ಎಸಿಸಿ, ಅಂಬುಜಾ ಸಿಮೆಂಟ್‌ ಸ್ವಾಧೀನಪಡಿಸಿಕೊಳ್ಳೋಕೆ ಅದಾನಿ ಸಮೂಹ ನೀಡಿದ ಆಫರ್‌ ಎಷ್ಟು ಗೊತ್ತಾ ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಅದಾನಿ ಸಮೂಹವು ವ್ಯಾಪಕವಾಗಿ ವಿಸ್ತರಿಸಿಕೊಳ್ಳುತ್ತಿರುವುದು ತಿಳಿದಿರುವ ವಿಷಯ. ಪ್ರಸ್ತುತ ಅದಾನಿ ಸಮೂಹವು ಸಿಮೆಂಟ್‌ ಕ್ಷೇತ್ರಕ್ಕೆ ಕಾಲಿಡುತ್ತಿದ್ದು ಎಸಿಸಿ ಹಾಗೂ ಅಂಬುಜಾ ಸಿಮೆಂಟ್ಸ್‌ ಕಂಪನಿಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿದೆ. ಇದರ ಭಾಗವಾಗಿ ಕಂಪನಿ ಸಾರ್ವಜನಿಕ ಷೇರುದಾರರಿಂದ ಷೇರುಗಳನ್ನು ಸ್ವಾಧೀನ ಪಡಿಸಿಕೊಳ್ಳಲು ಓಪನ್‌ ಆಫರ್‌ ನೀಡಿದ್ದು  ಆಫರ್‌ ಮೌಲ್ಯವು ಸಾವಿರಾರು ಕೋಟಿ ರೂಪಾಯಿಗಳಷ್ಟಿದೆ.

ಸ್ವಿಸ್ ಸಂಸ್ಥೆ Holcim ನ ಭಾರತೀಯ ಭಾಗವಾಗಿರೋ ಎರಡು ಕಂಪನಿಗಳಾದ ACC Ltd ಮತ್ತು Ambuja Cements ನ ಸಾರ್ವಜನಿಕ ಷೇರುದಾರರಿಂದ ಶೇ.26 ರಷ್ಟು ಹೆಚ್ಚುವರಿ ಪಾಲನ್ನು ಸ್ವಾಧೀನ ಪಡಿಸಿಕೊಳ್ಳಲು ಅದಾನಿ ಸಮೂಹವು 31,000 ಕೋಟಿ ರೂ. ಆಫರ್‌ ನೀಡಿದೆ.

ಈ ಹಿಂದೆ ಮೇ ತಿಂಗಳಲ್ಲಿ Holcim Ltd ನ ಭಾರತೀಯ ವ್ಯವಹಾರವನ್ನು ಸ್ವಾಧೀನ ಪಡಿಸಿಕೊಳ್ಳಲು ನಿಯಂತ್ರಣದ ಪಾಲು ಹೊಂದಲು USD 10.5 ಶತಕೋಟಿಗೆ ಒಪ್ಪಂದ ಮಾಡಿಕೊಂಡಿರುವುದಾಗಿ ಕಂಪನಿಯು ಘೋಷಿಸಿತ್ತು. ಮತ್ತು ಹೆಚ್ಚುವರಿ ಪಾಲನ್ನು ಸ್ವಾಧೀನ ಪಡಿಸಿಕೊಳ್ಳಲು ಭಾರತೀಯ ಮಾರುಕಟ್ಟೆ ನಿಯಂತ್ರಕ ಸೆಬಿ (SEBI) ಮುಕ್ತ ಕೊಡುಗೆ ನೀಡಲು ಒಪ್ಪಿಗೆ ನೀಡಿತ್ತು.

ಈ ಹಿನ್ನೆಲಯಲ್ಲಿ 26ಶೇಕಡಾ ಹೆಚ್ಚುವರಿ ಷೇರನ್ನು ಸ್ವಾಧೀನಪಡಿಸಿಕೊಳ್ಳಲು ಅದಾನಿ ಸಮೂಹವು 31ಸಾವಿರ ಕೋಟಿ ರೂ.ಗಳ ಆಫರ್‌ ನೀಡಿದೆ. ಷೇರುಗಳ ಟೆಂಡರ್ ಆಗಸ್ಟ್ 26 ರಿಂದ ಪ್ರಾರಂಭವಾಗಲಿದ್ದು ಸೆಪ್ಟೆಂಬರ್ 9, 2022 ರಂದು ಕೊನೆಗೊಳ್ಳಲಿದೆ ಎಂದು ಮುಕ್ತ ಕೊಡುಗೆಯ ಮ್ಯಾನೇಜರ್‌ ಗಳು ತಿಳಿಸಿದ್ದಾರೆ.

ಮೇ ತಿಂಗಳಲ್ಲಿ, ಅದಾನಿ ಗ್ರೂಪ್ ಅಂಬುಜಾ ಸಿಮೆಂಟ್ಸ್‌ನ 26ಶೇ. ಷೇರುಗಳು ಅಂದರೆ 51.63 ಕೋಟಿ ಈಕ್ವಿಟಿ ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಪ್ರತಿ ಷೇರಿಗೆ 385 ರೂ. ಮತ್ತು ಎಸಿಸಿಯ 4.89 ಕೋಟಿ ಷೇರುಗಳನ್ನು ಸ್ವಾಧೀನ ಪಡಿಸಿಕೊಳ್ಳಲು ಪ್ರತಿ ಷೇರಿಗೆ ರೂ 2,300 ರಂತೆ ಓಪನ್ ಆಫರ್ ನೀಡಿತ್ತು. ಈ ಕೊಡುಗೆಯ ಒಟ್ಟೂ ಮೊತ್ತವು 31 ಸಾವಿರ ಕೋಟಿ ರೂ ಆಗಿದ್ದು ಇದರಲ್ಲಿ ಅಂಬುಜಾ ಸಿಮೆಂಟ್ಸ್‌ ಗೆ 19,879.57 ಕೋಟಿ ರೂ. ಹಾಗೂ ಎಸಿಸಿ ಗಾಗಿ 11,259.97 ಕೋಟಿ ರೂ. ಮೊತ್ತದ ಓಪನ್‌ ಆಫರ್‌ ನೀಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!