DO YOU KNOW | ಈ ದೇಶಗಳಲ್ಲಿ ರಾಷ್ಟ್ರಗೀತೆನೇ ಇಲ್ವಂತೆ! ಇದರ ಹಿಂದಿನ ಕಾರಣ ಏನು ಗೊತ್ತಾ?

ರಾಷ್ಟ್ರಗೀತೆ ಒಂದು ದೇಶದ ಸಂಸ್ಕೃತಿ, ಏಕತೆ ಸಾರುವ ಗುರುತು. ಇದನ್ನು ಸಾಮಾನ್ಯವಾಗಿ ರಾಜಕೀಯ ಕಾರ್ಯಕ್ರಮಗಳು, ಕ್ರೀಡಾಕೂಟ, ಶಾಲೆ-ಕಾಲೇಜುಗಳ ಸಮಾರಂಭಗಳು ಮತ್ತು ರಾಷ್ಟ್ರೀಯ ಆಚರಣೆಗಳ ಸಂದರ್ಭದಲ್ಲಿ ಹಾಡಲಾಗುತ್ತದೆ. ಆದರೆ ನಿಮಗೆ ಗೊತ್ತಾ ವಿಶ್ವದ ಹಲವು ರಾಷ್ಟ್ರಗಳಲ್ಲಿ ರಾಷ್ಟ್ರಗೀತೆಯೇ ಇಲ್ಲ. ಅವು ಯಾವ ರಾಷ್ಟ್ರಗಳು ಎಂದು ತಿಳಿದುಕೊಳ್ಳೋಣ.

ಬೋಸ್ನಿಯಾ ಮತ್ತು ಹರ್ಜೆಗೋವಿನಾ: ಈ ದೇಶವು 1999ರಿಂದ 2001ರವರೆಗೆ ರಾಷ್ಟ್ರಗೀತೆಯಿಲ್ಲದೆ ಇತ್ತು. ನಂತರ “ಇಂಟರ್‌ಮೆಝೋ” ಎಂಬ ವಾದ್ಯ ಸಂಗೀತವನ್ನು ರಾಷ್ಟ್ರಗೀತೆಯಾಗಿ ಆಯ್ಕೆ ಮಾಡಲಾಯಿತು. ಆದರೆ, ಈ ರಾಷ್ಟ್ರಗೀತೆಗೆ ಸಾಹಿತ್ಯವಿಲ್ಲ.

ಸೈಪ್ರಸ್: ಸೈಪ್ರಸ್ ದೇಶವು ಅಧಿಕೃತವಾಗಿ ರಾಷ್ಟ್ರಗೀತೆಯನ್ನು ಹೊಂದಿಲ್ಲ. ಇದಕ್ಕೆ ಮುಖ್ಯ ಕಾರಣವೆಂದರೆ ದೇಶದ ಒಳಗಿನ ರಾಜಕೀಯ ವಿಭಜನೆ. ಸೈಪ್ರಸ್‌ನಲ್ಲಿ ಗ್ರೀಕ್ ಸೈಪ್ರಿಯಾಟ್‌ಗಳು ಮತ್ತು ಟರ್ಕಿಶ್ ಸೈಪ್ರಿಯಾಟ್‌ಗಳೆಂಬ ಎರಡು ಪ್ರಮುಖ ಸಮುದಾಯಗಳಿವೆ. ಈ ಸಮುದಾಯಗಳ ವಿಭಜನೆಯಿಂದಾಗಿ ಏಕೀಕೃತ ರಾಷ್ಟ್ರಗೀತೆಯನ್ನು ಆಯ್ಕೆ ಮಾಡಲು ಸಾಧ್ಯವಾಗಿಲ್ಲ.

ಕೊಸೊವೊ: ಕೊಸೊವೊದ ರಾಷ್ಟ್ರಗೀತೆ “ಯೂರೋಪ್” ಎಂಬ ವಾದ್ಯ ಸಂಗೀತವಾಗಿದ್ದು, ಇದಕ್ಕೂ ಸಾಹಿತ್ಯವಿಲ್ಲ. ಕೊಸೊವೊದ ವಿವಿಧ ಜನಾಂಗೀಯ ಗುಂಪುಗಳಾದ ಅಲ್ಬೇನಿಯನ್ನರು, ಸರ್ಬ್‌ಗಳು ಮತ್ತು ಇತರರು ಒಂದೇ ಸಾಹಿತ್ಯದ ಮೇಲೆ ಒಮ್ಮತಕ್ಕೆ ಬರದ ಕಾರಣ, ಸಾಹಿತ್ಯವಿಲ್ಲದ ಸಂಗೀತವನ್ನೇ ರಾಷ್ಟ್ರಗೀತೆಯಾಗಿ ಆಯ್ಕೆ ಮಾಡಲಾಗಿದೆ.

ಸ್ಯಾನ್ ಮರೀನೊ: ಸ್ಯಾನ್ ಮರೀನೊ ದೇಶದ ರಾಷ್ಟ್ರಗೀತೆಗೆ ಸಾಹಿತ್ಯವಿಲ್ಲ. “ಇನೊ ನಾಜಿಯೊನೇಲ್ ಡೆಲಾ ರಿಪಬ್ಬ್ಲಿಕಾ” ಎಂಬ ವಾದ್ಯ ಸಂಗೀತವನ್ನು ರಾಷ್ಟ್ರಗೀತೆಯಾಗಿ ಬಳಸಲಾಗುತ್ತದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!