ಭಯಮುಕ್ತ ಪೂರ್ವಾಂಚಲ ನಿರ್ಮಾಣವಾಗಿದ್ದು ಹೇಗೆ ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್

ಗುವಾಹಟಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ‘ಮೃತ್ಯುಂಜಯೀ ವೀರ್ – ಉತ್ತರ ಪೂರ್ವಾಂಚಲದ ತ್ಯಾಗದ ಕಥೆ’ ಪುಸ್ತಕವನ್ನು ಗುವಾಹಟಿಯಲ್ಲಿ ಬಿಡುಗಡೆ ಮಾಡಿದರು.

ಕಳೆದ 20 ವರ್ಷಗಳಿಂದ ಉತ್ತರ ಪೂರ್ವಾಂಚಲ್‌ನಲ್ಲಿ ಪ್ರಚಾರಕರಾಗಿದ್ದ, ಪ್ರಸ್ತುತ ವನವಾಸಿ ಕಲ್ಯಾಣ ಆಶ್ರಮದ ಅಖಿಲ ಭಾರತ ಸಹ-ಸಂಘಟನಾ ಕಾರ್ಯದರ್ಶಿ ಸಂದೀಪ್ ಕವಿಶ್ವರ್ ಅವರು ಈ ಪುಸ್ತಕವನ್ನು ಬರೆದಿದ್ದಾರೆ. ಈ ಪ್ರದೇಶದಲ್ಲಿ ರಾಷ್ಟ್ರೀಯ ಸಮಗ್ರತೆ ಮತ್ತು ಧರ್ಮ ಮತ್ತು ಸಂಸ್ಕೃತಿಯ ರಕ್ಷಣೆಗಾಗಿ ಬಲಿದಾನ ಮಾಡಿದ ಸಮಾಜ ಸೇವಕರ ತ್ಯಾಗದ ಬಗ್ಗೆ ಈ ಪುಸ್ತಕದಲ್ಲಿ ಮಾಹಿತಿ ನೀಡಲಾಗಿದೆ.

ಉತ್ತರ ಪೂರ್ವಾಂಚಲದಂತಹ ಕ್ಲಿಷ್ಟಕರ ಮತ್ತು ಸಮಸ್ಯಾತ್ಮಕ ಪ್ರದೇಶದಲ್ಲಿ ದೇಶಭಕ್ತಿ, ರಾಷ್ಟ್ರೀಯ ಏಕೀಕರಣ, ಸ್ವಧರ್ಮದ ಬಗ್ಗೆ ಮಾತನಾಡುವುದು ಒಂದು ಕಾಲದಲ್ಲಿ ಕಷ್ಟಕರವಾಗಿತ್ತು. ಆದರೂ ಇತರ ಪ್ರಾಂತ್ಯಗಳಿಂದ ಬಂದಿರುವ ಸಂಘ ಪ್ರಚಾರಕರು ನಿರ್ಭೀತಿಯಿಂದ ದೇಶ ಭಕ್ತಿಯನ್ನು ಕಲಿಸಿ, ಈ ದೇಶವು ಮಾರಣಾಂತಿಕ ಶಕ್ತಿಗಳ ಒತ್ತಡವನ್ನು ಹೇಗೆ ಸಹಿಸಿಕೊಳ್ಳಬಲ್ಲದು? ಮತ್ತು ಈ ಪ್ರದೇಶವನ್ನು ಆಳುವ ಅವರ ಕನಸುಗಳು ಹೇಗೆ ಈಡೇರುತ್ತವೆ? ಎಂಬುದನ್ನು ಕಲಿಸಿದರು. ಅಂತಹ ವಾತಾವರಣದಲ್ಲಿ ಸ್ಥಳೀಯ ಕಾರ್ಯಕರ್ತರು ದೃಢವಾಗಿ ನಿಂತರು. ಈ ಕಾರ್ಯಕರ್ತರ ವಿರುದ್ಧ ಬೆದರಿಕೆಗಳು ಕೆಲಸ ಮಾಡದಿದ್ದಾಗ, ಅವರ ಹತ್ಯೆಗಳನ್ನೂ ಮಾಡಿದರು.

ಆದರೆ ಈ ತ್ಯಾಗಗಳು ರಾಷ್ಟ್ರೀಯ ಏಕೀಕರಣದ ಈ ಪವಿತ್ರ ಕಾರ್ಯವನ್ನು ನಿಲ್ಲಿಸಲಿಲ್ಲ. ಆದರೆ ಇತರ ಪ್ರಾಂತ್ಯಗಳು ಮತ್ತು ಸ್ಥಳೀಯ ಸಮಾಜದ ಕಾರ್ಯಕರ್ತರ ಸಂಖ್ಯೆಯು ಹೆಚ್ಚುತ್ತಲೇ ಇತ್ತು. ಇದರ ಪರಿಣಾಮ ಇಂದು ದೇಶಭಕ್ತಿ, ಭಯ ಮುಕ್ತ ಪೂರ್ವಾಂಚಲ ಗೋಚರಿಸುತ್ತದೆ. ಈ ಪುಸ್ತಕದಲ್ಲಿ ಅಂತಹ 12 ಕಾರ್ಯಕರ್ತರ ಬಗ್ಗೆ ಮಾಹಿತಿ ನೀಡಲಾಗಿದೆ. ಪುಸ್ತಕವನ್ನು ಪ್ರಾಚಿ ಪ್ರಕಾಶನ ಪ್ರಕಟಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!