ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಟಮಂತ್ರದಲ್ಲಿ ತೊಡಗಿರುವ ಆರೋಪದ ಮೇಲೆ ಒಂದೇ ಕುಟುಂಬದ ನಾಲ್ವರು ಮಹಿಳೆಯರಿಗೆ ಮನುಷ್ಯರ ಮಲ ತಿನ್ನಿಸಿದ ಅಮಾನವೀಯ ಘಟನೆ ಜಾರ್ಖಂಡ್‌ನಲ್ಲಿ ನಡೆದಿದೆ.
ಜಾರ್ಖಂಡ್‌ನ ಡುಮ್ಕಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಆರು ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮಾಟ ಮಂತ್ರದ ಆರೋಪದ ಮೇಲೆ ಮಲ ತಿನ್ನಿಸಿದ್ದು, ನಾಲ್ವರ ಆರೋಗ್ಯ ಹದಗೆಟ್ಟಿದೆ. ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಮನೆಯಲ್ಲಿ ಮಾಟ ಮಂತ್ರ ಮಾಡುತ್ತಿದ್ದಾರೆ ಎಂದು ನಂಬಿದ ಜನ, ಕುಟುಂಬದ ನಾಲ್ವರನ್ನು ಥಳಿಸಿದ್ದಾರೆ, ನಂತರ ಬಾಟಲಿಗಳಲ್ಲಿ ಮಲ ತುಂಬಿಸಿ, ತಿನ್ನುವಂತೆ ಮಾಡಿದ್ದಾರೆ. ಹಾಗೂ ಕಬ್ಬಿಣದ ರಾಡ್‌ಗಳನ್ನು ಬಿಸಿ ಮಾಡಿ ಬರೆ ಹಾಕಿದ್ದಾರೆ ಎನ್ನಲಾಗಿದೆ.