ತನ್ನನ್ನು ರಕ್ಷಿಸಿದ ಜೆಸಿಬಿಗೆ ಆನೆಯ ಮುದ್ದು ಮುದ್ದು ಥ್ಯಾಂಕ್ಸ್:‌ ವೈರಲ್‌ ವಿಡಿಯೋ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನಾವು ಕಷ್ಟದಲ್ಲಿದ್ದಾಗ, ನಮಗೆ ಸಹಾಯ ಮಾಡುವವರಿಗೆ ನಾವು ಕೃತಜ್ಞರಾಗಿರುತ್ತೇವೆ. ಇದು ಮಾನವನ ಲಕ್ಷಣ. ಆದರೆ ಪ್ರಾಣಿಗಳು…ಅವೂ ಅಷ್ಟೆ ತಮ್ಮನ್ನು ಸಾಕಿ ಬೆಳೆಸಿದವರಿಗೆ ನಿಷ್ಠೆಯಿಂದ ಇರುವುದಲ್ಲದೆ, ಸಹಾಯ ಮಾಡಿದವರಿಗೆ ತಮ್ಮದೇ ದಾಟಿಯಲ್ಲಿ  ಮನುಷ್ಯರಿಗೆ ಧನ್ಯವಾದ ಹೇಳುತ್ತವೆ. ವೈರಲ್‌ ವಿಡಿಯೋದಲ್ಲಿ ಒಂಟಿ ಸಲಗವೊಂದು ತನ್ನನ್ನು ರಕ್ಷಿಸಿದ ಜೆಸಿಬಿಯನ್ನು ಸ್ಪರ್ಶಿಸಿ ವಿಶೇಷ ಕೃತಜ್ಞತೆ ಸಲ್ಲಿಸಿತ್ತು.

ಗೇಬ್ರಿಯಲ್ ಕಾರ್ನೋ ಎಂಬ ವ್ಯಕ್ತಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಆನೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಆನೆಯೊಂದು ದೊಡ್ಡ ಗುಂಡಿಗೆ ಬಿದ್ದಿದೆ. ಅಲ್ಲಿಂದ ಹೊರಬರಲು ಸಾಕಷ್ಟು ಒದ್ದಾಡಿದರೂ ಹೊರಬರಲು ಸಾಧ್ಯವಾಗಿಲ್ಲ. ಸ್ಥಳೀಯರು ಆನೆಯನ್ನು ರಕ್ಷಿಸಲು ಜೆಸಿಬಿ ಮೂಲಕ ಸಹಾಯ ಮಾಡಿದ್ದಾರೆ. ಗುಂಡಿಯಿಂದ ಹೊರಬಂದ ಆನೆ ಸ್ವಲ್ಪ ಮುಂದೆ ಹೋಗಿ ಹಿಂತಿರುಗಿ ಬಂದು ಸೊಂಡಿಲಿನಿಂದ ಜೆಸಿಬಿಯನ್ನು ಮುಟ್ಟಿ ಧನ್ಯವಾದ ಹೇಳಿತು. ಈ ವಿಡಿಯೋ ನೋಡಿದ ನೆಟ್ಟಿಗರು ತಮ್ಮ ಅಭಿಪ್ರಾಯವನ್ನು ಕಾಮೆಂಟ್‌ಗಳೊಂದಿಗೆ ನೀಡಿದ್ದಾರೆ. ಕೆಲವರು ಆನೆ ಕೃತಜ್ಞತೆ ಸಲ್ಲಿಸಿದ ರೀತಿಗೆ ಮರು ಟ್ವೀಟ್ ಮಾಡಿ ಸೂಪರ್, ಅದ್ಭುತ ದೃಶ್ಯ ಎಂದು ಹೇಳಿದ್ದಾರೆ. ಈ ದೃಶ್ಯ ಭಾರತದ ಹಳ್ಳಿಯೊಂದರಲ್ಲಿ ನಡೆದಿದೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!