ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ದೀಪಿಕಾ ಪಡುಕೋಣೆ ಯಾವಾಗಲೂ ಓಪನ್ ಆಗಿ ಮಾತನಾಡುತ್ತಾರೆ. ತಮ್ಮ ವಿಚಾರಗಳನ್ನು ಇದ್ದಂತೆಯೇ ಜನರ ಮುಂದೆ ಇಡುತ್ತಾರೆ.
ಇದೀಗ ದೀಪಿಕಾ ಬಾಡಿ ಶೇಮಿಂಗ್ ಬಗ್ಗೆ ಮಾತನಾಡಿದ್ದು, ನನಗೆ 18 ವರ್ಷ ಇದ್ದಾಗಲೇ ಬ್ರೆಸ್ಟ್ ಇಂಪ್ಲಾಂಟ್ ಮಾಡಿಸಿಕೊಳ್ಳೋಕೆ ಸಲಹೆ ನೀಡಿದ್ದರು ಎಂದು ಹೇಳಿದ್ದಾರೆ.
ಫಿಲ್ಮಂ ಫೇರ್ನಲ್ಲಿ ದೀಪಿಕಾಗೆ ಇದುವರೆಗೆ ನಿಮಗೆ ಬಂದಿರೋ ಕೆಟ್ಟ ಸಲಹೆ ಹಾಗೂ ಒಳ್ಳೆ ಸಲಹೆ ಯಾವುದು ಎಂದು ಕೇಳಿದಾಗ, ಸ್ತನ ಕಸಿ ಮಾಡಿಸಿಕೊಳ್ಳುವಂತೆ ನನ್ನ 18 ನೇ ವಯಸ್ಸಿನಲ್ಲೇ ನನಗೆ ಹೇಳಿದ್ದರು. ಇನ್ನು ಒಳ್ಳೆ ಸಲಹೆ ನೀಡಿದ್ದು ಶಾರುಖ್ ಖಾನ್, ಓಂ ಶಾಂತಿ ಓಂ ನಂತರ ನೀನು ಮುಂದೆ ದೊಡ್ಡ ಹೀರೋಯಿನ್ ಆಗುತ್ತೀಯಾ, ನಿನ್ನ ನಟನೆಯಿಂದ ಜನ ಗುರುತಿಸುತ್ತಾರೆ. ತಾಳ್ಮೆ ಇರಲಿ ಎಂದು ಶಾರುಖ್ ಹೇಳಿದ್ದರಂತೆ!