ಈ ಮಳೆಗಾಲದ ವೆದರ್‌ಗೆ ಬಿಸಿ ಬಿಸಿಯಾದ ತಿಳಿಬೇಳೆ ಸಾರು ಜೊತೆಗೆ ಅನ್ನ ಹಾಗೂ ಬಜ್ಜಿ ಇದ್ದರೆ ಸ್ವರ್ಗಕ್ಕೆ ಮೂರೇ ಗೇಣು! ಎಷ್ಟೋ ಮಂದಿ ಈಗಿನ್ನೂ ಅಡುಗೆ ಕಲಿಯುತ್ತಿರುವವರು ಅಥವಾ ಕಲಿತು ಬೋರಾಗಿ ಹೊಸ ರೆಸಿಪಿ ಟ್ರೈ ಮಾಡ್ಬೇಕು ಎಂದುಕೊಂಡರೆ ನಮ್ಮ ಸಿಂಪಲ್ ಹಾಗೂ ಟೇಸ್ಟಿ ತಿಳಿ ಬೇಳೆ ಸಾರಿನ ರೆಸಿಪಿಯನ್ನೊಮ್ಮೆ ಕಣ್ಣಾಡಿಸಿ, ನೆಕ್ಸ್ಟ್ ಟೈಮ್ ಏನು ಮಾಡೋದು ಅಂತ ಅಡುಗೆ ಮನೆಯಲ್ಲಿ ಬ್ಲಾಂಕ್ ಆಗಿ ನಿಂತಾಗ ಈ ರೆಸಿಪಿ ನೆನಪಾಗುತ್ತದೆ..
ಸಾಮಾಗ್ರಿಗಳು: ತೊಗರಿಬೇಳೆ, ಈರುಳ್ಳಿ, ಟೊಮ್ಯಾಟೊ, ಕಾಯಿ, ಖಾರದಪುಡಿ, ಸಾಂಬಾರ್ ಪುಡಿ, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ
ಮೊದಲು ಕುಕ್ಕರ್‌ಗೆ ಈರುಳ್ಳಿ, ಟೊಮ್ಯಾಟೊ, ತೊಗರಿಬೇಳೆ , ಅರಿಶಿಣ, ಉಪ್ಪು ಹಾಗೂ ಜೀರಿಗೆ ಹಾಕಿ ಜೊತೆಗೆ ಒಂದು ಲೋಟದಷ್ಟು ನೀರನ್ನು ಹಾಕಿ ಮೂರು ವಿಶಲ್ ಕೂಗಿಸಿ ( ಯಾವುದೇ ಅಡುಗೆ ಮಾಡಿದರೂ ಸಣ್ಣ ಉರಿಯಲ್ಲಿ ಇಟ್ಟುಕೊಂಡರೆ ರುಚಿ ಅದ್ಭುತವಾಗಿರುತ್ತದೆ)
ಆನಂತರ ಮಿಕ್ಸಿಗೆ ಕಾಯಿ, ಸಾಂಬಾರ್ ಪುಡಿ, ಖಾರದಪುಡಿ, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ.
ನಂತರ ಬೆಂದ ಬೇಳೆಗೆ ಈ ಮಿಕ್ಸಿಯ ಮಸಾಲೆಯನ್ನು ಹಾಕಿ, ಆನಂತರ ಕುದಿಯಲು ಬಿಡಿ, ಸ್ವಲ್ಪ ಹುಣಸೆಹುಳಿ, ಬೆಲ್ಲ ಹಾಕಿ ಒಗರಣೆ ಕೊಟ್ರೆ ಸಾರು ರೆಡಿ



