CINE | ಆದಿಪುರುಷ್‌ಗೆ ಸಖತ್ ಡಿಮ್ಯಾಂಡ್ ಟಿಕೆಟ್ ರೇಟ್ ಎಷ್ಟು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಹುನಿರೀಕ್ಷಿತ ಆದಿಪುರುಷ್ ಸಿನಿಮಾ ಜೂ.16ರಂದು ರಿಲೀಸ್ ಆಗಲಿದೆ. ಈಗಾಗಲೇ ಸಿನಿಮಾಗೆ ಸಾಕಷ್ಟು ಹೈಪ್ ಸಿಕ್ಕಿದ್ದು, ಟಿಕೆಟ್‌ಗಳು ಬುಕ್ಕಿಂಗ್ ಆಗುತ್ತಿವೆ.

ದೆಹಲಿ ಹಾಗೂ ಮುಂಬೈ ನಗರದಲ್ಲಿ ಅತೀ ದುಬಾರಿ ಅಂದ್ರೆ ಎರಡು ಸಾವಿರ ರೂಪಾಯಿಗೆ ಟಿಕೆಟ್ ಮಾರಾಟವಾಗಿದೆ. ದೊಡ್ಡ ಬಜೆಟ್‌ನಲ್ಲಿ ನಿರ್ಮಾಣವಾದ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇದೆ, ಮೊದಲ ದಿನದ ಟಿಕೆಟ್‌ಗಳು ಎರಡು ಸಾವಿರ ರೂಪಾಯಿಗೆ ಬುಕ್ಕಿಂಗ್ ಆಗಿವೆ.

ಅಲ್ಲದೇ ರಣ್‌ಬೀರ್ ಕಪೂರ್ ಈಗಾಗಲೇ 10 ಸಾವಿರ ಟಿಕೆಟ್‌ಗಳನ್ನು ಬುಕ್ ಮಾಡಿದ್ದು, ಬಡ ಮಕ್ಕಳಿಗೆ ಸಿನಿಮಾ ತೋರಿಸಲಿದ್ದಾರೆ. ಟಾಲಿವುಡ್ ನಿರ್ಮಾಪಕ ಅಭಿಷೇಕ್ ಅಗರ್ವಾಲ್ ಕೂಡ ಟಿಕೆಟ್10 ಸಾವಿರ ಟಿಕೆಟ್ ಖರೀದಿ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!