ಕೋವಿಡ್ ಮಾಹಿತಿ ಕೋರಿ ಸಹಾಯವಾಣಿಗೆ ಬಂದ ಕರೆಗಳು ಎಷ್ಟು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೋವಿಡ್ ಮಹಾಮಾರಿ ಸಂಬಂಧ ಸ್ಥಾಪಿಸಲಾಗಿದ್ದ ಸಹಾಯವಾಣಿ 1075ಗೆ ಮಾಹಿತಿ ಕೋರಿ ಸೆಪ್ಟೆಂಬರ್ 2021ರಿಂದ 2022ರ ಆಗಸ್ಟ್ ತನಕ ಬಂದಿರುವ ಕರೆಗಳ ಅಂಕಿ ಅಂಶವನ್ನು ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದೆ.

ಈ ಅವಧಿಯಲ್ಲಿ ಮಾಹಿತಿಗಾಗಿ 6.62 ಲಕ್ಷಕ್ಕೂ ಅಧಿಕ ಕರೆಗಳು ಬಂದಿದ್ದರೆ, ’ಕೋವಿನ್’ ಪೋರ್ಟಲ್‌ನಲ್ಲಿ ನೋಂದಣಿ ಹಾಗೂ ಲಸಿಕೆ ಪಡೆಯಲು ದಿನ ನಿಗದಿಗಾಗಿ ಇದೇ ಅವಧಿಯಲ್ಲಿ 7.55 ಲಕ್ಷಕ್ಕೂ ಅಧಿಕ ಕರೆಗಳು ಬಂದಿವೆ ಎಂದು ಸಚಿವಾಲಯ ತಿಳಿಸಿದೆ. ಕೋವಿಡ್ ದೇಶದಲ್ಲಿ ವ್ಯಾಪಕವಾಗಿ ಹರಡಲು ಆರಂಭವಾದ ಬೆನ್ನಿಗೇ 2020ರ ಮಾರ್ಚ್ 15ರಿಂದ ಈ ಸಹಾಯವಾಣಿ ಕಾರ್ಯಾರಂಭ ಮಾಡಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!