ARTICLE | ನಿಮಗೆ ಮೊಬೈಲ್ ಅಡಿಕ್ಷನ್ ಇದ್ಯಾ ಇಲ್ವಾ? ಹೀಗೆ ಚೆಕ್ ಮಾಡಿ..

ಈ ಹಿಂದೆ ಮೊಬೈಲ್ ಇರದಿದ್ದಾಗ ಎಷ್ಟೊಂದು ನಂಬರ್ ನೆನಪಿತ್ತು. ಏನಿಲ್ಲ ಅಂದರೂ ಆರೇಳು ಜನದ ನಂಬರ್ ಗಟ್ ಹೊಡೆದಿರುತ್ತಿದ್ವಿ. ಆದರೆ ಈಗ ಮೊಬೈಲ್‌ಗಳಿಗೆ ಹಾಕಿದ ಪಾಸ್‌ವರ್ಡ್ ಕೂಡ ನೆನಪಿರೋದಿಲ್ಲ. ಕೂತ್ರೂ ನಿಂತ್ರೂ ಮೊಬೈಲ್ ಮೇಲೆ ಅವಲಂಬಿತರಾಗಿದ್ದೀವಿ. ಮೊಬೈಲ್ ಬಳಕೆ ಮಾಡಿ, ಆದ್ರೆ ಅಡಿಕ್ಟ್ ಆಗ್ಬೇಡಿ. ನಿಮಗೆ ಮೊಬೈಲ್ ಅಡಿಕ್ಷನ್ ಇದ್ಯಾ ಇಲ್ವಾ? ಹೀಗೆ ಚೆಕ್ ಮಾಡಿ..

  • ಫೋನ್ ಇಲ್ಲದೇ ಕಂಪ್ಲೀಟ್ ಒಂದು ದಿನ ಇರೋಕೆ ಸಾಧ್ಯವೇ ಇಲ್ಲ.
  • ಫೋನ್ ನೋಡದೇ ಹೋದ್ರೆ ನಿದ್ದೆ ಬರೋದಿಲ್ಲ. ನಿದ್ದೆ ಬರ್ತಿಲ್ಲ ಅಂತ ಫೋನ್ ನೋಡ್ತಿರಿ.
  • ಮನೆಯಲ್ಲಿದ್ರೂ ಜೇಬಿನಲ್ಲಿ ಫೋನ್ ಇರುತ್ತದೆ.
  • ನೊಟಿಫಿಕೇಷನ್ಸ್ ಬಾರದೇ ಹೋದ್ರೂ ಆಗಾಗ ಮೊಬೈಲ್ ಚೆಕ್ ಮಾಡೋದು.
  • ಬೆಳಗ್ಗೆ ಎದ್ದ ತಕ್ಷಣ ಮೊಬೈಲ್ ತೆಗೆದು ನೋಡೋದು.
  • ರಾತ್ರಿ ಮಲಗುವ ಮುನ್ನ ಮೊಬೈಲ್ ಇಲ್ಲದೇ ಹೋದ್ರೆ ಒದ್ದಾಡೋದು
  • ಟಾಯ್ಲೆಟ್‌ಗೆ ಹೋದ್ರೂ ಫೋನ್ ತೆಗೆದುಕೊಂಡು ಹೋಗೋದು, ಮಿಸ್ ಆಗಿ ಫೋನ್ ಇಲ್ಲದೇ ಹೋದ್ರೆ ನಿತ್ಯ ಕರ್ಮಕ್ಕೂ ಕಷ್ಟ ಪಡೋದು.
  • ಯಾವಾಗಲೂ ಕಣ್ಣು ಉರಿ, ನಿದ್ದೆ ಮಾಡಿ ಎದ್ರೂ ಕಣ್ಣು ಫ್ರೆಶ್ ಆಗಿ ಇಲ್ಲದೇ ಇರೋದು
  • ಸ್ನೇಹಿತರಿಗಿಂತ ಮೊಬೈಲ್ ಬೆಸ್ಟ್ ಎನಿಸೋದು
  • ಹೊಟೇಲ್‌ನಲ್ಲಿ ಒಬ್ಬರೇ ಊಟ ಮಾಡೋಕೆ ಆಗದೇ ಮೊಬೈಲ್‌ನ್ನು ಜೊತೆ ಮಾಡಿಕೊಳ್ಳುವುದು.
  • ಅತಿಯಾಗಿ ಫೋನ್ ಬಳಕೆ, ಸಾಕಷ್ಟು ಸಾಮಾಜಿಕ ಜಾಲತಾಣಗಳ ಬಳಕೆ
  • ಮೊಬೈಲ್ ಬಳಸ್ತಾ ಸಮಯದ ಅರಿವಿಲ್ಲದೇ ಇರುವುದು, ಮೊಬೈಲ್ ಇದ್ರೆ ಎಲ್ಲ ಸಮಸ್ಯೆ ಪರಿಹಾರ ಆಗುತ್ತದೆ ಅನ್ನೋ ಮನೋಭಾವ.
  • ಚಾರ್ಜ್ ಖಾಲಿ ಆಗುತ್ತಿದ್ದಂತೆಯೇ ರೆಸ್ಟ್‌ಲೆಸ್‌ನೆಸ್, ಒತ್ತಡ.
  • ಫೋನ್ ಬಳಸಬಾರದ ಜಾಗ ಹಾಗೂ ಬಳಸಬಾರದ ಸಂದರ್ಭದಲ್ಲೂ ಫೋನ್ ಬಳಕೆ ಮಾಡುವುದು.
  • ಫೋನ್ ಇಲ್ಲದಾಗ ಅದನ್ನು ಮಿಸ್ ಮಾಡಿಕೊಳ್ಳುವುದು.

ಈ ರೀತಿ ಮೊಬೈಲ್‌ಗೆ ಅಡಿಕ್ಟ್ ಆಗುವುದನ್ನು ನೊಮೊಫೋಬಿಯಾ ಎಂದೂ ಕರೀತಾರೆ, ಮೊಬೈಲ್ ಇಲ್ಲದೇ ಹೋದ್ರೆ ನನ್ನ ಜೀವನ ಹೇಗೆ ಎಂದು ಇಮ್ಯಾಜಿನ್ ಮಾಡಲೂ ಭಯ ಪಡುತ್ತಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!