಟು ಹಾಕಿ ಕದಡಿ
ಆನಂತರ ಇದು ಕುದ್ದ ಮೇಲೆ ಮುಕ್ಕಾಲು ಲೋಟದಷ್ಟು ರಾಗಿಹಿಟ್ಟನ್ನು ಒಂದೇ ಜಾಗಕ್ಕೆ ಹಾಕಿ, ಬೆಟ್ಟದಂತೆ ಕಾಣಿಸುತ್ತದೆ
ಆನಂತರ ಇಪ್ಪತ್ತು ನಿಮಿಷಗಳು ಸಣ್ಣ ಉರಿಯಲ್ಲಿ ಬೇಯಿಸಿ
ನಂತರ ಎಲ್ಲವನ್ನೂ ಗಂಟಿಲ್ಲದಂತೆ ಮಿಕ್ಸ್‌ ಮಾಡಿ, ಒಂದು ಸ್ಪೂನ್‌ ತುಪ್ಪ ಹಾಕಿ ಮತ್ತೆ ಮುಚ್ಚಿ ಇಡಿ
ಎರಡು ನಿಮಿಷದ ಬಳಿಕ ಮುದ್ದೆ ಕಟ್ಟಿ ಬಿಸಿ ಬಿಸಿ ಸಾಂಬಾರ್‌ನೊಂದಿಗೆ ಸವಿಯಬಹುದು

Must Read