ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಟೋಲ್ ಶುಲ್ಕ ಎಷ್ಟು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇಯಲ್ಲಿ ಮಾರ್ಚ್ ಅಂತ್ಯದಿಂದ ಟೋಲ್ ಸಂಗ್ರಹ ಪ್ರಾರಂಭವಾಗುವ ಸಾಧ್ಯತೆ ಇದೆ. ಕಾರ್‌ಗಳಿಗೆ ಒನ್‌ವೇ 255 ರೂಪಾಯಿ ಟೋಲ್ ದರ ವಿಧಿಸುವ ಸಾಧ್ಯತೆ ಇದೆ.

ಇಂದು ಬೆಂಗಳೂರಿನಿಂದ ಮದ್ದೂರುವರೆಗಿನ ಟೋಲ್ ಆರಂಭವಾಗಬೇಕಿತ್ತು, ಕಾರ್‌ಗಳಿಗೆ ಇದರ ಬೆಲೆ 135 ರೂಪಾಯಿಗಳಾಗಿರಲಿದೆ. ಅರ್ಧ ಟೋಲ್ ಸಂಗ್ರಹವನ್ನು ಮುಂದೂಡಲಾಗಿದೆ.

118 ಕಿ.ಮೀ ಹೆದ್ದಾರಿ ಇದಾಗಿದ್ದು, ಇನ್ನೂ ಸಣ್ಣ ಪುಟ್ಟ ಕೆಲಸಗಳು ಬಾಕಿ ಇವೆ. ಒಟ್ಟಾರೆ ಎರಡು ಟೋಲ್ ಪಾಯಿಂಟ್‌ಗಳಿದ್ದು, ಬೆಂಗಳೂರು ಮತ್ತು ಮದ್ದೂರಿನಿಂದ 135 ರೂಪಾಯಿ ಹಾಗೂ ಮದ್ದೂರಿನಿಂದ ಮೈಸೂರಿಗೆ 120 ರೂಪಾಯಿ ಚಾರ್ಜ್ ಆಗಲಿದೆ.

ಮಾರ್ಚ್ 11 ರಂದು ಪ್ರಧಾನಿ ಮೋದಿ ಎಕ್ಸ್‌ಪ್ರೆಸ್ ವೇ ಉದ್ಘಾಟನೆ ಮಾಡಲಿದ್ದು,ಮಾ. 15 ರಿಂದ ಬೆಂಗಳೂರು ಮತ್ತು ಮದ್ದೂರಿನ ನಡುವಿನ ಅರ್ಧದಷ್ಟು ಟೋಲ್ ಸಂಗ್ರಹಣೆ ಆರಂಭವಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!