COMEDY SHOW | ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ ಇನ್ಮುಂದೆ ಟಿವಿಯಲ್ಲಿ ಅಲ್ಲ OTTಯಲ್ಲಿ ವೀಕ್ಷಿಸಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಿಂದಿಯ ಹಿಟ್ ಶೋ ‘ಫ್ಯಾಮಿಲಿ ಟೈಮ್ ವಿತ್ ಕಪಿಲ್ ಶರ್ಮಾ’, ‘ದಿ ಕಪಿಲ್ ಶರ್ಮಾ ಶೋ’ ಹಾಗೂ ಇನ್ನೂ ಅನೇಕ ಹೆಸರುಗಳೊಂದಿಗೆ ಶೋಗಳನ್ನು ಈಗಾಗಲೇ ನಡೆಸಿಕೊಟ್ಟಿದ್ದಾರೆ. ಇದೀಗ “ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ” ಎಂಬ ಹೊಸ ಹೆಸರಿನಲ್ಲಿ OTT ಗೆ ಲಗ್ಗೆ ಇಡಲು ಕಪಿಲ್ ಟೀಮ್ ರೆಡಿ ಆಗಿದೆ.

ಕಪಿಲ್ ಶರ್ಮಾ ಅವರ ಹಿಂದಿನ ಕಾರ್ಯಕ್ರಮಗಳನ್ನು ಸೋನಿ ಟಿವಿಯಲ್ಲಿ ಪ್ರಸಾರ ಮಾಡಲಾಗಿತ್ತು. ಆದರೆ ಈ ಬಾರಿ ಒಟಿಟಿ ಪ್ರವೇಶಿಸಲು ಅವಕಾಶ ನೀಡಲಾಗಿದೆ. ಮಾರ್ಚ್ 30 ರಿಂದ ಒಟಿಟಿಯಲ್ಲಿ ಪ್ರಾರಂಭವಾಗಲಿದೆ.

ಕಪಿಲ್ ಶರ್ಮಾ ಮತ್ತು ಸುನಿಲ್ ಗ್ರೋವರ್ ನಡುವೆ ಕೆಲವೊಂದು ವ್ಯಕ್ತಿಕ ಬಿನ್ನಾಬಿಪ್ರಾಯದಿಂದ ಇಬ್ಬರು ದೂರ ಇದ್ದರು. ಇದೀಗ ಸುಮಾರು ಆರು ವರ್ಷಗಳ ನಂತರ ಇಬ್ಬರೂ ಮತ್ತೆ ಒಂದಾಗಿದ್ದಾರೆ. ಇತ್ತೀಚೆಗಷ್ಟೇ ಕಪಿಲ್ ಶರ್ಮಾ ಹೇಳಿಕೆಯೊಂದನ್ನುನೀಡಿದ್ದರು. ಮನೆ ಬದಲಾದರೂ ಕುಟುಂಬ ಬದಲಾಗಿಲ್ಲ ಎಂದು ತಿಳಿಸಿದ್ದರು. ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ನಲ್ಲಿ ಇನ್ನೂ ಹಲವರು ಇರಲಿದ್ದಾರೆ. ಇದರ ಪ್ರಮೋಷನಲ್ ಟೀಸರ್ ನೋಡುಗರ ಗಮನ ಸೆಳೆದಿದೆ.

 

View this post on Instagram

 

A post shared by Netflix India (@netflix_in)

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!