ಏನಿದು ಜಗತ್ತಿನಲ್ಲಿ ಚರ್ಚೆಯಾಗುತ್ತಿರುವ ಭಾರತದ ಸುದರ್ಶನ ಚಕ್ರ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಮೇಲೆ ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿಗೆ ತಕ್ಕ ಪಾಠ ಕಲಿಸಿದ ಭಾರತೀಯ ವಾಯುಪಡೆ ಕ್ಷೀಪಣಿ ದಾಯನ್ನು ವಿಫಲಗೊಳಿಸುವಲ್ಲಿ ಯಶಸ್ವಿಯಾಗಿದೆ.

ಚಂಡೀಗಢ, ಆವಂತಿಪೊರ, ಜಲಂಧರ್, ಲೂಧಿಯಾನ, ಅಮೃತಸರ, ಪಠಾಣಕೋಟ್, ಕಪೂರ್ತಲಾ, ನಲ, ಫಲೋಡಿ, ಉತ್ತರಲೈ, ಭುಜ್, ಜಮ್ಮು, ಶ್ರೀನಗರ, ಆಧಂಪುರ, ಭಟಿಂಡಾ ಮೇಲೆ ಪಾಕ್ ಕ್ಷೀಪಣಿ​ ದಾಳಿಗೆ ಯತ್ನಿಸಿದೆ. ಆದ್ರೆ, ಇದನ್ನು ಭಾರತದ ಎಸ್​-400 ಏರ್​ ಡಿಫೆನ್ಸ್​​ ಸಿಸ್ಟಂ ಹೊಡೆದುರುಳಿಸಿದೆ. ಈ ಬಗ್ಗೆ ಭಾರತ ಅಧಿಕೃತವಾಗಿ ಖಚಿತಪಡಿಸಿದೆ.

ಇತ್ತ ಭಾರತದ ರಕ್ಷಣೆಗೆ ಬಳಕೆಯಾಗಿದ್ದು ಅಮೆರಿಕಾದ ವಿರೋಧದ ನಡುವೆಯೇ ಭಾರತ ಖರೀದಿಸಿದ್ದ S-400 ಏರ್ ಡಿಫೆನ್ಸ್ ಸಿಸ್ಟಮ್.

ಭಾರತದ 15 ನಗರಗಳ ಮೇಲೆ ಪಾಕಿಸ್ತಾನ ಮಿಸೈಲ್ ದಾಳಿ ನಡೆಸಿದ್ದು, ಇದನ್ನು S-400 ಏರ್ ಡಿಫೆನ್ಸ್ ಸಿಸ್ಟಮ್ ಸಂಪೂರ್ಣವಾಗಿ ವಿಫಲಗೊಳಿಸಿದೆ. ಈ S-400 ಏರ್ ಡಿಫೆನ್ಸ್ ಸಿಸ್ಟಮ್, ಇಸ್ರೇಲ್‌ನ ಐರನ್ ಡೋಮ್ ರೀತಿ ಕೆಲಸ ಮಾಡುತ್ತೆ. ಭಾರತಕ್ಕೆ ವೈರಿ ರಾಷ್ಟ್ರಗಳ ವಾಯು ದಾಳಿ, ಮಿಸೈಲ್ ದಾಳಿಯಿಂದ ಇದು ಸಂಪೂರ್ಣ ರಕ್ಷಣೆ ನೀಡುತ್ತೆ. S-400 ಅನ್ನು ಸುದರ್ಶನ ಚಕ್ರ ಅಂತ ಕರೆಯಲಾಗುತ್ತೆ.

