CINE| ಇಂತಹ ಸಿನಿಮಾಗಳಿಂದ ಹೀರೋಗಳಿಗೆ ಮಾತ್ರ ಮನ್ನಣೆ ಸಿಗುತ್ತೆ, ನಮಗಲ್ಲ- ಹೀಗಂದಿದ್ಯಾಕೆ ತಮನ್ನಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸ್ಟಾರ್ ಹೀರೋಯಿನ್ ತಮನ್ನಾ ಚಿತ್ರರಂಗಕ್ಕೆ ಬಂದು 17 ವರ್ಷಗಳ ನಂತರವೂ ಅವರು ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಸಿನಿಮಾ ಅವಕಾಶಗಳನ್ನು ಗಳಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಬಾಲಿವುಡ್ ನಟ ವಿಜಯ್ ವರ್ಮಾ ಜೊತೆ ರಿಲೇಶನ್ ಶಿಪ್ ನಲ್ಲಿದ್ದಾರೆ ಎಂಬ ಸುದ್ದಿ ಬಂದಾಗ ಹೌದು ಎನ್ನುವ ಮೂಲಕ ಸ್ಪಷ್ಟನೆ ನೀಡಿದ್ದರು. ತಮನ್ನಾ ಶೀಘ್ರದಲ್ಲೇ ಲಸ್ಟ್ ಸ್ಟೋರೀಸ್ 2 ಚಿತ್ರದೊಂದಿಗೆ ಬರಲಿದ್ದಾರೆ. ಈ ಚಿತ್ರದ ಪ್ರಚಾರದ ಭಾಗವಾಗಿ ತಮನ್ನಾ ನೀಡಿದ ಸಂದರ್ಶನದಲ್ಲಿ ಬಾಹುಬಲಿ ಚಿತ್ರದ ಬಗ್ಗೆ ಸೆನ್ಸೇಷನಲ್ ಕಾಮೆಂಟ್ಗಳನ್ನು ಮಾಡಿದ್ದಾರೆ.

`ಬಾಹುಬಲಿಯಂತಹ ಆಕ್ಷನ್ ಸಿನಿಮಾಗಳು ನಾಯಕರಿಗೆ ಹೆಚ್ಚು ಮನ್ನಣೆ ನೀಡುತ್ತವೆ. ಹಾಗಾಗಿಯೇ ಈ ಸಿನಿಮಾದ ಮೂಲಕ ಪ್ರಭಾಸ್ ಮತ್ತು ರಾಣಾ ಪ್ರಪಂಚದಾದ್ಯಂತ ಗುರುತಿಸಿಕೊಂಡರು. ಈ ಸಿನಿಮಾದಲ್ಲಿ ನಟಿಸಿದ್ದ ರಮ್ಯಾ ಕೃಷ್ಣ ಮತ್ತು ಅನುಷ್ಕಾ ಕೂಡ ಒಂದಷ್ಟು ಜನಮನ್ನಣೆ ಗಳಿಸಿದ್ದಾರೆ. ಬಾಹುಬಲಿ ಸಿನಿಮಾದಿಂದ ನನಗೆ ಅಷ್ಟೊಂದು ಮನ್ನಣೆ ಸಿಗಲಿಲ್ಲ. ಬಾಹುಬಲಿ ಯಶಸ್ಸನ್ನು ಎಲ್ಲರೂ ಬಳಸಿಕೊಂಡರು. ನಾನು ಹಾಗೆ ಮಾಡಲಾಗಲಿಲ್ಲ. ನನ್ನ ಪಾತ್ರ ಚಿಕ್ಕದಾದರೂ ಪ್ರೇಕ್ಷಕರು ಇಷ್ಟಪಟ್ಟಿದ್ದಾರೆʼ ಎಂದ ತಮನ್ನಾ ಅವರ ಕಾಮೆಂಟ್ ವೈರಲ್ ಆಗಿದೆ.

ಬಾಹುಬಲಿ ಚಿತ್ರದಲ್ಲಿ ತಮನ್ನಾ ಆವಂತಿಕಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಭಾಗ-1 ರಲ್ಲಿ, ಸ್ವಲ್ಪ ಸಮಯದವರೆಗೆ ಇವರ ಪಾತ್ರವಿದೆ.  ಆದರೆ ಭಾಗ 2 ರಲ್ಲಿ, ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ತಮನ್ನಾ ಈ ರೀತಿ ಮಾತನಾಡುವುದರೊಂದಿಗೆ ಚರ್ಚೆ ಶುರುವಾಗಿವೆ. ಇದಕ್ಕೆ ಬಾಹುಬಲಿ ಯೂನಿಟ್ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ನೋಡೋಣ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!