LIFESTYLE | ಈ ಅಭ್ಯಾಸಗಳು ನಿಮ್ಮಲ್ಲೂ ಇದೆಯಾ? ಹಾಗಿದ್ರೆ ನೀವು ಬುದ್ದಿವಂತರೇ ಬಿಡಿ!

ಅನೇಕ ಮಂದಿಗೆ ಅನೇಕ ಯೋಚನೆಗಳು, ಅಭ್ಯಾಸಗಳು ಇರುತ್ತವೆ. ಈ ಅಭ್ಯಾಸಗಳು ಅನೇಕ ಬುದ್ದಿವಂತಿಕೆಯ ಸೂಚಕಗಳಾಗಿವೆ. ಇಂತಹ ಅಭ್ಯಾಸಗಳನ್ನು ನೀವು ಹೊಂದಿದ್ದೀರಾ? ಒಮ್ಮೆ ಚೆಕ್ ಮಾಡಿಕೊಳ್ಳಿ.

  • ಅನೇಕ ಮಂದಿಗೆ ಅನೇಕ ಅಭ್ಯಾಸಗಳಿರುತ್ತವೆ. ಅವುಗಳಲ್ಲಿ ವ್ಯಂಗ್ಯವನ್ನು ಆನಂದಿಸುವುದು ಕೂಡಾ ಒಂದು. ನೀವು ವ್ಯಂಗ್ಯ ಅಥವಾ ಕಾಮಿಡಿ ಮಾಡುವುದನ್ನು ತುಂಬಾನೇ ಇಷ್ಟ ಪಡುತ್ತೀರಾ? ವ್ಯಂಗ್ಯಾತ್ಮಕ ಹೇಳಿಕೆಗಳನ್ನು ಹೇಳಿದಾಗ ನೀವು ಅದನ್ನು ತಮಾಷೆಯಾಗಿ ತೆಗೆದುಕೊಳ್ಳುವಿರಾ? ಈ ರೀತಿಯ ಅಭ್ಯಾಸ ನಿಮ್ಮದಾಗಿದ್ರೆ ಅದು ಒಳ್ಳೆಯದು. ಇದು ಬುದ್ದಿವಂತಿಕೆಯ ಸಂಕೇತವಾಗಿ ಗುರುತಿಸಲ್ಪಡುತ್ತದೆ.
  • ಇನ್ನು ಅನೇಕ ಮಂದಿಗೆ ಒಬ್ಬಂಟಿಯಾಗಿ ಅಥವಾ ಏಕಾಂತವಾಗಿ ಇರುವುದನ್ನು ಆನಂದಿಸುವುದು ಅಭ್ಯಾಸವಾಗಿರುತ್ತದೆ. ಏಕಾಂಗಿಯಾಗಿರುವುದೇ ಖುಷಿಯೇ. ಅಥವಾ ಏಕಾಂತದಲ್ಲಿಯೇ ನಿಮಗೆ ಖುಷಿ ಸಿಗುತ್ತಿದೆಯೇ. ಇದು ಹೌದಾದರೆ ಏಕಾಂತವೆಂಬುದು ಹೆಚ್ಚಿನ ಬುದ್ದಿವಂತಿಕೆಯ ಸೂಚನೆಯಾಗಿ ಪರಿಗಣಿಸಲ್ಪಡುತ್ತದೆ. ಇಂತಹ ಅಭ್ಯಾಸವುಳ್ಳವರು ತಮ್ಮದೇ ಆಲೋಚನೆಗಳೊಂದಿಗೆ ಆರಾಮವಾಗಿರುತ್ತಾರೆ.