ಭಾರತವು ರಷ್ಯಾದಿಂದ ಐದು ಸ್ಕ್ವಾಡ್ರನ್‌ಗಳನ್ನು ಖರೀದಿಸಿದ್ದು, ಈ ಐದು S-400 ಸ್ಕ್ವಾಡ್ರನ್‌ಗಳಿಗೆ 35,000 ಕೋಟಿ ರೂ.ಗಳ ಒಪ್ಪಂದಕ್ಕೆ 2018 ರಲ್ಲಿ ಸಹಿ ಹಾಕಲಾಯಿತು. ಈ ಐದರಲ್ಲಿ ಈಗಾಗಲೇ ಮೂರು S-400 ಸ್ಕ್ವಾಡ್ರನ್​ಗಳು ಭಾರತ ರಕ್ಷಣಾ ಕ್ಷೇತ್ರಕ್ಕೆ ಸೇರ್ಪಡೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಇನ್ನುಳಿದ ಎರಡು 2026ರ ವೇಳೆಗೆ ಬರುವ ನಿರೀಕ್ಷೆಯಿದೆ. 2019ರ ಪುಲ್ವಾಮಾ ದಾಳಿಯ ಬಳಿಕ ಭಾರತ ರಷ್ಯಾದಿಂದ ಈ S-400 ಏರ್ ಡಿಫೆನ್ಸ್ ಸಿಸ್ಟಮ್ ಅನ್ನು ಖರೀದಿ ಮಾಡಿದೆ. ಆಗ ರಷ್ಯಾದಿಂದ ಎಸ್‌-400 ಖರೀದಿಸಿದರೆ ಭಾರತದ ಮೇಲೆ ಕೆಲ ನಿರ್ಬಂಧ ವಿಧಿಸುವುದಾಗಿ ಅಮೆರಿಕಾ ಬೆದರಿಕೆ ಹಾಕಿತ್ತು. ಆದರೆ ಅಮೆರಿಕಾದ ಬೆದರಿಕೆಗೂ ಜಗ್ಗದ ಭಾರತ, ತನ್ನ ರಕ್ಷಣೆಗಾಗಿ ಏರ್ ಡಿಫೆನ್ಸ್ ಸಿಸ್ಟಮ್ ಬೇಕೆಂದು ಖರೀದಿಸಿತ್ತು.

S-400 ಎಷ್ಟು ಬಲಶಾಲಿ ಗೊತ್ತಾ?
ಸುದರ್ಶನ ಚಕ್ರ ಎಂದು ಕರೆಯಲ್ಪಡುವ ಎಸ್​-400 ವಾಯು ರಕ್ಷಣಾ ವ್ಯವಸ್ಥೆಗಳಿಂದ ಪಾಕ್​ನ​​​ ಡ್ರೋನ್ ಹಾಗೂ ಕ್ಷೀಪಣಿಗಳನ್ನು ಹೊಡೆದುಹಾಕಿದೆ. ರಷ್ಯಾ ನಿರ್ಮಿತ ಈ ಎಸ್​-400 ಸಿಸ್ಟಮ್​ ವಿಶ್ವದಲ್ಲೇ ಅತ್ಯಂತ ಅಡ್ವಾನ್ಸಡ್​ ಸಿಸ್ಟಮ್​​ಗಳಲ್ಲಿ ಒಂದಾಗಿದ್ದು, 600 ಕಿಲೋಮೀಟರ್​​ ದೂರದವರೆಗಿನ ಗುರಿಗಳನ್ನು ಪತ್ತೆ ಹಚ್ಚುವಲ್ಲಿ ಮತ್ತು 400 ಕಿಲೋಮೀಟರ್​ಗಳವರೆಗಿನ ಗುರಿಗಳನ್ನು ತಡೆಯುವ ಸಾಮಾರ್ಥ್ಯವನ್ನು ಹೊಂದಿದೆ.

400 ಕಿಮೀ ವರೆಗಿನ ವ್ಯಾಪ್ತಿಯಲ್ಲಿ ರಹಸ್ಯ ವಿಮಾನಗಳು, ಫೈಟರ್ ಜೆಟ್‌ಗಳು, ಡ್ರೋನ್‌ಗಳು ಮತ್ತು ಕ್ಷಿಪಣಿಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವೈಮಾನಿಕ ದಾಳಿಯನ್ನು ಪತ್ತೆಹಚ್ಚುವ ತಾಕತ್ತು ಇದಕ್ಕಿದೆ. ಅಲ್ಲದೇ 400 ಕಿಮೀ ದೂರದಿಂದಲೇ ಬರುವ ವೈರಿ ರಾಷ್ಟ್ರಗಳ ಮಿಸೈಲ್ ಅನ್ನು ಪತ್ತೆ ಹಚ್ಚಿ ಹೊಡೆದುರುಳಿಸುತ್ತದೆ. S-400 ಏಕಕಾಲಕ್ಕೆ 72 ವೈರಿ ಮಿಸೈಲ್ ದಾಳಿಯನ್ನು ಪತ್ತೆ ಹಚ್ಚಿ ನಾಶಪಡಿಸುವ ಶಕ್ತಿ ಇದಕ್ಕಿದೆ.

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!