DO YOU KNOW? | ಹಾಗಲಕಾಯಿನೇ ಕಹಿ ಅನ್ಕೊಂಡಿದ್ದೀರಾ? ಅಲ್ಲ ಅದ್ಕಕಿಂತಲೂ ಕಹಿ ಪದಾರ್ಥವೊಂದಿದೆ!

ಸಿಹಿ ಮತ್ತು ಉಪ್ಪಿನ ರುಚಿಗಳಿಗೆ ಹೋಲಿಸಿದರೆ ಜಗತ್ತಿನಲ್ಲಿ ಅತ್ಯಂತ ಕಹಿಯಾದ ವಸ್ತುವನ್ನು ಕಂಡುಹಿಡಿಯುವುದು ತುಂಬಾ ಕಠಿಣದ ಕೆಲಸ. ಆದಾಗ್ಯೂ, ವಿಜ್ಞಾನಿಗಳು ಈ ಸವಾಲಿನ ಕೆಲಸದಲ್ಲಿ ಯಶಸ್ವಿಯಾಗಿ ಜಗತ್ತಿನ ಅತ್ಯಂತ ಕಹಿಯಾದ ವಸ್ತುವನ್ನು ಕಂಡುಹಿಡಿದಿದ್ದಾರೆ.

ಹೌದು, ಅಮರ್ಪೋಸ್ಥೇಷಿಯಾ ಸ್ಟಿಪೆಟಿಕಾ ಎಂಬ ಕಾಡಿನಲ್ಲಿ ಕಾಣಿಸುವ ಅಣಬೆಯು ಅತ್ಯಂತ ಕಹಿಯಾದ ವಸ್ತು ಎಂದು ಮ್ಯೂನಿಚ್‌ನ ತಾಂತ್ರಿಕ ವಿಶ್ವವಿದ್ಯಾಲಯದ ಲೀಬ್ನಿಜ್ ಇನ್‌ಸ್ಟಿಟ್ಯೂಟ್ ಫಾರ್ ಫುಡ್ ಸಿಸ್ಟಮ್ಸ್ ಬಯಾಲಜಿಯ ಸಂಶೋಧಕರು ಕಂಡುಹಿಡಿದಿದ್ದಾರೆ. ಇದನ್ನು “ಕಹಿ ಬೀಟ್ ಮಶ್ರೂಮ್” ಎಂದು ಕರೆಯಲಾಗುತ್ತದೆ. ಆದರಂತೆ, ಇದು ತನ್ನ ತೀವ್ರ ಕಹಿ ರುಚಿಗೆ ವಿಶ್ವ ವ್ಯಾಪಿಯಾಗಿ ಹೆಸರುವಾಸಿಯಾಗಿದೆ.

ಅತ್ಯಂತ ಕಹಿಯಾದ ವಸ್ತುವನ್ನು ಕಂಡುಹಿಡಿಯಲು, ವಿಜ್ಞಾನಿಗಳು ಕಹಿಯನ್ನು ಉಂಟುಮಾಡುವ 2,500 ಕ್ಕಿಂತಲೂ ಹೆಚ್ಚು ವಸ್ತುಗಳನ್ನು ಪರೀಕ್ಷಿಸಿದ್ದಾರೆ. ಅದರಲ್ಲಿ, 800 ವಸ್ತುಗಳನ್ನು ಮಾನವ ನಾಲಿಗೆಯಿಂದ ಗುರುತಿಸಲು ಪ್ರಯತ್ನಿಸಿದ್ದಾರೆ.

ಈ ಕಾಡು ಅಣಬೆಯು ಸತ್ತ ಮರಗಳ ಕಾಂಡಗಳು, ಕೊಂಬೆಗಳು ಮತ್ತು ಮರದ ಮೇಲೆ ಬೆಳೆಯುತ್ತದೆ. ಇದು ಹಳದಿ ಬಣ್ಣದ್ದಾಗಿದ್ದು, ಮೇಣದಂತೆ ಮೃದುವಾಗಿರುತ್ತದೆ ಮತ್ತು ಸ್ಪರ್ಶಕ್ಕೆ ಜಿಗುಟಾಗಿರುತ್ತದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!