  • ಅನೇಕ ಮಂದಿಗೆ ಹಗಲು ಕನಸು ಕಾಡುವುದೇ ಒಂದು ಖುಷಿ. ತಮ್ಮದೇ ಗುಂಗಿನಲ್ಲಿ, ಕನಸಿನಲ್ಲಿ ಮುಳುಗಿರುವುದು ಕೆಲವೊಬ್ಬರ ಹವ್ಯಾಸ. ಇದಕ್ಕೆ ಚಿಂತಿಸಬೇಕಾಗಿಲ್ಲ. ಇಂಥಹವರು ಬೇರೆಯ ವಿಚಾರಕ್ಕೆ ಗಮನಕೊಡುವುದಿಲ್ಲ. ಇಂತಹ ಹವ್ಯಾಸ ನಿಮ್ಮಲ್ಲಿದ್ದರೆದ ನೀವು ಬುದ್ದಿವಂತರು ಎಂಬ ಸಂಕೇತ ಸ್ಪಷ್ಟ.
  • ಏನೇ ಆದರೂ ಮರೆತುಹೋಗುವುದು ಕೆಲವೊಬ್ಬರ ಅಭ್ಯಾಸ. ಜನರ ಮರೆಯುವಿಕೆ ಎಂಬುದು ಕೂಡಾ ಹೆಚ್ಚಿನ ಬುದ್ದಿವಂತಿಕೆಯ ಲಕ್ಷಣವಾಗಿದೆ.
  • ರಾತ್ರಿ ಹೊತ್ತು ಎಲ್ಲರೂ ಮಲಗಿದ್ದಾಗ ಇವರು ಯಾವುದಾದರೊಂದು ಕೆಲಸದಲ್ಲಿ ನಿರತರಾಗಿರುತ್ತಾರೆ. ಇಂತಹ ಹವ್ಯಾಸ ಯಾರಿಗಿದೆಯೋ ಖಂಡಿತವಾಗಿಯೂ ಅವರು ಬುದ್ದಿವಂತರಾಗಿರುತ್ತಾರೆ.
  • ಯಾವ ವಿಚಾರವಿದ್ದರೂ ಪ್ರಶ್ನಿಸುವ ಗುಣ ಹೊಂದಿದ್ದೇ ಆದಲ್ಲಿ ನೀವು ಬುದ್ದಿವಂತರ ಸಾಲಿಗೆ ಸೇರುತ್ತೀರಿ. ಯಾವ ವಿಷಯವೇ ಆಗಿರಲಿ ಪ್ರಶ್ನಿಸುವ ಗುಣ ನಿಮ್ಮದಾಗಿದ್ದರೆ ಉನ್ನತ ಮಟ್ಟದ ಬುದ್ದಿವಂತಿಕೆಯನ್ನು ನೀವು ಹೊಂದಿದ್ದೀರಿ ಎಂದರ್ಥ.
  • ಸಂತೋಷಕ್ಕಾಗಿ ಓದುವ ಅಭ್ಯಾಸ ಇನ್ನನೇಕರದ್ದು. ಓದುವುದನ್ನೇ ಒಂದು ಹವ್ಯಾಸವಾಗಿರಿಸಿ ಅದರಲ್ಲೇ ಖುಷಿ ಕಾಣುವುದು ಅವರ ಅಭ್ಯಾಸ. ಇದರಿಂದ ಜ್ಞಾನ ವೃದ್ಧಿಯಾಗುತ್ತದೆ. ವಿಶ್ಲೇಷಣಾತ್ಮಕ ಕೌಶಲ್ಯಗಳು ಲಭ್ಯವಾಗುತ್ತದೆ. ಈ ಅಭ್ಯಾಸ ಹೊಂದಿದವರು ಬುದ್ದಿವಂತರಾಗಿರುತ್ತಾರೆ.
  • ಹೊಸ ಹೊಸ ಸನ್ನಿವೇಶಗಳು ಮತ್ತು ಬದಲಾವಣೆಗೆ ಹೊಂದಿಕೊಳ್ಳುವ ಸಾಮರ್ಥ್ಯವು ಬುದ್ದಿವಂತಿಕೆಯನ್ನು ಸೂಚಿಸುತ್ತದೆ. ಆಯಾ ಕಾಲಕ್ಕೆ ಹೊಂದಿಕೊಳ್ಳುವ ಗುಣಧರ್ಮ ಹೊಂದಿದವರು ನಿಜವಾದ ಬುದ್ದಿವಂತರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!